ರಾಮದಾಸ್‍ಗೆ ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್?: ಚಿತ್ರನಟಿ ಮಾಳವಿಕ ಭಾರೀ ಲಾಭಿ
ಮೈಸೂರು

ರಾಮದಾಸ್‍ಗೆ ಕೆ.ಆರ್. ಕ್ಷೇತ್ರದ ಬಿಜೆಪಿ ಟಿಕೆಟ್?: ಚಿತ್ರನಟಿ ಮಾಳವಿಕ ಭಾರೀ ಲಾಭಿ

April 19, 2018

ಮೈಸೂರು: ಮೈಸೂರು ಕೆ.ಆರ್. ಕ್ಷೇತ್ರದಲ್ಲಿ ಮಾಜಿ ಸಚಿವ ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭರವಸೆ ನೀಡಿದ್ದು, ನಾಳೆ ಸಂಜೆ ವೇಳೆಗೆ ಬಿಡುಗಡೆಯಾಗುವ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ರಾಮದಾಸ್ ಹೆಸರು ಇರುವುದು ಖಚಿತ ಎಂದು ಬಲ್ಲ ಮೂಲಗಳು ತಿಳಿಸಿವೆ. ಮಧ್ಯೆ ಕೆಲ ರಾಜ್ಯ ಮುಖಂಡರ ಮೂಲಕ ಚಿತ್ರ ನಟಿ ಮಾಳವಿಕ ಅವಿನಾಶ್ ಲಾಭಿ ನಡೆಸಿದ್ದು, ತಮಗೆ ಕೆ.ಆರ್. ಕ್ಷೇತ್ರದ ಟಿಕೆಟ್ ಲಭಿಸುವುದು ಖಾತರಿ ಎಂದು ಅವರು ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಲ ಮಾಧ್ಯಮಗಳಲ್ಲಿ ಅವರ ಹೆಸರು ಚಲಾವಣೆಗೆ ಬಂದಿದೆ. ಆದರೆ, ಕೆ.ಆರ್. ಕ್ಷೇತ್ರದ ಟಿಕೆಟ್ ರಾಮದಾಸ್ ಅವರಿಗೇ ಲಭಿಸುವುದು ಗ್ಯಾರಂಟಿ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೆ.ಆರ್.ಕ್ಷೇತ್ರದಲ್ಲಿ ಸುಮಾರು 50 ಸಾವಿರ ಕುಟುಂಬ ಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಎಸ್.. ರಾಮದಾಸ್ ಅವರಿಗೆ ಟಿಕೆಟ್ ನೀಡಿದರೆ, ಅವರ ಗೆಲುವು ನಿಶ್ಚಿತ ಎಂಬುದು ಕ್ಷೇತ್ರದ ಕಾರ್ಯಕರ್ತರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Translate »