ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ
ಮೈಸೂರು

ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ

January 8, 2020

ಮೈಸೂರು,ಜ.7(ಎಸ್‍ಪಿಎನ್)-ಜನ ಜಾಗೃತಿಗೆ ರಂಗಭೂಮಿ ಅತ್ಯುತ್ತಮ ಮಾಧ್ಯಮ ಎಂದು ಮಾಜಿ ಸ್ಪೀಕರ್ ಕೃಷ್ಣ ಅಭಿಪ್ರಾಯಪಟ್ಟರು.

ಮೈಸೂರು ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ಮೈಸೂರು ಸಂಚಲನ ಸಾಂಸ್ಕøತಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಧಾರವಾಡದ ಕರ್ನಾ ಟಕ ಬಾಲವಿಕಾಸ ಅಕಾಡೆಮಿ ಸಹಯೋಗ ದೊಂದಿಗೆ ಆಯೋಜಿಸಿರುವ ಮಕ್ಕಳ ನಾಟಕೋತ್ಸವದ 2ನೇ ದಿನವಾದ ಮಂಗಳ ವಾರ ಕೆ.ಆರ್.ಪೇಟೆಯ ಉದಯರವಿ ಟ್ರಸ್ಟ್‍ನ ಮಕ್ಕಳ ಅಭಿನಯದ ರಂಗಕರ್ಮಿ ಎನ್.ಶ್ರೀನಿ ವಾಸ ಉಡುಪ ನಿರ್ದೇಶನದ `ಹಿಡಿಂಬನ ತೋಟ’ ನಾಟಕಕ್ಕೆ ಚಂಡೆ ಬಾರಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದರು.

ಹಿಂದಿನ ಕಾಲದಲ್ಲಿ ಗ್ರಾಮೀಣ ಪ್ರದೇ ಶದ ಸಮಸ್ಯೆಗಳು ಊರ ಮುಂದಿನ ಜಗ್ಲಿ ಕಟ್ಟೆ ಗಳಲ್ಲಿ ಅಥವಾ ಬೀದಿ ನಾಟಕಗಳ ಮೂಲಕ ಆಡಳಿತ ಶಾಹಿ ಗಮನ ಸೆಳೆಯಲಾಗುತ್ತಿತ್ತು. ಇದೀಗ ಮಕ್ಕಳ ರಂಗಭೂಮಿ ಮೂಲಕ ಗ್ರಾಮೀಣ ಸಮಸ್ಯೆಗಳನ್ನು ಬಿಂಬಿಸುವ ನಾಟಕ ಗಳನ್ನು ಪ್ರದರ್ಶಿಸಿ ಆಡಳಿತ ಶಾಹಿಯನ್ನು ಎಚ್ಚರಿ ಸುತ್ತಿರುವುದು ಉತ್ತಮ ಕಾರ್ಯ ಎಂದರು.

Theater is the best medium for mass awareness-1

ರಂಗಭೂಮಿ ಮೂಲಕ ಮಕ್ಕಳನ್ನು ಸದಾ ಕ್ರಿಯಾಶೀಲರಾಗುವಂತೆ ಮಾಡಲು ರಂಗ ಭೂಮಿ ಉತ್ತಮ ವೇದಿಕೆಯಾಗಲಿದೆ. ಕೆ.ಆರ್. ಪೇಟೆಯ ಉದಯರವಿ ಟ್ರಸ್ಟ್ ನಾಟಕದ ಮೂಲಕ ಮಕ್ಕಳ ಪ್ರತಿಭೆಯನ್ನು ಗುರುತಿಸಿರುವುದು ಮೆಚ್ಚು ವಂತಹದ್ದು ಎಂದರು. ಕೆ.ಆರ್.ಪೇಟೆಯ ಉದಯ ರವಿ ಟ್ರಸ್ಟ್‍ನ ಮಕ್ಕಳು `ಹಿಡಿಂಬನ ತೋಟ’ ನಾಟಕವನ್ನು ಅಮೋಘವಾಗಿ ಅಭಿನ ಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕೆ.ಆರ್.ಪೇಟೆ ಕ್ಷೇಮಾಭಿ ವೃದ್ಧಿ ಸಂಘದ ಅಧ್ಯಕ್ಷ ಡಿ.ಆರ್.ವೆಂಕ ಟೇಶ್, ಶಿಕ್ಷಕ ಅಂಚಿ ಸಣ್ಣಸ್ವಾಮಿಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಲ್. ಮೋಹನ್, ಹಿರಿಯ ರಂಗಕರ್ಮಿ ಕೆ.ಜಿ. ನಾರಾಯಣ ಕಿಕ್ಕೇರಿ, ರಂಗನಿರ್ದೇಶಕ ಲೋಕನಾಥ್ ಸೋಗಂ, ಸಂಚಲನ ಸಂಸ್ಥೆಯ ದೀಪಕ್ ಮೈಸೂರು ಉಪಸ್ಥಿತರಿದ್ದರು.

Translate »