ಅಸ್ವಸ್ಥ ಮಹಿಳೆ ರುಕ್ಮಿಣಿ ಪೂರ್ಣ ಗುಣಮುಖ
ಮೈಸೂರು

ಅಸ್ವಸ್ಥ ಮಹಿಳೆ ರುಕ್ಮಿಣಿ ಪೂರ್ಣ ಗುಣಮುಖ

January 22, 2019

ಮೈಸೂರು: ಸುಳವಾಡಿ ವಿಷ ಪ್ರಸಾದ ಸೇವನೆ ಪ್ರಕರಣದಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರುಕ್ಮಿಣಿ (35) ಎಂಬ ಮಹಿಳೆ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್.ಪಿ. ಯೋಗಣ್ಣ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ವಿಷ ಪ್ರಸಾದ ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 15 ಜನರ ಪೈಕಿ ಎಲ್ಲರೂ ಬಿಡು ಗಡೆ ಹೊಂದಿದ್ದರೂ ಇವರು ಮಾತ್ರ ಕಳೆದ 1 ತಿಂಗಳಿಂದ ಜೀವನ್ಮರಣದ ಜೊತೆಗೆ ಹೋರಾಡಿ ಆಸ್ಪತ್ರೆಯ ತಜ್ಞ ವೈದ್ಯರ ಪರಿಶ್ರಮದಿಂದ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇವರ ದೇಹ ದಲ್ಲಿ ಹೆಚ್ಚಿನ ಪ್ರಮಾಣದ ವಿಷ ಇದ್ದುದ್ದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇವರು ವೆಂಟಿಲೇಟರ್ ಸಹಾಯದಿಂದ ಕೃತಕ ಉಸಿರಾಟದಲ್ಲಿದ್ದರು. ಈ ವೇಳೆ 3 ಬಾರಿ ಹೃದಯಸ್ಥಂಭನವಾಗಿತ್ತು. ವೈದ್ಯ ಡಾ.ಮಹೇಶ್ ಅವರ ಪರಿಶ್ರಮದಿಂದ ವಿಸ್ಮಯ ಕಾರಿ ರೀತಿಯಲ್ಲಿ ಪಾರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ಅತೀವ ವಿಷಮ ಸ್ಥಿತಿಯಲ್ಲಿದ್ದ ಅವರು 1 ತಿಂಗಳ ಕಾಲ ಐಸಿಯು ನಲ್ಲಿದ್ದು, ಸಂಪೂರ್ಣವಾಗಿ ಗುಣಮುಖರಾಗಿ ದ್ದಾರೆ ಎಂದರು. ಗೋಷ್ಠಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ರುಕ್ಮಿಣಿ, ಆಕೆ ಪತಿ ರಮೇಶ, ಡಾ.ಮಹೇಶ್ ಉಪಸ್ಥಿತರಿದ್ದರು.

ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಆಯ್ಕೆ
ಮೈಸೂರು: ಮೈಸೂರಿನ ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಬಹುತೇಕ ಹಳೆಯ ಆಡಳಿತ ಮಂಡಳಿ ಯವರೇ ಈ ಬಾರಿಯೂ ಆಯ್ಕೆಯಾ ಗಿದ್ದು, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಾದ ಕೆ.ವಿ.ನಾಗೇಂದ್ರನ್ (ಸಾಮಾನ್ಯ) 1239 ಮತಗಳನ್ನು ಪಡೆದಿದ್ದು, ಎನ್.ನಾಗಚಂದ್ರ (ಸಾ) 1182, ಎಂ.ಎಸ್. ಚಂದ್ರಶೇಖರ್(ಸಾ) 1113, ಟಿ.ಎಸ್. ಶೇಷಾದ್ರಿ (ಸಾ) 1094, ಎಂ.ಎಸ್. ಗುರುರಾಜ್ (ಸಾ) 1045, ಆರ್.ರಾಮದಾಸ್(ಸಾ) 1107, ಹೆಚ್.ವಿ.ಸುಬ್ಬಣ್ಣ(ಸಾ) 993, ಬಸವಣ್ಣ (ಸಾ) 1833, ಕೃಷ್ಣವೇಣಿ ಪ್ರಸಾದ್(ಮ) 1329, ಎನ್.ಶ್ಯಾಮಲಾ(ಮ) 1321 ಮತ ಗಳನ್ನು ಪಡೆದು ಆಯ್ಕೆಯಾಗಿರುತ್ತಾರೆ. ವರದರಾಜು(ಎಸ್ಸಿ), ಎನ್.ಲಕ್ಷ್ಮೀದೇವಿ (ಎಸ್ಟಿ), ಮಹದೇವ್(ಹಿಂದುಳಿದ ವರ್ಗ), ಕೆ. ಲೋಕೇಶ್ (ಹಿಂದುಳಿದ ವರ್ಗ) ಅವಿ ರೋಧ ಆಯ್ಕೆಯಾಗಿದ್ದಾರೆಂದು ಚುನಾ ವಣಾಧಿಕಾರಿ ಸಪ್ತರ್ಷಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »