ವ್ಯಕ್ತಿ ಆತ್ಮಹತ್ಯೆ
ಮೈಸೂರು

ವ್ಯಕ್ತಿ ಆತ್ಮಹತ್ಯೆ

January 25, 2019

ಮೈಸೂರು: ವ್ಯಕ್ತಿ ಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂ ರಿನ ಬೋಗಾದಿಯಲ್ಲಿ ನಡೆದಿದೆ. ಬೋಗಾದಿ 2ನೇ ಹಂತದ ನಿವಾಸಿ ಶಿವಶಂಕರ್ (32) ಆತ್ಮಹತ್ಯೆ ಮಾಡಿ ಕೊಂಡವರು. ಬುಧವಾರ ಪತ್ನಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಎಲೆಕ್ಟ್ರಿಷಿ ಯನ್ ಆಗಿ ಕೆಲಸ ಮಾಡಿಕೊಂಡಿದ್ದ ಶಿವಶಂಕರ್, ಕೆಲ ವರ್ಷಗಳ ಹಿಂದೆ ಆಯತಪ್ಪಿ ಬಿದ್ದಿದ್ದರು. ಚಿಕಿತ್ಸೆ ಪಡೆಯುತ್ತಿ ದ್ದರಾದರೂ ಅವರು ನೆನಪಿನ ಶಕ್ತಿ ಕಳೆದು ಕೊಂಡಿದ್ದರು. ಇದರಿಂದ ಮಾನಸಿಕ ಖಿನ್ನ ತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿ ರಬಹುದು ಎಂದು ಹೇಳಲಾಗುತ್ತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿ ರುವ ಸರಸ್ವತಿಪುರಂ ಠಾಣೆ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Translate »