ಡಿ.ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಸಿದ್ದರಾಮಯ್ಯ
ಮೈಸೂರು

ಡಿ.ದೇವರಾಜ ಅರಸು ನಂತರ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದ ಸಿದ್ದರಾಮಯ್ಯ

September 16, 2019

ಮೈಸೂರು,ಸೆ.15(ಆರ್‍ಕೆಬಿ)- ಡಿ.ದೇವ ರಾಜ ಅರಸು ನಂತರ ಹಿಂದುಳಿದ ವರ್ಗ ಗಳ ತುಳಿತಕ್ಕೊಳಪಟ್ಟ ಪ್ರತಿಯೊಂದು ಸಣ್ಣ ಪುಟ್ಟ ಜನಾಂಗಗಳನ್ನು ಗುರುತಿಸಿ ಅವರಿಗಾಗಿ ವಿಶೇಷ ಹಣ ಬಿಡುಗಡೆ ಮಾಡಿ ಅವರ ಅಭಿವೃದ್ಧಿಗೆ ಶ್ರಮಿಸಿದ ವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಕುವೆಂಪುನಗರದ ಚಿಕ್ಕ ಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರಿಯ ಸಂಘ ಕಾರ್ಯಕಾರಿ ಸಮಿತಿ ಪದಾಧಿ ಕಾರಿಗಳ ಸಭೆ ಹಾಗೂ ಮೈಸೂರು ಜಿಲ್ಲಾ ಸಮ್ಮೇಳನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ತುಳಿತಕ್ಕೊಳಪಟ್ಟ ಸಮಾಜಗಳ ಸರ್ವತೋಮುಖ ಏಳಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿ ಸಿದರು. ಹಿಂದುಳಿದ ಸಮಾಜಗಳನ್ನು ಮೇಲೆ ತ್ತಲು ವಿವಿಧ ಜಾತಿ, ವರ್ಗಗಳಿಗೆ ವಿಶೇಷ ವಾಗಿ ಪ್ರತ್ಯೇಕ ನಿಗಮಗಳನ್ನು ಸ್ಥಾಪಿಸುವ ಮೂಲಕ ಸಿದ್ದರಾಮಯ್ಯ ಅವರು ಹಿಂದು ಳಿದ ವರ್ಗಗಳ ನೇತಾರರಾಗಿ ಹೊರ ಹೊಮ್ಮಿ ದ್ದಾರೆ ಎಂದು ಅಭಿಪ್ರಾಯಪಟ್ಟರು.

ಇಂದು ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಸಮಾಜವನ್ನು ಹಾಳು ಮಾಡ ಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯಾವುದೇ ಸಮುದಾಯ, ಜನಾಂಗ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಬೇಕಾ ದರೆ ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಹಲವು ಪಂಗಡಗಳಾಗಿ ಹರಿದು ಹಂಚಿಹೋಗುವ ಬದಲಿಗೆ ಯಾವುದೇ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು. ಹಾಗಾ ದರೆ ಮಾತ್ರ ರಾಜಕೀಯ ಪ್ರತಿನಿಧಿಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.

ಯಾವುದೇ ಸಮುದಾಯ ಅಭಿವೃದ್ಧಿ ಯಾಗ ಬೇಕಾದರೆ ಮೌಢ್ಯ, ಕಂದಾಚಾರಗಳಿಂದ ಹೊರಬರಬೇಕು. ವೈಜ್ಞಾ ನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಆಗ ಮಾತ್ರ ಹಿಂದುಳಿದ ಸಮಾಜಗಳು ಸರ್ವ ರೀತಿಯಲ್ಲೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಎನ್‍ಐಇ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಪ್ರದೇಶ ಹಿಂದೂ, ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ರಾಮನಗೌಡ ಬಸವಗೌಡ ಪಾಟೀಲ್, ಡಾ.ಯೋಗಪ್ಪ, ಸುಭಾಷ್ ರವೀಂದ್ರನಾಥ್ ಹಲಗತ್ತಿ, ಭೀಮಪ್ಪ ಶಂಕರಪ್ಪ ನಾಯಕ್, ಬಿ.ಎಂ. ರವಿಕುಮಾರ್, ಅಶೋಕ್, ನಾಗಪ್ಪ ಶೀಗೇನಹಳ್ಳಿ, ಪ್ರಿಯಾಂಕ ಸುನೀಲ್, ಎಐಬಿಕೆ ಯುವ ಪರಿಷತ್ ರಾಜ್ಯಾಧ್ಯಕ್ಷ ಗಣೇಶ್ ಲಾಳಿಗೆ ಇನ್ನಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Translate »