ಪೌರತ್ವ ಕಾಯ್ದೆ ಬೆಂಬಲಿಸಿ 1 ಲಕ್ಷ ಅಂಚೆ ಪತ್ರ ಅಭಿಯಾನಕ್ಕೆ ಶಾಸಕ ರಾಮದಾಸ್ ಚಾಲನೆ
ಮೈಸೂರು

ಪೌರತ್ವ ಕಾಯ್ದೆ ಬೆಂಬಲಿಸಿ 1 ಲಕ್ಷ ಅಂಚೆ ಪತ್ರ ಅಭಿಯಾನಕ್ಕೆ ಶಾಸಕ ರಾಮದಾಸ್ ಚಾಲನೆ

January 13, 2020

ಮೈಸೂರು, ಜ.12(ಆರ್‍ಕೆಬಿ)- ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಂಡಾಗ ಇಡೀ ದೇಶದ ಜನರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಸರೇಳಿಕೊಂಡು ಆನಂದ ಪಟ್ಟಿದ್ದಾರೆ. ಅವರಿಗೋಸ್ಕರ ಪೌರತ್ವವೇ ಹೊರತು, ಪೌರತ್ವ ಕಿತ್ತುಕೊಳ್ಳುವುದಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬ ಲಿಸಿ ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನ ಮಂತ್ರಿಗೆ ಒಂದು ಲಕ್ಷ ಅಂಚೆ ಪತ್ರ ಬರೆ ಯುವ ಅಭಿಯಾನಕ್ಕೆ ಮೈಸೂರಿನ ವಿವೇಕಾ ನಂದ ವೃತ್ತದಲ್ಲಿರುವ ಅಂಚೆ ಡಬ್ಬದ ಬಳಿ ಅಂಚೆ ಪತ್ರ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನೀವೆಲ್ಲರೂ ಪೌರತ್ವ ಕಾಯಿದೆಯನ್ನು ಬೆಂಬಲಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಬೇಕು. ನಿಮ್ಮ ಪತ್ರಗಳು ಪ್ರಧಾನಮಂತ್ರಿ ಕಚೇರಿ ತಲು ಪಿದ ಮೇಲೆ ನಿಮ್ಮ ಫೋನ್, ಇ-ಮೇಲ್ ಐಡಿ ಅಥವಾ ವಿಳಾಸಕ್ಕೆ ಪ್ರಧಾನಮಂತ್ರಿ ಕಚೇರಿಯಿಂದ ಧನ್ಯವಾದ ಪತ್ರ ಬರಲಿದೆ ಎಂದು ಸಾರ್ವಜನಿಕರಿಗೆ ಹೇಳಿದರು.

ಕೃಷ್ಣರಾಜ ಕ್ಷೇತ್ರದಿಂದ ಒಟ್ಟು ಒಂದು ಲಕ್ಷ ಪತ್ರ ಬರೆಯುವ ಅಭಿಯಾನ ಹಮ್ಮಿ ಕೊಂಡಿದ್ದು, ಅದಕ್ಕೆ ಇಂದು 10 ಸಾವಿರ ಪತ್ರಗಳನ್ನು ಅಂಚೆ ಡಬ್ಬಕ್ಕೆ ಹಾಕಲಾಗಿದೆ. ಈ ತಿಂಗಳ ಒಳಗಾಗಿ ಒಂದು ಲಕ್ಷ ಅಂಚೆ ಪತ್ರಗಳನ್ನು ಪ್ರಧಾನಮಂತ್ರಿಗಳಿಗೆ ಹಾಕಲಿ ದ್ದೇವೆ ಎಂದು ಹೇಳಿದರು.

ಇಲ್ಲಿ ಯಾವುದೇ ಧರ್ಮ, ಜಾತಿ ಯಾವ ವಿಚಾರವೂ ಇಲ್ಲ. ಭಾರತವನ್ನು ಯಾರ್ಯಾರು ಪ್ರೀತಿಸುತ್ತಾರೋ ಅವರೆಲ್ಲರೂ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ಇದ್ದಾರೆ ಎಂದು ತೋರಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ನಗರಪಾಲಿಕೆ ವಿಪಕ್ಷ ನಾಯಕ ಬಿ.ವಿ.ಮಂಜುನಾಥ್, ಪಾಲಿಕೆ ಸದಸ್ಯರಾದ ಸುನಂದಾ ಪಾಲ ನೇತ್ರ, ಶಿವಕುಮಾರ್, ಜಿ.ರೂಪಾ, ಗೀತಾಶ್ರೀ ಯೋಗಾನಂದ್, ಛಾಯಾದೇವಿ, ಚಂಪಕ, ಸೌಖ್ಯ ಉಮೇಶ್, ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವಡಿವೇಲು, ಉಪಾಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಶ್ರೀನಿವಾಸ್, ಕೃಷ್ಣ, ಈಶ್ವರ್, ರಘು, ರವಿ, ನವೀನ್, ಗಿರೀಶ್, ಯೋಗೇಶ್, ಗುರುರಾಜ್ ಇನ್ನಿತರರು ಉಪಸ್ಥಿತರಿದ್ದರು.

Translate »