`ಛಾಯಾ ಸಂಜೆ’ಯಲ್ಲಿ ಸಾಹಸ, ನೃತ್ಯ, ಸಂಗೀತದ ರಸಧಾರೆ
ಮೈಸೂರು

`ಛಾಯಾ ಸಂಜೆ’ಯಲ್ಲಿ ಸಾಹಸ, ನೃತ್ಯ, ಸಂಗೀತದ ರಸಧಾರೆ

January 8, 2020

ಮೈಸೂರು,ಜ.7(ವೈಡಿಎಸ್)- ಸುಂದರ ಸಂಜೆಯ ವಿದ್ಯುತ್ ದೀಪಗಳಿಂದ ಅಲಂ ಕೃತಗೊಂಡಿದ್ದ ವೇದಿಕೆಯಲ್ಲಿ ಇಬ್ಬರು ಯುವ ಪ್ರತಿಭೆಗಳ ಮೈನವೀರೇಳಿಸುವ ಸಾಹಸಕ್ಕೆ ಪ್ರೇಕ್ಷಕರು ರೋಮಾಂಚನಗೊಂಡರು.

ಕಲಾಮಂದಿರದಲ್ಲಿ ಮಂಗಳವಾರ ಸಂಜೆ ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವೀಡಿಯೋಗ್ರಾಫರ್ಸ್ ಅಸೋಸಿ ಯೇಷನ್‍ನ 9ನೇ ವಾರ್ಷಿಕೋತ್ಸವದ `ಛಾಯಾ ಸಂಜೆ’ಯಲ್ಲಿ ಸ್ನೇಹಾಶೇಖರ್ ಮತ್ತು ವಿನೀಶ್ ಯುವ ಪ್ರತಿಭೆಗಳ ಸಾಹಸ ಪ್ರದ ರ್ಶನ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿಸಿದವು.

ಮೊದಲಿಗೆ ಮಲ್ಲಕಂಬ ಸಾಹಸಪ್ರದ ರ್ಶನದಲ್ಲಿ ವಿನೀತ್, ಕಂಬವನ್ನು ಉಲ್ಟಾ ಹತ್ತು ವುದು, ಕಂಬದ ತುದಿಯಲ್ಲಿ ನಿಂತು ನಮಸ್ಕರಿ ಸುವುದು, ಪಲ್ಟಿ ಹೊಡೆಯುವ ಸಾಹಸ ಪ್ರದರ್ಶಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.

ಮತ್ತೋರ್ವ ಸಾಹಸಿ ಸ್ನೇಹಾಶೇಖರ್, ಸಾಹಸಮಯ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ನಂತರದಲ್ಲಿ ಬಣ್ಣ-ಬಣ್ಣದ ಉಡುಗೆ ಗಳನ್ನು ತೊಟ್ಟು ವೇದಿಕೆಗೆ ಆಗಮಿಸಿದ ಚಿಣ್ಣರು, `ಏಳು ಮಲೆ ಮ್ಯಾಲೇರಿ ಕುಂತ ನಮ್ಮ ಮಾದೇವಾ, ನಗು ಮಲೆ ಮ್ಯಾಲೇರಿ ನಿದ್ದೆ ಮಾಡೋ ಮಾದೇವಾ’, ಸರಿಗಮಪ ಖ್ಯಾತಿಯ ಯುವ ಗಾಯಕಿ ನಯನಾ `ತಳಮಳವಿದು ಏನಿದು ಕಳವಳವಿದು ನಿಲ್ಲದು, ಇದ ತಿಳಿ ಸಲು ಆಗದು, ಪ್ರೇಮಾನಾ’ ಹಾಡಿದರೆ, ತುಳಸಿ ಕುಶಾಲಪ್ಪ ಮನೋಜ್ಞವಾಗಿ ನೃತ್ಯ ಪ್ರದರ್ಶಿಸಿ, ಸಭಿಕರನ್ನು ರಂಜಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಜಿ.ಟಿ.ದೇವೇಗೌಡ, ಸಾಹಿತ್ಯ, ಸಂಗೀತ ಕಲೆಗಳ ತವರೂರಿನ ಮಕ್ಕಳ ಸಾಹಸ ಕ್ರೀಡೆಗಳನ್ನು ನೋಡಿ ಸಂತೋಷವಾಯಿತು. ಇವರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಕೀರ್ತಿ ಪತಾಕೆಯನ್ನು ಹಾರಿ ಸುವಂತಾಗಲಿ ಎಂದು ಹಾರೈಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಈ ಸಂಸ್ಥೆಯು ವರ್ಷದಿಂದ ವರ್ಷಕ್ಕೆ ಎತ್ತರಕ್ಕೆ ಬೆಳೆಯುತ್ತಿದೆ. ಬೇರೆ ಜಿಲ್ಲೆಗಳ ಫೋಟೋಗ್ರಾಫರ್ಸ್‍ಗಳನ್ನು ಆಹ್ವಾನಿಸುವ ಮೂಲಕ ಕುಟುಂಬದ ಕಾರ್ಯಕ್ರಮದಂತೆ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಫೋಟೊಗ್ರಾಫರ್ಸ್‍ಗೂ ಸ್ಪರ್ಧೆಯಿದ್ದು, ಸ್ಪರ್ಧೆ ಇದ್ದಾಗ ಮಾತ್ರ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯ. ಹಾಗಾಗಿ ಸಾಧನೆ ಮಾಡುತ್ತೇನೆಂಬ ಆಶಾ ಭಾವನೆ ಇಟ್ಟುಕೊಳ್ಳಬೇಕು. ಸಕಾರಾತ್ಮಕವಾಗಿ ಯೋಚಿಸಬೇಕು ಎಂದು ಸಲಹೆ ನೀಡಿದರು.

ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್ ಗೌಡ ಡೈರಿ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್, ಜಿಪಂ ಸದಸ್ಯೆ ರೂಪಾ ಲೋಕೇಶ್, ನಗರ ಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‍ಗೌಡ, ಸಿಂಧುವಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಬೆಳಿಗ್ಗೆ ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್ ಅವರು ಆರೋಗ್ಯ ತಪಾಸಣಾ ಶಿಬಿರ, ವೀಡಿಯೋಗ್ರಾಫ್‍ಗೆ ಸಂಬಂಧಿ ಸಿದ ಕಾರ್ಯಗಾರವನ್ನು ಉದ್ಘಾಟಿಸಿದರು.

Translate »