ಮೈಸೂರು: ಸ್ಪಾವೊಂದರ ಮೇಲೆ ಶುಕ್ರವಾರ ದಾಳಿ ನಡೆಸಿದ ಪೊಲೀಸರು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿ ಕೊಲ್ಕತ್ತಾ ಮೂಲದ ಇಬ್ಬರು ಮಹಿಳೆಯ ರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಯಡತಾಳು ಗ್ರಾಮದ ಎಂ.ಡಿ. ರಘುನಂದ, ಬೆಂಗಳೂರಿನ ಮೂಡ್ಲು ಪಾಳ್ಯದ ಗೋವಿಂದ ಹಾಗೂ ಚಿತ್ರದುರ್ಗ ಜಿಲ್ಲೆಯ ಹುಲ್ಲೂರು ಗ್ರಾಮದ ಮಧುಕುಮಾರ್ ಬಂಧಿತರು. ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯ ಹೋಟೆಲ್ ಮೈಸೂರು ಕಾಂಪ್ಲೆಕ್ಸ್ ಕಟ್ಟಡದ ಸ್ಪಾವೊಂದರ ಮೇಲೆ ದಾಳಿ ನಡೆಸಿದ ಪೊಲೀಸರು, ಬಾಡಿ ಮಸಾಜ್ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದುದು ಕಂಡುಬಂದ ಹಿನ್ನೆಲೆ ಯಲ್ಲಿ ಮೂವರನ್ನು ಬಂಧಿಸಿ, ಇಬ್ಬರು ಮಹಿಳೆಯರನ್ನು ರಕ್ಷಿಸಿ ದರು. ಸಿಸಿಬಿ ಇನ್ಸ್‍ಪೆಕ್ಟರ್ ಎ. ಮಲ್ಲೇಶ್, ಲಷ್ಕರ್ ಠಾಣೆ ಇನ್ಸ್ ಪೆಕ್ಟರ್ ಹೆಚ್.ಆರ್. ವಿವೇಕಾನಂದ, ಸಬ್ ಇನ್ಸ್‍ಪೆಕ್ಟರ್ ಪೂಜಾ ಹತ್ತರಕಿ, ಸಿಬ್ಬಂದಿಗಳಾದ ಶ್ರೀನಿವಾಸ, ಜ್ಯೋತಿ, ಲಿಂಗ ರಾಜು ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.