ಪ್ರವಾಸಿಗರ ದೋಣಿ ಪಲ್ಟಿ: 11 ಮಂದಿ ಸಾವು
ಮೈಸೂರು

ಪ್ರವಾಸಿಗರ ದೋಣಿ ಪಲ್ಟಿ: 11 ಮಂದಿ ಸಾವು

September 16, 2019

ವಿಜಯವಾಡ, ಸೆ.15- ಕನಿಷ್ಠ 50 ಪ್ರವಾಸಿಗರು, 11 ಸಿಬ್ಬಂದಿಗಳನ್ನು ಹೊತ್ತ ದೋಣಿಯೊಂದು ನದಿಯಲ್ಲಿ ಮಗು ಚಿದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇ ಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯಲ್ಲಿ ನಡೆದಿದೆ. ದೋಣಿಯಲ್ಲಿ 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳಿದ್ದರೆಂದು ಹೇಳಲಾಗಿದೆ.

ನಾವು ಇಲ್ಲಿಯವರೆಗೆ ಏಳು ಶವ ಗಳನ್ನು ಗುರುತಿಸಿದ್ದೇವೆ. ರಕ್ಷಣಾ ಕಾರ್ಯಾ ಚರಣೆ ನಡೆಯುತ್ತಿದೆ ಎಂದು ರಾಂಪ ಚೋದವರಂ ಎಎಸ್ಪಿ ರಾಹುಲ್ ದೇವ್ ಸಿಂಗ್ ಹೇಳಿದ್ದಾರೆ. ದೋಣಿಯು ಪ್ರಸಿದ್ಧ ಪ್ರವಾಸಿ ಸ್ಥಳ ಪಾಪಿಕೊಂಡಲು ಅಥವಾ ಪಾಪಿ ಹಿಲ್ಸ್‍ನತ್ತ ಸಾಗುತ್ತಿತ್ತು. ಇತ್ತೀಚಿನ ವರದಿಯಂತೆ ಹೆಚ್ಚಿನ ಪ್ರವಾಸಿ ಗರು ಲೈಫ್ ಜಾಕೆಟ್ ಧರಿಸಿದ್ದು, 14 ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇನ್ನು ಗೋದಾವರಿ ನದಿಗೆ ಭಾರಿ ಒಳಹರಿವಿರುವ ಕಾರಣ ಪಾಪಿ ಹಿಲ್ಸ್ ಪ್ರದೇಶಕ್ಕೆ ದೋಣಿ ಸೇವೆಗಳನ್ನು ಅಧಿಕಾರಿಗಳು ಸುಮಾರು 1 ತಿಂಗಳ ಕಾಲ ಸ್ಥಗಿತಗೊಳಿಸಿದ್ದರು. ಆದರೆ ಇದೀಗ ನೀರಿನ ಒಳಹರಿವು ಕಡಿಮೆಯಾಗುತ್ತಿರುವ ಕಾರಣ ಸೇವೆಯನ್ನು ಪುನಾರಂಭಿಸಲಾಗಿತ್ತು. ಪ್ರಸ್ತುತ, ಗೋದಾವರಿ ನದಿಗೆ ಕನಿಷ್ಠ 5 ಲಕ್ಷ ಕ್ಯೂಸೆಕ್ ಒಳಹರಿವು ಬರುತ್ತಿದೆ. ವರದಿಗಳ ಪ್ರಕಾರ, 50 ಪ್ರವಾಸಿಗರು ಮತ್ತು 11 ಸಿಬ್ಬಂದಿಗಳನ್ನು ಹೊಂದಿರುವ ದೋಣಿ ಗಂಡಿ ಪೆÇೀಚಮ್ಮ ದೇವಸ್ಥಾನದಿಂದ ಹೊರಟಿದ್ದು ದೇವಿಪಟ್ಟಣಂ ಮಂಡಲದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಚಲೂರು ಮಂಡ ಗ್ರಾಮದ ಸಮೀಪ ಪಲ್ಟಿಯಾಗಿದೆ. ಕೆಲವು ಪ್ರವಾಸಿಗರು ನೀರಿನ ಇನ್ನೊಂದು ಬದಿಯಲ್ಲಿರುವ ಟುಟುಕುಂಟಾ ಗ್ರಾಮದತ್ತ ಈಜಿ ದಡ ಸೇರಿದ್ದಾರೆ. ಇನ್ನೊಂದೆಡೆ ಗ್ರಾಮಸ್ಥರು 14 ಜನರನ್ನು ರಕ್ಷಿಸಿದ್ದಾರೆ. ಸಿಎಂ ಕಚೇರಿ ಸಹ ಪೂರ್ವ ಗೋದಾವರಿ ಜಿಲ್ಲಾಡಳಿತ ದೊಂದಿಗೆ ಸಂಪರ್ಕ ಹೊಂದಿದ್ದು, ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಅಧಿಕಾರಿಗಳನ್ನು ಕೇಳಿದೆ ಎಂದು ವರದಿಯಾಗಿದೆ. ರಕ್ಷಣಾ ಕಾರ್ಯಾ ಚರಣೆ ಕೈಗೊಳ್ಳಲು ರಾಜಮಂಡ್ರಿಯಿಂದ ಹೆಲಿಕಾಪ್ಟರ್ ಅನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಜಿಲ್ಲಾಧಿಕಾರಿ ಮುರಳೀಧರ್ ರೆಡ್ಡಿ ಮತ್ತು ಪೆÇಲೀಸ್ ವರಿಷ್ಠಾಧಿಕಾರಿ ನಯೀಮ್ ಅಸ್ಮಿ ದೇವಿಪಟ್ನಂಗೆ ಧಾವಿಸಿದ್ದಾರೆ.

Translate »