ನಾಯಕ ಸಮಾಜದ 13 ಸಾಧಕರಿಗೆ ಸನ್ಮಾನ
ಮೈಸೂರು

ನಾಯಕ ಸಮಾಜದ 13 ಸಾಧಕರಿಗೆ ಸನ್ಮಾನ

January 20, 2020

ಮೈಸೂರು, ಜ.19(ಎಸ್‍ಪಿಎನ್)-ಸ್ಪರ್ಧಾ ತ್ಮಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಹಾಗೂ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಯಕ ಸಮಾಜದ 13 ಮಂದಿ ಸಾಧಕರನ್ನು ಭಾನುವಾರ ಅಭಿನಂದಿಸಲಾಯಿತು.

ಮೈಸೂರಿನ ವಿನಾಯಕ ನಗರದಲ್ಲಿ ರುವ ಜಿಲ್ಲಾ ವಾಲ್ಮೀಕಿ ಭವನದಲ್ಲಿ ಭಾನು ವಾರ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸಾಧಕರ ಅಭಿನಂದನೆ ವೇಳೆ ಮಾಜಿ ಸಚಿವ ಸತೀಶ್ ಜಾರಕಿಹೋಳಿ, ಬಿಜೆಪಿ ಮುಖಂಡ ಅಪ್ಪಣ್ಣ, ಮುಕ್ತ ವಿವಿ ಕುಲ ಪತಿ ಪ್ರೊ.ವಿದ್ಯಾಶಂಕರ್ ಉಪಸ್ಥಿತರಿದ್ದರು.

ಕೆಎಎಸ್ ಪರೀಕ್ಷೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅನುಷರಾಣಿ, ಶಿವಕುಮಾರ್ ಯರಗುಡಿ, ಎಂ.ಸುರೇಶ್, ಪ್ರಭಾಕರ್, ಪೂರ್ಣ ಚಂದ್ರ, ನಾಗರಾಜು, ಫಕೀರಪ್ಪ ಇಳಂಗಿ, ತಳವಾರ್ ಅಂಜಿನಪ್ಪ ಹಾಗೂ ಕರಾಮು ವಿವಿ ಶೈಕ್ಷಣಿಕ ಮಂಡಳಿ ಸದಸ್ಯ ಡಾ.ಪಿ. ಆರ್.ಪ್ರದೀಪ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ದಾಮೋದರ, ಸಬ್ ಇನ್ಸ್ ಪೆಕ್ಟರ್ ಮಾದೇಶ್, ಚಂದ್ರಹಾಸ, ಎಲ್. ಮೌಲ್ಯ ಅವರನ್ನು ಸನ್ಮಾನಿಸಲಾಯಿತು.

ನಂತರ ಕರಾಮುವಿ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾತಂತ್ರ್ಯ ಬಂದಾಗ ನಮ್ಮ ಸಮಾಜದಲ್ಲಿ ಅತ್ಯಂತ ಕಡಿಮೆ ವಿದ್ಯಾವಂತರಿದ್ದರು. ಆದರೆ ಈಗ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಮಾಜದವರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇದಕ್ಕೂ ಮುನ್ನ ದಾವಣಗೆರೆಯ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ.ಅಪ್ಪಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರಾಮುವಿಯ ಕುಲಪತಿ ಪ್ರೊ.ವಿದ್ಯಾ ಶಂಕರ್, ಮೈಸೂರು ವಿವಿಯ ವಿಶ್ರಾಂತ ಕುಲಸಚಿವ ಪ್ರೊ.ಆರ್.ರಾಜಣ್ಣ, ಕರ್ನಾ ಟಕ ರಾಜ್ಯ ನಾಯಕರ ಯುವ ಸೇನೆಯ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು, ಸಬ್ ಇನ್ಸ್‍ಪೆಕ್ಟರ್ ಮಾದೇಶ್, ಚಂದ್ರ ಹಾಸ, ಮೌಲ್ಯ ಮತ್ತಿತರರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು.

 

 

 

Translate »