ಮೈಸೂರು, ಫೆ.3(ಎಸ್‍ಪಿಎನ್)- ಉನ್ನತ ಅಧಿಕಾರ ಮತ್ತು ಹುದ್ದೆ ಹಿಂದೆ ಹೊಗ ಳಿಕೆ, ಕುತಂತ್ರ, ಸ್ವಾರ್ಥ ಇರುತ್ತದೆ. ಹಾಗಾಗಿ ಹಿಂದೆ ಸುತ್ತುವ ಹೊಗಳುಭಟರು, ಶಾಲು ಹೊದಿಸುವವರ ಬಗ್ಗೆ ಅಧಿಕಾರಸ್ಥರು ಎಚ್ಚರದಿಂದಿರಬೇಕೆಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಕಿವಿಮಾತು ಹೇಳಿದರು.
ಜೆಎಲ್‍ಬಿ ರಸ್ತೆಯ ಇಂಜಿನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ನೂತನ ಕೆಪಿ ಎಸ್‍ಸಿ ಸದಸ್ಯ ರಂಗರಾಜ ವನದುರ್ಗ ಅವರಿಗೆ ಅಭಿಮಾನಿ ಬಳಗ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತ ನಾಡಿ, ತಳ ಸಮುದಾಯದವರು ಉನ್ನತ ಹುದ್ದೆ ಅಲಂಕರಿಸುವುದು ಸಾಮಾನ್ಯ ಮಾತಲ್ಲ. ಅದರಲ್ಲೂ ಕೆಪಿಎಸ್‍ಸಿ ಸಂಸ್ಥೆಯ ಸದಸ್ಯರಾಗಿ ಆಯ್ಕೆಯಾಗುವುದು ರಂಗರಾಜ ರಂತಹ ಸಾಧಕರಿಗೆ ಮಾತ್ರ ಎಂದರು. ಕುವೆಂಪು ಅವರು `ತೊಲಗಾಚೆ ಕೀರ್ತಿ ಶನಿ’ ಎಂದಿದ್ದನ್ನು ನೆನಪಿಸಿದರು.
ಸಂಸ್ಕøತ ವಿವಿ ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್ ಮಾತನಾಡಿ, ರಂಗರಾಜ ವನದುರ್ಗ ಪ್ರತಿಭೆ ಗುರುತಿಸಿ ರಾಜ್ಯ ಸರ್ಕಾರ ಸೂಕ್ತ ಹುದ್ದೆಯನ್ನೇ ನೀಡಿದೆ. ಈ ಕಾಲ ಘಟ್ಟದಲ್ಲಿ ಉನ್ನತ ಸ್ಥಾನ ಪಡೆಯುವುದು, ನಿಭಾಯಿಸುವುದು ಕಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ, ಮೈಸೂರು ವಿವಿ ಪ್ರಾಣಿ ವಿಜ್ಞಾನ ಅಧ್ಯ ಯನ ವಿಭಾಗದ ಪ್ರೊ.ಮಾಲಿನಿ, ಕರ್ನಾ ಟಕ ರಾಜ್ಯ ನಾಯಕರ ಯುವ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು, ಮುಖಂಡರಾದ ಶಿವಕುಮಾರ್, ಚನ್ನ ನಾಯಕ, ಕುಮಾರ್, ಸ್ವಾಮಿ ನಾಯಕ, ಮಹೇಶ್ ಕಳಲೆ ವೇದಿಕೆಯಲ್ಲಿದ್ದರು.