ಮನೆಗಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ
ಮೈಸೂರು

ಮನೆಗಳ್ಳರ ಬಂಧನ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ

January 22, 2019

ಮೈಸೂರು: ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ ಮಾಡು ತ್ತಿದ್ದ ಇಬ್ಬರು ಖದೀಮರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ 2.32 ಲಕ್ಷ ರೂ. ಮೌಲ್ಯದ 85 ಗ್ರಾಂ ಚಿನ್ನಾ ಭರಣ, 560 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ವಾಲ್ಮೀಕಿನಗರದ ಇಮ್ರಾನ್ ಖಾನ್ (32), ಬೆಂಗಳೂರಿನ ನಾಯಂಡ ಹಳ್ಳಿ ಲಾಯರ್ ಪಾಳ್ಯದ ಖದೀರ್ ಅಹಮ್ಮದ್ (24) ಬಂಧಿ ತರು. ವಿಚಾರಣೆ ವೇಳೆ ಇವರಿಬ್ಬರು ಮಂಡಿ ಹಾಗೂ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂ ಡಿದ್ದು. ಇದರಿಂದಾಗಿ ಎರಡು ಮನೆಗಳ್ಳತನ ಪ್ರಕರಣ ಪತ್ತೆಯಾಗಿವೆ. ಪತ್ತೆ ಕಾರ್ಯದಲ್ಲಿ ಮಂಡಿ ಠಾಣೆ ಪೆÇಲೀಸ್ ಇನ್ಸ್‍ಪೆಕ್ಟರ್ ಎಲ್.ಅರುಣ್, ಎಎಸ್‍ಐ ಗುರುಸ್ವಾಮಿ, ಸಿಬ್ಬಂದಿ ಎಸ್. ಜಯ ಕುಮಾರ್, ಜಯಪಾಲ, ಎಲಿಯಾಸ್, ರವಿಗೌಡ ಶಂಕರ್ ಟಿ ಬಂಡಿವಡ್ಡರ್ ಇದ್ದರು.

ನಕಲೀ ಕೀ ಬಳಸಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಖದೀಮರ ಬಂಧನ
ಮೈಸೂರು, ಜ.21(ಎಸ್‍ಪಿಎನ್)- ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಕಲಿ ಕೀ ಬಳಸಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಮೇಟಗಳ್ಳಿ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಇವರಿಂದ 1.2 ಲಕ್ಷ ರೂ. ಮೌಲ್ಯದ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಪೇಪರ್ ಮಿಲ್ ಸರ್ಕಲ್ ನಿವಾಸಿ ಜಾನ್‍ಪೀಟರ್ (19), ಕಿಶೋರ್ (19) ಬಂಧಿತರು. ಜ.20 ರಂದು ಖಚಿತ ಮಾಹಿತಿ ಮೇರೆಗೆ ಬಸವನಗುಡಿ ವೃತ್ತದ ಬಳಿ ಕಾರ್ಯಾಚರಣೆ ನಡೆಸಿ, ಕಳವು ಮಾಡಿದ್ದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಈ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಗರದ ಮೇಟಗಳ್ಳಿ, ದೇವರಾಜ ಮತ್ತು ವಿಜಯ ನಗರ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿ ದ್ದಾರೆ. ಪತ್ತೆ ಕಾರ್ಯದಲ್ಲಿ ಮೇಟಗಳ್ಳಿ ಪೆÇಲೀಸ್ ಠಾಣೆಯ ಪೆÇಲೀಸ್ ಇನ್ಸ್‍ಪೆಕ್ಟರ್ ರಾಘವೇಂದ್ರ ಗೌಡ, ಎಸ್‍ಐ ವಿಶ್ವನಾಥ್, ಎಎಸ್‍ಐ ಪೆÇನ್ನಪ್ಪ, ಸಿಬ್ಬಂದಿಗಳಾದ ಲಿಂಗ ರಾಜಪ್ಪ, ಮಹದೇವಪ್ಪ, ಸುರೇಶ್, ಜೀವನ್, ಚಂದ್ರಕಾಂತ ತಳವಾರ್, ಆಶಾ ಇದ್ದರು.

Translate »