ಖದೀಮನ ಸೆರೆ: 15 ಲಕ್ಷ ರೂ. ಮೌಲ್ಯದ 12 ದ್ವಿಚಕ್ರ ವಾಹನ ವಶ
ಮೈಸೂರು

ಖದೀಮನ ಸೆರೆ: 15 ಲಕ್ಷ ರೂ. ಮೌಲ್ಯದ 12 ದ್ವಿಚಕ್ರ ವಾಹನ ವಶ

September 10, 2019

ಮೈಸೂರು,ಸೆ.9(ಆರ್‍ಕೆ)- ಖದೀಮ ನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀ ಸರು, 15 ಲಕ್ಷ ರೂ. ಮೌಲ್ಯದ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಆಲನ ಹಳ್ಳಿ ಗದ್ದಿಗೆ ನಿವಾಸಿ ಲೇಟ್ ಸುಂದರ ಮೂರ್ತಿ ಅವರ ಮಗ ಕುಮಾರ್(24) ಬಂಧಿತ ಆರೋಪಿಯಾಗಿದ್ದು, ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಮೈಸೂರಿನ ಹೂಟಗಳ್ಳಿ ಎಸ್‍ಆರ್‍ಎಸ್ ಕಾಲೋನಿಯ ಕೆಇಬಿ ಕಚೇರಿ ಎದುರು ಸೆಪ್ಟಂಬರ್ 5 ರಂದು ಖದೀಮ ಪೊಲೀ ಸರಿಗೆ ಸಿಕ್ಕಿಬಿದ್ದಿದ್ದಾನೆ. ಮೈಸೂರು ಜಿಲ್ಲೆ ಹಾಗೂ ಬೆಂಗಳೂರು ನಗರದ ವಿವಿಧೆಡೆ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರು ವುದು ವಿಚಾರಣೆ ವೇಳೆ ತಿಳಿದು ಬಂದ ಹಿನ್ನೆಲೆಯಲ್ಲಿ ಬಂಧಿತನಿಂದ 15,00,000 ರೂ. ಬೆಲೆಬಾಳುವ 12 ದ್ವಿಚಕ್ರ ವಾಹನ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಡಿಸಿಎಂ ಎಂ.ಮುತ್ತುರಾಜ್ ಮಾರ್ಗ ದರ್ಶನದಂತೆ ಸಿಸಿಬಿ ಪ್ರಭಾರ ಎಸಿಪಿ ಜಿ.ಎನ್.ಮೋಹನ್ ಅವರ ನೇತೃತ್ವದಲ್ಲಿ ನಡೆಸಿದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್‍ಪೆಕ್ಟರ್ ಸಿ.ಕಿರಣ್‍ಕುಮಾರ್, ಎಎಸ್‍ಐ ಚಂದ್ರೇಗೌಡ, ಸಿಬ್ಬಂದಿಗಳಾದ ಎಂ.ಆರ್. ಗಣೇಶ್, ಸಿ.ಚಿಕ್ಕಣ್ಣ, ರಾಮಸ್ವಾಮಿ, ಪಿ.ಎನ್. ಲಕ್ಷ್ಮೀಕಾಂತ್, ಸಿ.ಎನ್.ಶಿವರಾಜು, ಅಸ್ಗರ್ ಖಾನ್, ಯಾಕುಬ್ ಷರೀಫ್, ದೀಪಕ್, ರಾಜೇಂದ್ರ, ನಿರಂಜನ, ಚಂದ್ರಶೇಖರ್, ಆನಂದ್, ಅನಿಲ್, ಚಾಮುಂಡಮ್ಮ ಹಾಗೂ ಗೌತಮ್ ಅವರು ಪಾಲ್ಗೊಂಡಿದ್ದರು.

Translate »