ಶಾಸಕ ಕೆ.ಜಿ.ಬೋಪಯ್ಯರಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಉತ್ತರ
ಮಡಿಕೇರಿ: ಕೊಡಗಿನಲ್ಲಿ ಜಮ್ಮಾ ಬಾಣೆ ಮತ್ತಿತರ ಬಾಣೆ ಜಾಗಗಳಿಗೆ ಕಂದಾಯ ವಿಧಿಸುವಂತೆ ಭೂಕಂದಾಯ ಕಾಯ್ದೆ ತಿದ್ದುಪಡಿ ಮಾಡಲಾಗಿದ್ದು, ಬಾಣೆ ಜಾಗಗಳಿಗೆ ಕಂದಾಯ ನಿಗದಿಗೊಳಿಸಲಾ ಗಿದೆ ಎಂದು ಕಂದಾಯ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿ ವೇಶನದಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕರ್ನಾಟಕ ಭೂಕಂದಾಯ ಕಾಯ್ದೆಯ ತಿದ್ದುಪಡಿಯಂತೆ ಬಾಣೆ ಜಾಗ ಗಳಿಗೆ ಕಂದಾಯ ವಿಧಿಸಲು ಉಪ ವಿಭಾ ಗಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದ್ದು, ಇಲ್ಲಿಯವರೆಗೆ ಕೊಡಗಿನ ಮಡಿಕೇರಿ ತಾಲೂ ಕಿನಲ್ಲಿ 87,666.17 ಎಕರೆ ವಿಸ್ತೀರ್ಣ, ವಿರಾಜಪೇಟೆ ತಾಲ್ಲೂಕಿನಲ್ಲಿ 97,368.42 ಎಕರೆ ವಿಸ್ತೀರ್ಣ ಹಾಗೂ ಸೋಮವಾರ ಪೇಟೆ ತಾಲೂಕಿನಲ್ಲಿ 6253.65 ಎಕರೆ ಸೇರಿದಂತೆ ಒಟ್ಟು 1,91,288.24 ಎಕರೆ ಬಾಣೆ ಜಮೀನು ಕಂದಾಯಕ್ಕೆ ಅಳವಡಿ ಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿಗಳು ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ವಾಸವಿ ರುವ ಗಿರಿಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಕೊಡಗು ಜಿಲ್ಲೆಯ ಅರಣ್ಯಾ ಧಿಕಾರಿಗಳ ಸಭೆ ನಡೆಸಿರುವುದು ಸರ್ಕಾ ರದ ಗಮನಕ್ಕೆ ಬಂದಿದೆಯೇ ಬಂದಿದ್ದಲ್ಲಿ ಅರಣ್ಯ ವಾಸಿ ಗಿರಿಜನರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರಣ್ಯದೊಳಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆಯೇ,. ಹಾಗಿದ್ದಲ್ಲಿ ಈ ಯೋಜನೆಗೆ ತಾಂತ್ರಿಕ ಸಲಹೆ ಪಡೆಯಲಾ ಗಿದೆಯೇ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಬಗ್ಗೆ ಕೇಂದ್ರ ಸರ್ಕಾರದ ಅಭಿ ಪ್ರಾಯ ಪಡೆಯಲಾಗಿದೆಯೇ, ಈ ಬಗ್ಗೆ ಸರ್ಕಾರದ ನಿಲುವೇನು ಎಂದು ಅರಣ್ಯ, ಪರಿ ಸರ ಮತ್ತು ಜೀವಿಶಾಸ್ತ್ರ ಸಚಿವರನ್ನು ಶಾಸಕ ಕೆ.ಜಿ.ಬೋಪಯ್ಯ ಪ್ರಶ್ನಿಸಿದರು.
ಈ ವಿಷಯವಾಗಿ ಕೊಡಗು ಜಿಲ್ಲಾಧಿಕಾರಿ, 2018ರ ಫೆಬ್ರವರಿ 22 ರಂದು ಸಭೆ ನಡೆಸಿರು ತ್ತಾರೆ. ಈ ಸಭೆಯಲ್ಲಿ ಜಿಲ್ಲಾಧಿಕಾರಿಯ ವರು ಅರಣ್ಯವಾಸಿ ಗಿರಿಜನರಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಅಂಡರ್ ಗ್ರೌಂಡ್ ಕೇಬಲ್ ಮತ್ತು ಓಪನ್ ಪೋಲ್ ಕೇಬಲ್ ಕಾಮಗಾರಿಯ ತುಲನಾತ್ಮಕ ಪಟ್ಟಿಯನ್ನು ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂ, ಮಡಿಕೇರಿ ಇವರಿಂದ ಪಡೆ ಯಲು ಯೋಜನಾ ಸಮನ್ವಯಾಧಿಕಾರಿ ಗಳಿಗೆ ತಿಳಿಸಿದ್ದಾರೆ ಎಂದರು.