ದಸರೆಗಾಗಿ ಪುರಭವನ ಆವರಣದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ
ಮೈಸೂರು

ದಸರೆಗಾಗಿ ಪುರಭವನ ಆವರಣದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ

September 16, 2019

ಮೈಸೂರು,ಸೆ.15(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಅರಮನೆ ಸೇರಿದಂತೆ ವಿವಿಧೆಡೆ ಜರುಗಲಿರುವ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಕಣ್ತುಂಬಿಕೊಳ್ಳುವುದಕ್ಕೆ ಬರುವ ಪ್ರವಾಸಿಗರು ಹಾಗೂ ನಗರದ ಜನತೆಗೆ ಉಂಟಾಗಲಿರುವ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನೀಗಿಸುವುದಕ್ಕೆ ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಪುರಭವನದ ಆವರಣ ಹಾಗೂ ನಿರ್ಮಾಣ ಹಂತದಲ್ಲಿರುವ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದೆ.

ಮೈಸೂರಿನ ಹೃದಯ ಭಾಗವಾದ ಡಿ. ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು ಜನರು ಪರದಾಡು ವಂತಾಗಿತ್ತು. ದಸರಾ ಮಹೋತ್ಸವ ಸಮೀಪಿ ಸುತ್ತಿದ್ದು, ಸಾಂಸ್ಕøತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಾ ಗುತ್ತಿದೆ. ಸೆ.29ರಿಂದ ಅ.8ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ನವರಾತ್ರಿಯ ವೇಳೆ ಅರಮನೆಯ ಆವರಣ, ದೊಡ್ಡಗಡಿ ಯಾರ, ಪುರಭವನ, ಕುಪ್ಪಣ್ಣ ಪಾರ್ಕ್ ನಲ್ಲಿನ ಫಲಪುಷ್ಪ ಪ್ರದರ್ಶನ, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುವ ಆಹಾರ ಮೇಳ, ಜೆ.ಕೆ.ಮೈದಾನದಲ್ಲಿ ನಡೆಯುವ ರೈತ, ಮಹಿಳಾ ಹಾಗೂ ಮಕ್ಕಳ ದಸರಾ, ಜಗನ್ಮೋಹನ ಅರಮನೆ ಸೇರಿ ದಂತೆ ವಿವಿಧೆಡೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದರಿಂದ ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಮನ ಗಂಡು ಪಾಲಿಕೆ ಕಳೆದ ವರ್ಷದಂತೆ ಈ ಬಾರಿಯೂ ಪುರಭವನದಲ್ಲಿ ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆ ಆರಂಭಿಸಲಾಗಿದೆ.

ಪುರಭವನದಲ್ಲಿ ಪಾರ್ಕಿಂಗ್‍ಗಾಗಿ ಪಾಲಿಕೆ ಕರೆದಿದ್ದ ಟೆಂಡರ್ ಅನ್ನು ಮೈಸೂರಿನ ಅಗ್ರಹಾರದ ನಿವಾಸಿ ಪ್ರದೀಶ್ ಎಂಬುವರು ಪಡೆದಿದ್ದು, ಸೆ.14 ರಿಂದ ಡಿಸೆಂಬರ್ ಅಂತ್ಯವರೆಗೂ ವಾಹನ ಗಳ ಪಾರ್ಕಿಂಗ್ ವ್ಯವಸ್ಥೆ ನಿರ್ವಹಣೆ ಮಾಡಲಿದ್ದಾರೆ. ಮೂರು ಸ್ಥಳದಲ್ಲಿ ವಾಹನಗಳ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡ ಲಾಗಿದೆ. ಅಶೋಕ ರಸ್ತೆ ಹಾಗೂ ಹರ್ಷ ರಸ್ತೆ ಜಂಕ್ಷನ್ ಮುಂಭಾಗದ ಪುರಭವ ನದ ಗೇಟ್‍ನಿಂದ ಬರುವ ವಾಹನಗಳನ್ನು ಎಡಭಾಗದಲ್ಲಿರುವ ಖಾಲಿ ಜಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು 300 ಕಾರು, 100ಕ್ಕೂ ಹೆಚ್ಚು ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ವಿದೆ. ಮಹಾತ್ಮಗಾಂಧಿ ವೃತ್ತದ ಭಾಗದಲ್ಲಿ ರುವ ದ್ವಾರದಿಂದ ಬರುವ ವಾಹನ ಗಳನ್ನು ಎಡ ಭಾಗದಲ್ಲಿರುವ ಖಾಲಿ ಜಾಗದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡ ಲಾಗಿದೆ. ಈ ಸ್ಥಳದಲ್ಲಿ ಬಸ್ಸು ಹಾಗೂ ಟೆಂಪೋಗಳ ನಿಲುಗಡೆಗೆ ಆದ್ಯತೆ ನೀಡ ಲಾಗುತ್ತಿದ್ದು, ಕಾರುಗಳನ್ನು ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ನಿಲುಗಡೆ ಮಾಡಲು ಸೂಚಿಸಲಾಗುತ್ತಿದೆ. ಮೂರು ಸ್ಥಳದಿಂದ ಸುಮಾರು 900ಕ್ಕೂ ಹೆಚ್ಚು ಕಾರು, 500ಕ್ಕೂ ಹೆಚ್ಚು ದ್ವಿಚಕ್ರ ವಾಹನ, 50ಕ್ಕೂ ಹೆಚ್ಚು ಟೆಂಪೋಗಳ ನಿಲುಗಡೆಗೆ ಸ್ಥಳಾವಕಾಶ ದೊರೆತಂತಾಗಿದ್ದು, ದಸರಾ ಸಂದರ್ಭದಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿದಂತಾಗುತ್ತದೆ.

ಈಗಾಗಲೇ ಪಾರ್ಕಿಂಗ್ ವ್ಯವಸ್ಥೆ ಆರಂಭವಾಗಿರುವುದರಿಂದ ಜಯರಾಮ, ಬಲರಾಮ(ಕೋಟೆ ಆಂಜನೇಯಸ್ವಾಮಿ ದೇವಾಲಯ) ದ್ವಾರದಿಂದ ಅರಮನೆ ವೀಕ್ಷಿಸಲು ಬರುವ ಪ್ರವಾಸಿಗರು ಪುರ ಭವನದ ಆವರಣದಲ್ಲಿಯೇ ವಾಹನ ನಿಲುಗಡೆ ಮಾಡುತ್ತಿದ್ದಾರೆ. ಭಾನುವಾರ ವಾಗಿದ್ದರಿಂದ ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ವಾಹನ ನಿಲುಗಡೆಗೆ ಪುರಭವನದಲ್ಲಿ ಮಾಡಿದ್ದ ವ್ಯವಸ್ಥೆ ಸಹಕಾರಿಯಾಗಿತ್ತು.

ಪೂರ್ಣ ಪ್ರಮಾಣದಲ್ಲಿ ಆರಂಭಿಸಿ: 2011ರಲ್ಲಿ ಪುರಭವನದ ಆವರಣದಲ್ಲಿ 18.28 ಕೋಟಿ ರೂ ವೆಚ್ಚದಲ್ಲಿ ಆರಂಭಿ ಸಿದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ 2012ರ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊ ಳಿಸಬೇಕಾಗಿತ್ತು. ಆದರೆ ಕಟ್ಟಡದ ಕಾಮ ಗಾರಿ ಶೇ.80 ರಷ್ಟು ಪೂರ್ಣಗೊಂಡಿದ್ದು, ದ್ವಿಚಕ್ರ ವಾಹನಗಳ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಆರಂಭವಾಗದೆ ಇರುವುದ ರಿಂದ ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಇರುವುದ ರಿಂದ ಗುತ್ತಿಗೆ ಪಡೆದಿದ್ದ ಕಂಪನಿಯನ್ನು ಕಪ್ಪುಪಟ್ಟಿಗೆ ನಗರಪಾಲಿಕೆ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ನ್ಯಾಯಾ ಲಯದ ಮೆಟ್ಟಿಲೇರಿರುವುದರಿಂದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದ ಕಾಮ ಗಾರಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ದಸರಾ ಸಂದರ್ಭದಲ್ಲಿ ಉಂಟಾಗಲಿರುವ ಪಾರ್ಕಿಂಗ್ ಸಮಸ್ಯೆ ನಿವಾರಿಸುವುದಕ್ಕೆ ತಾತ್ಕಾಲಿಕವಾಗಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡವನ್ನು ಬಳಸಿಕೊಳ್ಳಲಾಗುತ್ತಿದೆ.

ನೆರವಾಗಲಿದೆ: 6000 ಚದರ ಅಡಿ ವಿಸ್ತೀರ್ಣದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ವಿಸ್ತೀರ್ಣವಿದೆ. ಮೂರು ಅಂತಸ್ತಿ ನಲ್ಲಿ ಪಿಲ್ಲರ್‍ಗಳನ್ನು ಬಳಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸುಮಾರು 700 ಕಾರು ಹಾಗೂ 500 ದ್ವಿಚಕ್ರ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ಕಟ್ಟಡದ ಮೇಲ್ಭಾಗದಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಬಯಲು ರಂಗಮಂದಿ ರದ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದೆ. ದ್ವಿಚಕ್ರ ವಾಹನ ನಿಲುಗಡೆಗೆ ನಿರ್ಮಿಸಬೇಕಾದ ಕಟ್ಟಡದ ಕಾಮಗಾರಿಗೆ ಕೇವಲ ಪಿಲ್ಲರ್‍ಗಳನ್ನಷ್ಟೇ ಅಳವಡಿಸ ಲಾಗಿದ್ದು, ತಡೆಗೋಡೆ ಸೇರಿದಂತೆ ಯಾವುದೇ ಕೆಲಸ ಪೂರ್ಣಗೊಂಡಿಲ್ಲ. ಮಲ್ಟಿಲೆವೆಲ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದಕ್ಕೆ ಹಾಗೂ ನಿಲು ಗಡೆಯ ಸ್ಥಳದಿಂದ ವಾಪಸ್ಸು ಕೊಂಡೊಯ್ಯಲು ರ್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ.

Translate »