ಜಿಲ್ಲಾ ಮಟ್ಟದ ಯುವ ಸಬಲೀಕರಣ ಕೇಂದ್ರ ಉದ್ಘಾಟನೆ
ಮೈಸೂರು

ಜಿಲ್ಲಾ ಮಟ್ಟದ ಯುವ ಸಬಲೀಕರಣ ಕೇಂದ್ರ ಉದ್ಘಾಟನೆ

January 13, 2020

ಮೈಸೂರು, ಜ.12(ಪಿಎಂ)- ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ಹಾಗೂ ಔದ್ಯೋಗಿಕ ಮಾಹಿತಿ ನೀಡುವ ಸಲುವಾಗಿ ಮೈಸೂ ರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ಆರಂಭಿಸಿರುವ ಜಿಲ್ಲಾ ಮಟ್ಟದ `ಯುವ ಸಬಲೀಕರಣ ಕೇಂದ್ರ’ ಭಾನುವಾರ ಉದ್ಘಾಟನೆಗೊಂಡಿತು.

ಕಾಲೇಜು ಆವರಣದಲ್ಲಿ ಹಮ್ಮಿಕೊಂ ಡಿದ್ದ ರಾಷ್ಟ್ರೀಯ ಯುವ ದಿನಾಚರಣೆ ವೇಳೆ ಯಲ್ಲಿ ಯುವ ಸಬಲೀಕರಣ ಕೇಂದ್ರದ ಉದ್ಘಾ ಟನೆಯನ್ನು ಗಣ್ಯರು ನೆರವೇರಿಸಿದರು. ರಾಜ್ಯ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ ಮೂಲಕ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ತಲಾ ಒಂದು ಯುವ ಸಬಲೀಕರಣ ಕೇಂದ್ರ ಆರಂಭಿಸುತ್ತಿದ್ದು, ಅದೇ ರೀತಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಮಹಾರಾಣಿ ಕಲಾ ಕಾಲೇಜು ಆವರಣದಲ್ಲಿ ಈ ಕೇಂದ್ರ ಕಾರ್ಯ ಚಟುವಟಿಕೆ ಆರಂಭಿಸಲಿದೆ.

ಜಿಲ್ಲೆಯ ಯುವ ಸಮುದಾಯಕ್ಕೆ ಶೈಕ್ಷ ಣಿಕ ಹಾಗೂ ಔದ್ಯೋಗಿಕ ಮಾರ್ಗದರ್ಶ ನೀಡುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಗುಣಮಟ್ಟದ ಶಿಕ್ಷಣ, ವೃತ್ತಿ ಆಧಾರಿತ ಉನ್ನತ ಶಿಕ್ಷಣದ ಮಾಹಿತಿ ಸೇರಿದಂತೆ ಔದ್ಯೋಗಿಕ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ ರೂಪಿ ಸುವ ಧ್ಯೇಯದೊಂದಿಗೆ ಕೇಂದ್ರದ ಕಾರ್ಯ ನಡೆಯಲಿದೆ.

ವಿದ್ಯಾರ್ಥಿ ಸಮುದಾಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿದ್ಯಾರ್ಥಿ ಯೋಜ ನೆಯ ಮಾಹಿತಿ, ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಅಗತ್ಯ ಮಾರ್ಗದರ್ಶನ ಇಲ್ಲಿ ಲಭ್ಯವಾಗಲಿದೆ. ಹಾಸ್ಟೆಲ್ ಸೌಲಭ್ಯ ಗಳು, ವಿದ್ಯಾರ್ಥಿ ವೇತನಗಳು, ಶೈಕ್ಷಣಿಕ ಸಾಲ ಸೌಲಭ್ಯಗಳು ಸೇರಿದಂತೆ ಹಲವು ಮಾಹಿತಿಗಳು ಇಲ್ಲಿ ದೊರೆಯಲಿದೆ.

ಯುವ ಸಬಲೀಕರಣ ಕೇಂದ್ರದ ಅಧ್ಯಕ್ಷ ರಾಗಿ ಜಿಲ್ಲಾಧಿಕಾರಿಗಳು ಕಾರ್ಯನಿರ್ವ ಹಿಸಲಿದ್ದು, ಮಹಾರಾಣಿ ಕಲಾ ಕಾಲೇಜಿನ ಪ್ರಾಂಶುಪಾಲರು ಸಂಚಾಲಕರಾಗಿರು ತ್ತಾರೆ. ಮಹಾರಾಣಿ ಕಲಾ ಕಾಲೇಜಿನ ಭೂಗೋಳಶಾಸ್ತ್ರದ ಪ್ರಾಧ್ಯಾಪಕ ಡಾ.ಹೇಮ ಚಂದ್ರ ಹಾಗೂ ರಾಜ್ಯಶಾಸ್ತ್ರದ ಪ್ರಾಧ್ಯಾಪಕಿ ಪ್ರೊ.ಸುಮಾ ಅವರನ್ನು ಈ ಕೇಂದ್ರದ ಸಮಾಲೋಚಕರಾಗಿ ನಿಯೋಜಿಸಲಾಗಿದೆ.

Translate »