ಕಿವುಡರ ಚೆಸ್ ಪಂದ್ಯಾವಳಿ: ಕರ್ನಾಟಕ ತಂಡ ಚಾಂಪಿಯನ್
ಮೈಸೂರು

ಕಿವುಡರ ಚೆಸ್ ಪಂದ್ಯಾವಳಿ: ಕರ್ನಾಟಕ ತಂಡ ಚಾಂಪಿಯನ್

January 13, 2020

ಮೈಸೂರು,ಜ.12(ವೈಡಿಎಸ್)- ವಿಶ್ವೇ ಶ್ವರನಗರದ ರಾಹುಲ್ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಕಿವುಡರ ಚೆಸ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೈಸೂರು ಜಿಲ್ಲಾ ಕಿವುಡರ ಸಂಘ, ಬೆಂಗಳೂರಿನ ಕರ್ನಾಟಕ ಕಿವುಡರ ಕ್ರೀಡಾ ಒಕ್ಕೂಟ, ನವದೆಹಲಿಯ ಅಖಿಲ ಭಾರತ ಕಿವುಡರ ಕ್ರೀಡಾ ಒಕ್ಕೂಟ ಹಾಗೂ ಲಯನ್ಸ್ ಕ್ಲಬ್ ಆಫ್ ಮೈಸೂರು ನಿಸರ್ಗ ಮತ್ತು ಮಯೂರಿ ಸಂಯುಕ್ತಾಶ್ರಯದಲ್ಲಿ 5 ದಿನ ಗಳ ಕಾಲ ನಡೆದ 22ನೇ ರಾಷ್ಟ್ರೀಯ ಕಿವು ಡರ ಚೆಸ್ ಚಾಂಪಿಯನ್‍ಶಿಪ್ ಪಂದ್ಯದಲ್ಲಿ 9 ಸುತ್ತಿನಲ್ಲೂ ಉತ್ತಮ ಆಟ ಪ್ರದರ್ಶಿಸಿ 85 ಅಂಕ ಪಡೆದ ಕರ್ನಾಟಕ ತಂಡ ಪ್ರಥಮ ಸ್ಥಾನ ಪಡೆದರೆ, 70 ಅಂಕ ಪಡೆದ ಕೇರಳ (ದ್ವಿ), 65.5 ಅಂಕ ಪಡೆದ ಬಿಹಾರ (ತೃ) ಬಹುಮಾನ ಪಡೆದುಕೊಂಡಿತು.

ಫಲಿತಾಂಶ: ಪುರುಷರ ವಿಭಾಗ: ದೆಹ ಲಿಯ ರೋಹಿತ್ ಶರ್ಮಾ(ಪ್ರ), ಹರಿ ಯಾಣದ ಸೌರಭ್(ದ್ವಿ), ಗುಜರಾತ್‍ನ ಆಶಿಶ್ ಕೆ.ದೇಸಾಯ್(ತೃ), ಮಹಾ ರಾಷ್ಟ್ರದ ವಿವೇಕ್(4ನೇ), ಕರ್ನಾಟಕದ ಎಸ್. ಆದೀಶ್(5ನೇ), ಆಂಧ್ರಪ್ರದೇಶದ ಕರಣಂ ವಂಶಿ(6ನೇ). ಸಮಾಧಾನಕರ ಬಹು ಮಾನ: ಕರ್ನಾಟಕದ ಜಿ.ಪಳನಿ, ಪಿ. ಜಯಂತ್ ಸಾರಥಿ, ಬಸವರಾಜ್, ಹೆಚ್. ಎಸ್.ವಿಶ್ವನಾಥ್, ಮಹಾರಾಷ್ಟ್ರದ ಭೂಷಣ್ ಪವಾರ್, ರಾಬರ್ಟ್, ಒಡಿಸ್ಸಾದ ಸುಶಾಂತ ಕುಮಾರ್, ಜಾರ್ಖಂಡ್‍ನ ವಿಶಾಲ್‍ಕುಮಾರ್ ಸಿಂಗ್, ಕೇರಳದ ನೌಶಾದ್, ಆಂಧ್ರ ಪ್ರದೇ ಶದ ಗರುಗು ಕೃಷ್ಣರೆಡ್ಡಿ. ಕಿರಿಯ ಬಾಲಕರ ವಿಭಾಗ: ಆಂಧ್ರಪ್ರದೇಶದ ತರುಣ್ ಭಾರ್ಗವ್ (ಪ್ರ), ಮಹಾ ರಾಷ್ಟ್ರದ ಸಾಗರ್ ಗೋಡ್ಕೆ(ದ್ವಿ), ಕೇರಳದ ಸುವೀನ್ ಎಸ್.ಕುಮಾರ್ (ತೃ). ಸಮಾ ಧಾನಕರ ಬಹುಮಾನ: ಕರ್ನಾಟಕದ ಭರತ್ ಆರ್ ಹೆಗಡೆ, ಚೇತನ್, ಕೇರಳದ ತೋರಕತ್, ಅಸ್ಲಾಮ್, ಉತ್ತರ ಪ್ರದೇಶದ ಸೂರಜ್ ಪರಿಹಾರ್, ಮಧ್ಯಪ್ರದೇಶದ ಗೋವಿಂದ್, ಕೃಷ್ಣ, ತಮಿಳುನಾಡಿನ ಪುಗಲ್ ವೆಂತನ್, ಬಿಹಾರದ ಆಶನ್ ಸೌರಬ್, ದೆಹಲಿಯ ಲೋಕೇಶ್ ಗೋಯಲ್.

ಮಹಿಳೆಯರ ವಿಭಾಗ: ಪಂಜಾಬ್‍ನ ಮಲ್ಲಿಕಾ(ಪ್ರ), ದೆಹಲಿಯ ರಚನಾ(ದ್ವಿ), ರಾಜಸ್ಥಾನದ ಸ್ವಾತಿ(ತೃ). ಸಮಾಧಾನಕರ ಬಹುಮಾನ: ತೆಲಂಗಾಣದ ಶಹೀನ್ ಬೇಗಂ, ಟಿ.ಪಾರ್ವತಿ, ದೆಹಲಿಯ ಬಿಮ್ಲ ಶರ್ಮ, ತಮಿಳುನಾಡಿನ ಜೆ.ಅಭಿನಯ, ಟಿ.ಅಂಶವೇಣಿ, ಮಧ್ಯಪ್ರದೇಶದ ರೀತು ಹಯರನ್, ಕರ್ನಾಟಕದ ಅಂಭಿಕಾ, ಕೇರಳದ ಶ್ರೀಸ್ಮಾ, ಫಶೀಲ, ರಾಜಸ್ಥಾನದ ಮೇಗ್ ಮೋಚಿ. ಕಿರಿಯ ಬಾಲಕಿಯರ ವಿಭಾಗ: ಕರ್ನಾಟಕದ ಕೆ.ಯಶಸ್ವಿನಿ(ಪ್ರ), ಬಿಹಾರದ ಅನಿಮಾ ಕುಮಾರಿ(ದ್ವಿ), ರಾಧಿಕಾ (ತೃ). ಸಮಾಧಾನಕರ ಬಹುಮಾನ: ಗುಜ ರಾತ್‍ನ ತನ್ವಿಬೆನ್ ಪಿ.ಪ್ರಜಾಪತಿ, ಬಿಹಾ ರದ ಶಿವಾನಿ ಕುಮಾರಿ, ಕರ್ನಾಟಕದ ನಾಜ್ಮೀನ್ ರಾಮ್‍ಪುರ್, ಉತ್ತರಾಖಂಡದ ರಾಧಿಕಾ ಅರೋರ, ದೆಹಲಿಯ ಇಶಾ ಕಾಟೂನ್, ತಮಿಳುನಾಡಿನ ಐಶ್ವರ್ಯ, ಬಾಲಮ್ಬಿಗಲ್, ಕೇರಳದ ಅನೀಶಾ, ಅಮೃತ ಕೃಷ್ಣ, ಮಧ್ಯಪ್ರದೇಶದ ಜ್ಯೋತಿ ಮೀನಾ. ಸಮಾರೋಪದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ. ರಾಜೀವ್ ಬಹುಮಾನ ವಿತರಿಸಿದರು.

Translate »