ಶ್ರೀನಿವಾಸಪ್ರಸಾದ್, ಪ್ರತಾಪ್‍ಸಿಂಹ, ಸದಾನಂದಗೌಡ, ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಅವಕಾಶ
ಮೈಸೂರು

ಶ್ರೀನಿವಾಸಪ್ರಸಾದ್, ಪ್ರತಾಪ್‍ಸಿಂಹ, ಸದಾನಂದಗೌಡ, ಶೋಭಾ ಕರಂದ್ಲಾಜೆ ಸ್ಪರ್ಧಿಸಲು ಅವಕಾಶ

March 21, 2019

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್ ಅವರಿಗೆ ಬೆಂಬಲ ನೀಡದಿರಲು ನಿರ್ಧರಿಸಿ ರುವ ರಾಷ್ಟ್ರೀಯ ಬಿಜೆಪಿ ತನ್ನ ಅಭ್ಯರ್ಥಿ ಯನ್ನು ಕಣಕ್ಕಿಳಿಸಲು ನಿರ್ಧರಿಸಿರುವುದಲ್ಲದೆ, ಕರ್ನಾಟಕದ ಹಾಲಿ ಎಲ್ಲಾ ಸಂಸದರಿಗೂ ಮತ್ತೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿದೆ.

ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅಧ್ಯಕ್ಷತೆ ಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಲ್ಲದೆ, ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ಅಧಿಕೃತವಾಗಿ ಪಟ್ಟಿ ಹೊರ ಬೀಳಬೇಕಾ ಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ ಅವರ ಮಾತಿಗೆ ಮತ್ತು ಶಿಫಾರಸ್ಸಿಗೆ ಕೇಂದ್ರ ಘಟಕ ಸ್ಪಂದಿಸಿದೆ. ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಅವರ ಸಲಹೆಗೆ ಮಣಿದಿರುವ ಬಿಜೆಪಿ, ಅವರ ಸಂಬಂಧಿ ಹಾಗೂ ಉದ್ಯಮಿ ದೇವೇಂದ್ರಪ್ಪ ಅವರನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದ್ದು, ಇಲ್ಲಿ ಶ್ರೀರಾಮುಲು ಕುಟುಂಬವನ್ನು ದೂರವಿಟ್ಟಿದೆ.

ಉಪಚುನಾವಣೆಯಲ್ಲಿ ಶ್ರೀರಾಮುಲು ಅವರ ಸಹೋದರಿ ಭಾರೀ ಅಂತರದಿಂದ ಸೋತ ಹಿನ್ನೆಲೆಯಲ್ಲಿ ಮತ್ತೆ ಆ ಕುಟುಂಬವನ್ನು ಚುನಾ ವಣೆ ಕಣಕ್ಕೆ ತರಲು ವರಿಷ್ಠರು ಆಸಕ್ತಿ ತೋರಿಲ್ಲ.

ಹಳೇ ಮುಖಗಳ ಜೊತೆಗೆ ಕೆಲವು ಹೊಸ ಮುಖಗಳಿಗೂ ಅವಕಾಶ ಮಾಡಿರುವುದಲ್ಲದೆ, ಪಕ್ಷದ ಶಾಸಕರು ಮತ್ತು ಜಿಲ್ಲಾ ಕಾರ್ಯಕರ್ತರು ಕೆಲವೆಡೆ ವಿರೋಧ ಮಾಡಿದರೂ, ಉಡುಪಿ-ಚಿಕ್ಕಮಗಳೂರಲ್ಲಿ ಶೋಭಾ ಕರಂದ್ಲಾಜೆಗೂ, ವಿಜಯಪುರದಲ್ಲಿ ಕೇಂದ್ರ ಸಚಿವ ರಮೇಶ್ ಜಿಗ ಜಿಣಗಿ ಅವರಿಗೆ ಮತ್ತೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ಮತ್ತೆ ಕಣಕ್ಕಿಳಿಯಲು ಅವಕಾಶ ಮಾಡಿಕೊಟ್ಟಿದ್ದರೆ, ಚಾಮರಾಜನಗರ ಕ್ಷೇತ್ರಕ್ಕೆ ಹಳೆ ಹುಲಿ, ಕೇಂದ್ರದ ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಈ ಬಾರಿ ಕಣಕ್ಕಿಳಿಯಲಿದ್ದಾರೆ. ಒಂದು ಕಾಲದಲ್ಲಿ ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಭಂಟನಾಗಿದ್ದ, ಛಲವಾದಿ ನಾರಾಯಣ ಸ್ವಾಮಿ ಅವರನ್ನು ಕೋಲಾರ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ.

ದಕ್ಷಿಣ ಕನ್ನಡದಲ್ಲಿ ನಳಿನ್‍ಕುಮಾರ್ ಕಟೀಲ್‍ಗೂ ಟಿಕೆಟ್ ನೀಡಬಾರದೆಂಬ ಅಭಿಪ್ರಾಯ ವ್ಯಕ್ತವಾ ಗಿತ್ತು. ಆದರೆ ಆರ್‍ಎಸ್‍ಎಸ್ ಅವರ ಬೆನ್ನಿಗೆ ನಿಂತಿದ್ದರಿಂದ ಅನಿವಾರ್ಯವಾಗಿ ಮಣೆ ಹಾಕ ಲಾಗಿದೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಯಲ್ಲೂ ಇದೇ ಕೂಗು ಕೇಳಿತ್ತು. ಆದರೆ ವರಿಷ್ಠರು ಇದಕ್ಕೆ ಸ್ಪಂದಿಸಿಲ್ಲ. ಉಗ್ರ ಹಿಂದುತ್ವವಾದವನ್ನು ಪ್ರತಿಪಾದನೆ ಮಾಡುವಂಥವರಿಗೆ ಟಿಕೆಟ್ ಕೈತಪ್ಪಿದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಕಾರಣಕ್ಕಾಗಿ ವಿಧಿಯಿಲ್ಲದೆ ಹೆಗಡೆಗೆ ಟಿಕೆಟ್ ನೀಡಲಾಗಿದೆ.

ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ, ಬಾಗಲಕೋಟೆಯಲ್ಲಿ ಗದ್ದಿಗೌಡರ್, ಕೊಪ್ಪಳ ದಲ್ಲಿ ಕರಡಿ ಸಂಗಣ್ಣಗೂ ಟಿಕೆಟ್ ಕೊಡಬಾರ ದೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹಾಲಿ ಸಂಸ ದರಿಗೆ ಟಿಕೆಟ್ ತಪ್ಪಿಸಿದರೆ ಹೊಸ ಅಭ್ಯರ್ಥಿ ಗಳನ್ನು ಹುಡುಕಬೇಕು. ಇದು ಮತ್ತೊಂದು ತಲೆನೋವಿಗೆ ಕಾರಣವಾಗುವುದರಿಂದ ಹಾಲಿ ಅಭ್ಯರ್ಥಿಗಳಿಗೇ ಮಣೆ ಹಾಕಲಾಗಿದೆ.

Translate »