ಸಂಕ್ರಾಂತಿ: ರಂಗೋಲಿ ಸ್ಪರ್ಧೆ
ಮೈಸೂರು

ಸಂಕ್ರಾಂತಿ: ರಂಗೋಲಿ ಸ್ಪರ್ಧೆ

January 13, 2020

ಮೈಸೂರು, ಜ.12(ಆರ್‍ಕೆಬಿ)- ಸಂಕ್ರಾಂತಿ ಹಬ್ಬದ ಅಂಗವಾಗಿ ಮೈಸೂರಿನ ಬಿಗ್ ಬಜಾರ್ ವತಿಯಿಂದ ಬಿಗ್ ಬಜಾರ್ ಆವರಣದಲ್ಲಿ ಭಾನುವಾರ ಮಹಿಳೆ ಯರಿಗಾಗಿ ಬಣ್ಣ ಬಣ್ಣದ ರಂಗೋಲಿ ಸ್ಪರ್ಧೆ ನಡೆಸಲಾಯಿತು.

ಬಣ್ಣಬಣ್ಣದ ರಂಗೋಲಿ ಸ್ಪರ್ಧೆಯಲ್ಲಿ ಅತ್ಯುತ್ತಮ ರಂಗೋಲಿಗಳನ್ನು ಬಿಡಿಸಿದ ಗೀತಾ (ಪ್ರ), ಸ್ನೇಹಾ (ದ್ವಿ), ಸವಿತಾ (ತೃ) ಹಾಗೂ ರೇಣುಕಾ ಮತ್ತು ಸಿಂಚನಾ (ಸಮಾ ಧಾನಕರ ಬಹುಮಾನ) ಪಡೆದುಕೊಂಡರು. ವಿಜೇತರಿಗೆ ಬಿಗ್‍ಬಜಾರ್ ಹೈಪರ್ ಮಾರ್ಕೆಟ್‍ನ ವ್ಯವಸ್ಥಾಪಕ ರವಿಚಂದ್ರನ್ ಇನ್ನಿತರರು ಬಹುಮಾನ ವಿತರಿಸಿದರು.