ಮರ ಬಿದ್ದು ಡಿಸಿ ಬಂಗಲೆಗೆ ಹಾನಿ
ಕೊಡಗು

ಮರ ಬಿದ್ದು ಡಿಸಿ ಬಂಗಲೆಗೆ ಹಾನಿ

June 11, 2018

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಬಂಗಲೆ ಮೇಲೆ ಮರ ಬಿದ್ದಿದ್ದು, ಬಂಗಲೆಗೆ ಹಾನಿ ಸಂಭವಿಸಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಬಂಗಲೇ ಆವರಣದಲ್ಲಿದ್ದ ಮರ ಮುರಿದು ಬಿದ್ದ ಪರಿಣಾಮ ಕಾವಲು ಸಿಬ್ಬಂದಿ ಕೊಠಡಿ ಸಂಪೂರ್ಣ ಧ್ವಂಸಗೊಂಡಿದೆ.

ಕಾವಲುಗಾರ ಕೊಠಡಿಯಲ್ಲಿ ಇಲ್ಲದ ಸಂದರ್ಭ ಮರ ಬಿದ್ದಿದ್ದರಿಂದ ಪ್ರಾಣಹಾನಿ ತಪ್ಪಿದ್ದು, ಜಿಲ್ಲಾಧಿಕಾರಿ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಸಿ ಬಂಗಲೆ ಸಮೀಪ ಒಟ್ಟು 4 ಮರಗಳು ಉರುಳಿ ಬಿದ್ದಿದ್ದು, ಮಾಹಿತಿ ಅರಿತ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಿದ್ದಾರೆ. ಮಳೆ ಅವಾಂತರ ಜಿಲ್ಲಾಧಿಕಾರಿಗಳಿಗೂ ತಟ್ಟಿದೆ.

Translate »