ವಿರಾಜಪೇಟೆ ಕಾಂಗ್ರೆಸ್‍ನಲ್ಲಿ ಬಂಡಾಯ: ಸಿಎಂ ಕಾರಿಗೆ ಹರೀಶ್ ಬೋಪಣ್ಣ ಬೆಂಬಲಿಗರ ಮುತ್ತಿಗೆ
ಕೊಡಗು

ವಿರಾಜಪೇಟೆ ಕಾಂಗ್ರೆಸ್‍ನಲ್ಲಿ ಬಂಡಾಯ: ಸಿಎಂ ಕಾರಿಗೆ ಹರೀಶ್ ಬೋಪಣ್ಣ ಬೆಂಬಲಿಗರ ಮುತ್ತಿಗೆ

April 19, 2018

ಮೈಸೂರು:  ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ವಿಧಾನಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಅವ ರನ್ನು ಘೋಷಿಸಿ, ಅವರಿಗೆ ಬಿ ಫಾರಂ ನೀಡಿರುವ ಬೆನ್ನಲ್ಲೇ ಬಂಡಾ ಯದ ಕೂಗು ಕೇಳಿ ಬಂದಿದೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರ ಆಪ್ತ ಕಾರ್ಯದರ್ಶಿ ಹರೀಶ್ ಬೋಪಣ್ಣ ಪರ ವಾಗಿ ಸುಮಾರು 150 ರಿಂದ 200 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾರಿಗೆ ಮುತ್ತಿಗೆ ಹಾಕಿ ಹರೀಶ್ ಬೋಪಣ್ಣ ಅವರಿಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಿದ ಕಾರ್ಯ ಕರ್ತರು, ಎಲ್ಲಾ ಸರ್ವೆಗಳೂ ಹರೀಶ್ ಬೋಪಣ್ಣ ಪರವಾಗಿಯೇ ಇದ್ದರೂ, ಸೋಲುವ ಅಭ್ಯರ್ಥಿ ಯಾದ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಅದನ್ನು ಬದಲಾಯಿಸಿ ಹರೀಶ್ ಬೋಪಣ್ಣ ಅವರಿಗೆ ಟಕೆಟ್ ಕೊಡಬೇಕೆಂದು ಆಗ್ರಹಿಸಿದರೆಂದುಮೈಸೂರು ಮಿತ್ರನಿಗೆ ಹರೀಶ್ ಬೋಪಣ್ಣ ತಿಳಿಸಿದರು.

ಕಾರ್ಯಕರ್ತರಿಗೆ ಉತ್ತರಿಸಿದ ಮುಖ್ಯಮಂತ್ರಿ ಗಳು ಈಗಾಗಲೇ ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಆದರೂ ತಾವು ಸಂಬಂಧ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅವರ ಜೊತೆ ಮಾತನಾಡುವುದಾಗಿ ತಿಳಿಸಿದರು ಎಂದು ಹರೀಶ್ ಬೋಪಣ್ಣ ಹೇಳಿದರು.

ಅರುಣ್ ಮಾಚಯ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಕಾರ್ಯಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನನ್ನು ಪಕ್ಷೇತರನಾಗಿ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಆದ್ದರಿಂದ ನಾನು ಕಾರ್ಯಕರ್ತರ ಸಭೆ ನಡೆಸಿ ಇನ್ನೆರೆಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು. ಇಂದು ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಿದ ತಂಡದಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್.ತಿಮ್ಮಯ್ಯ, ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಂಜಿ ಪೂಣಚ್ಚ, ತಾಪಂ ಸದಸ್ಯ ಪ್ರಶಾಂತ್, ಬೆಟೋಳಿ ಗ್ರಾಪಂ ಸದಸ್ಯ ತಿಮ್ಮಯ್ಯ, ಹುದಿಕೇರಿ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ನವೀನ್, ಸಿದ್ದಾಪುರ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ಜಮೀರ್, ಅಮ್ಮತ್ತಿ ವಲಯ ಕಾಂಗ್ರೆಸ್ ಪಿ.ಆರ್.ಶಾಜಿ ಮುಂತಾದವರಿದ್ದರು ಎಂದು ಹರೀಶ್ ಬೋಪಣ್ಣ ತಿಳಿಸಿದರು.

Translate »