ಸರ್ಕಾರಿ ಕಾಲೇಜುಗಳಲ್ಲಿ ಶೇ.20ರಷ್ಟು ಸೀಟು ಹೆಚ್ಚಳ
ಮೈಸೂರು

ಸರ್ಕಾರಿ ಕಾಲೇಜುಗಳಲ್ಲಿ ಶೇ.20ರಷ್ಟು ಸೀಟು ಹೆಚ್ಚಳ

March 15, 2019

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯಗಳ ಅಧ್ಯ ಯನ ವಿಭಾಗಗಳು ಹಾಗೂ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪ್ರವೇಶ ಮಿತಿಯನ್ನು ಶೇ.20ರಷ್ಟು ಹೆಚ್ಚಿಸಲು ಬುಧವಾರ ಮೈಸೂರು ವಿವಿ ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅಧ್ಯಕ್ಷತೆ ಯಲ್ಲಿ ನಡೆದ ಶೈಕ್ಷಣಿಕ ಮಂಡಳಿ ವಿಶೇಷ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ರಾಜ್ಯದಲ್ಲಿ ಕಡಿಮೆ ಇರುವ ದಾಖ ಲಾತಿ ಅನುಪಾತವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ವಿಶ್ವವಿದ್ಯಾನಿಲಯ ಗಳಿಗೂ ಸೂಚನೆ ನೀಡಿರುವ ಹಿನ್ನೆಲೆ ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕುಲಪತಿ ಹೇಳಿದರು.

ದೇಶದ ಒಟ್ಟು ಶೈಕ್ಷಣಿಕ ಅನುಪಾತ ಶೇ.25.2ರಷ್ಟಿದ್ದರೆ, ಕರ್ನಾಟಕದಲ್ಲಿ ಶೇ.26.5 ಇದೆ. ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ತೆಲಂಗಾಣ ರಾಜ್ಯ ಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ದಲ್ಲಿ ದಾಖಲಾತಿ ಅನುಪಾತ ಕಡಿಮೆ ಇರುವುದು ಕಂಡು ಬಂದಿದೆ. ಈ ಹಿನ್ನೆಲೆ ಯಲ್ಲಿ ಶೈಕ್ಷಣಿಕ ದಾಖಲಾತಿಯ ಅನುಪಾತ ಪ್ರಮಾಣ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ನಿಯಮ ಮೈಸೂರು ವಿವಿಯ ಅಧ್ಯ ಯನ ವಿಭಾಗ, ಕೇಂದ್ರ, ಘಟಕ ಕಾಲೇಜು ಗಳು ಹಾಗೂ ಸರ್ಕಾರಿ ಕಾಲೇಜುಗಳಿಗೆ ಅನ್ವಯಿಸಲಿದೆ. ಆದರೆ ಖಾಸಗಿ ಕಾಲೇಜು ಗಳಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದರು.

ಪ್ರವೇಶಾತಿ ಹೆಚ್ಚಳದಿಂದ ಉಪನ್ಯಾಸ ಕರು ಮತ್ತು ಮೂಲ ಸೌಕರ್ಯದ ಕೊರತೆ ಉಂಟಾಗುವುದಿಲ್ಲವೇ ಎಂದು ಸದಸ್ಯರು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ಕುಲಪತಿ, ಸೀಟು ಹೆಚ್ಚಳ ಮಾಡಿದಾಗ ಬೋಧಕ ಸಿಬ್ಬಂದಿ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಈ ಕುರಿತಂತೆ ಸಮಿತಿಯೊಂ ದನ್ನು ರಚಿಸಿ, ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೈಸೂರು ಜಿಲ್ಲೆಯ 76 ಕಾಲೇಜು ಗಳು, ಚಾಮರಾಜನಗರ ಜಿಲ್ಲೆಯ 18, ಮಂಡ್ಯದ 27, ಹಾಸನದ 42 ಕಾಲೇಜು ಗಳ ಸಂಯೋಜನೆ ಮುಂದುವರಿಸಲು ಇದೇ ಸಂದರ್ಭದಲ್ಲಿ ಅನುಮೋದನೆ ದೊರೆ ಯಿತು. ಆದರೆ ಕೆ.ಆರ್.ನಗರದ ಯಡ ತೊರೆ ಶಿಕ್ಷಣ ಕಾಲೇಜು ಹಾಗೂ ಮೈಸೂರಿನ ವಾತ್ಸಲ್ಯ ಕಾಲೇಜ್ ಆಫ್ ಎಜುಕೇಷನ್, ಗುರುಕುಲ ಕಾಲೇಜ್ ಆಫ್ ಎಜುಕೇಷನ್, ರಾಮಕೃಷ್ಣ ಭೌತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ ಶೈಕ್ಷಣಿಕ ಸಾಲಿಗೆ ಸಂಯೋಜನೆ ನೀಡಲಾಗಿಲ್ಲ. ಮೈಸೂರಿನ ಸೇಂಟ್ ಜೋಸೆಫ್ ಸಂಜೆ ಕಾಲೇಜು, ಪಿರಿಯಾಪಟ್ಟಣದ ಯಜಮಾನ್ ಪ್ರಥಮ ದರ್ಜೆ ಕಾಲೇಜಿನ ಸಂಯೋಜನೆ ಮುಂದುವರಿಕೆಗೆ ಈವರೆಗೆ ಅರ್ಜಿ ಸಲ್ಲಿಸಿಲ್ಲ ಎಂದು ಸ್ಪಷ್ಪಪಡಿಸಿದರು.

ಚಂದ್ರಶೇಖರ್ ಫೌಂಡೇಷನ್ ಕಾವೇರಿ ಗ್ರೂಪ್ ಆಫ್ ಹೆಲ್ತ್ ಸೈನ್ಸ್, ಮೈಸೂರು, ಶ್ರೀ ವಿನಾಯಕ ಶಿಕ್ಷಣ ಸಂಸ್ಥೆಯ ಆಯ್ಸ್ಟರ್ ಪ್ರಥಮ ದರ್ಜೆ ಕಾಲೇಜು, ಪಾಂಡವ ಪುರ, ಗೋಲ್ಡನ್ ಪದವಿ ಕಾಲೇಜು, ಹಾಸನ, ಎಸ್.ಡಿ.ಜಯರಾಂ ಸಮಗ್ರ ಗ್ರಾಮೀ ಣಾಭಿವೃದ್ಧಿ ಸಂಸ್ಥೆಯ ಎಸ್.ಡಿ. ಜಯರಾಂ ಪ್ರಥಮ ದರ್ಜೆ ಕಾಲೇಜು, ಮಂಡ್ಯ ಈ ಕಾಲೇಜುಗಳಿಗೆ ಇದೇ ಮೊದಲ ಬಾರಿಗೆ ಸಂಯೋಜನೆ ನೀಡಲಾಗಿದೆ ಎಂದು ಹೇಳಿ ದರು. ಸಭೆಯಲ್ಲಿ ಕುಲಸಚಿವ ಪ್ರೊ.ಲಿಂಗ ರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವ ಡಾ.ಕೆ.ಎಂ.ಮಹದೇವನ್ ಉಪಸ್ಥಿತರಿದ್ದರು.

Translate »