ಮಂಡ್ಯ, ಜ.6- ಮತದಾನ ಮಾಡು ವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ. ಪ್ರಜಾಪ್ರಭುತ್ವಕ್ಕೆ ನಾವೆಲ್ಲರು ಭದ್ರ ಬುನಾದಿ ಮತ್ತು ಶಕ್ತಿಯಾಗಬೇಕಾದರೇ 18 ವರ್ಷ ತುಂಬಿದ ಭಾರತೀಯ ನಾಗರಿಕ ರೆಲ್ಲರೂ ಮೊದಲು ತಮ್ಮ ಹೆಸರನ್ನು ಮತ ದಾರರ ಪಟ್ಟಿಯಲ್ಲಿ ನೋಂದಾಯಿಸಿ, ಚುನಾವಣಾ ಸಂದರ್ಭ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ಜಿಲ್ಲೆಯ ಎಲ್ಲಾ ಪ್ರೌಢಶಾಲೆ/ ಕಾಲೇಜು ಗಳಲ್ಲಿ ಜ.6 ರಿಂದ 8ರವರೆಗೆ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಮತದಾನ ನೋಂದಣಿ ಬಗ್ಗೆ ಸಾರ್ವ ಜನಿಕರಲ್ಲಿ ಜಾಗೃತಿ ಮೂಡಿಸುವ ಸಲು ವಾಗಿ ಸೋಮವಾರ ನಗರದ ಜಿಲ್ಲಾಧಿ ಕಾರಿ ಕಚೇರಿ ಮುಂಭಾಗ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಡ್ಯ ಜಿಲ್ಲಾಡಳಿತ, ಜಿಪಂ, ಸ್ವೀಪ್ ಸಮಿತಿ ವತಿಯಿಂದ 6 ರಿಂದ 8ರವರೆಗೆ ಮಿಂಚಿನ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದ ರಂತೆ ಜ.1ಕ್ಕೆ 18ವರ್ಷ ಪೂರ್ಣಗೊಂಡ ಎಲ್ಲಾ ಯುವಕ-ಯುವತಿಯರು ಈ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಹೆಸರನ್ನು ಮತ ದಾರರ ಪಟ್ಟಿಯಲ್ಲಿ ನೋಂದಾಯಿಸಿ ಕೊಳ್ಳಬೇಕು ಎಂದರು.
ಮತದಾನ ನೋಂದಣಿ ಸಂಬಂಧ ಜಿಲ್ಲೆಯಲ್ಲಿ, ಜಿಲ್ಲಾ ಕೇಂದ್ರದಿಂದ ಗ್ರಾಪಂ ವರೆಗೂ ಜಾಗೃತಿ ಮೂಡಿಸಲಾಗಿದೆ. ಮತದಾನ ನೋಂದಣಿಗಾಗಿ ಆಯಾ ಮತದಾರರು ತಮ್ಮ ತಾಲೂಕು ಕಚೇರಿ ಹಾಗೂ ಉಪವಿಭಾಗಧಿಕಾರಿಗಳ ಕಚೇರಿ ಸಂಪರ್ಕಿಸಬಹುದು ಎಂದರು.
ಜಿಪಂ ಸಿಇಓ ಕೆ.ಯಾಲಕ್ಕಿಗೌಡ ಮಾತನಾಡಿ, ನೋಂದಣಿ ಮಾಡಿಕೊಳ್ಳು ವುದರ ಜತೆಗೆ ಚುನಾವಣಾ ಸಂದರ್ಭ ಮತದಾನ ಮಾಡಬೇಕು. ಮತದಾರರು ಪ್ರಜಾಪ್ರಭುತ್ವದ ನೇತಾರರು. ಹೀಗಾಗಿ ಮತದಾನ ಮಾಡುವ ಮೂಲಕ ಪ್ರಜಾ ಪ್ರಭುತ್ವ ಮುನ್ನಡೆಸೋಣ ಎಂದರು. ಜಾಗೃತಿ ಜಾಥಾದಲ್ಲಿ ಜಿಲ್ಲಾ ವಾರ್ತಾಧಿ ಕಾರಿ ಟಿ.ಕೆ.ಹರೀಶ್, ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.