ಹಣ, ಉಡುಗೊರೆ ತಪಾಸಣೆಗೆ ಸಾರ್ವಜನಿಕರ ಸಹಕಾರ ಅಗತ್ಯ
ಮೈಸೂರು

ಹಣ, ಉಡುಗೊರೆ ತಪಾಸಣೆಗೆ ಸಾರ್ವಜನಿಕರ ಸಹಕಾರ ಅಗತ್ಯ

March 15, 2019

ಬೆಂಗಳೂರು: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿ ಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ತಡೆ ಗಟ್ಟಲು ವ್ಯಾಪಕ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹಣ, ಉಡುಗೊರೆ ಪತ್ತೆಗಾಗಿ ತಪಾಸಣೆ ನಡೆಸುವ ವೇಳೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ರಾಜ್ಯದ ಮುಖ್ಯ ಚುನಾ ವಣಾಧಿಕಾರಿ ಸಂಜೀವ್ ಕುಮಾರ್ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಪ್ರಯಾಣದ ವೇಳೆಯಲ್ಲಿ ದಾಖಲೆಗಳಿಲ್ಲದೆ 50 ಸಾವಿರ ರೂಪಾಯಿಗೂ ಮೇಲ್ಪಟ್ಟು ಹಣ ಇಟ್ಟುಕೊಳ್ಳುವಂತಿಲ್ಲ.10 ಸಾವಿರ ರೂಪಾಯಿಗೂ ಹೆಚ್ಚಿನ ಮೌಲ್ಯದ ಉಡುಗೊರೆಗಳನ್ನು ತೆಗೆದುಕೊಂಡು ಹೋಗಲು ಅಗತ್ಯ ದಾಖಲೆ ಒದಗಿಸ ಬೇಕು ಎಂದರು.

ನಗದು ಸಾಗಿಸುವಾಗ ಬ್ಯಾಂಕುಗಳು ನಗದು ಹಣವನ್ನು ಹೊರಗುತ್ತಿಗೆಯ ಏಜೆನ್ಸಿ ಅಥವಾ ಕಂಪೆನಿ ವಾಹನಗಳಲ್ಲಿ ಸಾಗಿಸಬಾರದು. ಹೊರಗುತ್ತಿಗೆಯ ಏಜೆನ್ಸಿಗಳು ಕಂಪೆನಿಗಳು ಬ್ಯಾಂಕಿನ ಎಟಿಎಂ ಗಳಿಗೆ ಹಣ ತುಂಬಿಸಲು ಮತ್ತು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ನಗದು ಸಾಗಿಸುವ ಸಂದರ್ಭದಲ್ಲಿ ಬ್ಯಾಂಕಿ ನಿಂದ ಅಧಿಕೃತ ಪತ್ರ ಅಥವಾ ದಾಖಲೆ ಗಳನ್ನು ಹೊಂದಿರಬೇಕು. ಹಣಸಾಗಿಸುವ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಎಂದು ಸ್ಪಷ್ಟಪಡಿಸಿದರು.

ಚೆಕ್ ಪೆÇೀಸ್ಟ್‍ಗಳು ಮತ್ತಿತರ ಕಡೆಗಳಲ್ಲಿ ಜನ ಸಾಮಾನ್ಯರಿಗೆ ಸಣ್ಣಪುಟ್ಟ ಕಿರಿಕಿರಿ ಎದುರಾಗಬಹುದು.ಹಾಗೊಂದು ವೇಳೆ ಅನಗತ್ಯ ತೊಂದರೆ ಹಾಗೂ ನಿಯಮ ಬಾಹಿರವಾಗಿ ತಪಾಸಣೆ ಮಾಡಿರುವ ಬಗೆಗಿನ ದೂರುಗಳನ್ನು ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಮುಂದೆ ಬಾಧಿತರು ದೂರು ಸಲ್ಲಿಸಬಹುದು ಎಂದು ಸಂಜೀವ್ ಕುಮಾರ್ ಹೇಳಿದರು.

ಈವರೆಗೆ ರಾಜ್ಯದಲ್ಲಿ ಗೋಡೆಬರಹ, ಪೆÇೀಸ್ಟರ್, ಬ್ಯಾನರ್ ಸೇರಿಸಿ ಸಾರ್ವಜನಿಕ ಆಸ್ತಿಗೆ ಸಂಬಂಧಿಸಿದಂತೆ ಒಟ್ಟು 1,91,810 ಹಾಗೂ ಖಾಸಗಿ ವಲಯದಡಿ ಒಟ್ಟು 75,087 ದೂರುಗಳು ದಾಖಲಾಗಿವೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ದಂತೆ ರಾಜ್ಯಾದ್ಯಂತ ಚುನಾವಣೆ ಸಂದರ್ಭ ದಲ್ಲಿ ನಡೆಯಬಹುದಾದ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ 1512 ಫ್ಲೈಯಿಂಗ್ ಸ್ಕ್ವಾಡ್ ಮತ್ತು 1837 ಸರ್ವೆಲೆನ್ಸ್ ತಂಡ ಗಳನ್ನು ರಚಿಸಲಾಗಿದೆ ಎಂದರು ಸಂಜೀವ್ ಕುಮಾರ್ ಮಾಹಿತಿ ನೀಡಿದರು.

ರಾಜಕೀಯೇತರ ಕಾರ್ಯಕ್ರಮಕ್ಕೆ ಆಯೋಗದ ಅನುಮತಿ ಬೇಕಿಲ್ಲ
ಬೆಂಗಳೂರು: ಮದುವೆ, ಹುಟ್ಟುಹಬ್ಬದಂತಹ ರಾಜಕೀಯೇತರ ಖಾಸಗಿ ಕಾರ್ಯಕ್ರಮಗಳ ಆಯೋಜನೆಗೆ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಕೊಳ್ಳುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಮದುವೆ, ಹುಟ್ಟುಹಬ್ಬದಂತಹ ಖಾಸಗಿ ಕಾರ್ಯ ಕ್ರಮಗಳನ್ನು ಆಯೋಜಿಸಲು ಅನುಮತಿ ನೀಡುವಂತೆ ಸಾರ್ವಜನಿಕರು ಜಿಲ್ಲಾ ಚುನಾ ವಣಾಧಿಕಾರಿಗಳು ಮತ್ತು ಮಾದರಿ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳನ್ನು ಭೇಟಿ ಮಾಡುತ್ತಿದ್ದಾರೆ. ವಾಸ್ತವವಾಗಿ ಇಂತಹ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ಅಗತ್ಯವಿಲ್ಲ. ಆದರೆ ಇಂತಹ ಕಾರ್ಯಕ್ರಮ ಆಯೋ ಜಿಸುವ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ಊಟದ ವ್ಯವಸ್ಥೆ ಮಾಡುವುದು, ಮದ್ಯದ ವ್ಯವಸ್ಥೆ ಮಾಡುವುದು ಸೇರಿದಂತೆ ಮತದಾರರನ್ನು ಓಲೈಸುವ ಯಾವುದೇ ಕೆಲಸ ಮಾಡಿದಲ್ಲಿ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸಾರ್ವಜನಿಕರು ಪ್ರಯಾಣದ ವೇಳೆಯಲ್ಲಿ 50,000ಕ್ಕಿಂತ ಹೆಚ್ಚು ನಗದು ಹಾಗೂ 10,000ಕ್ಕಿಂತ ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಒಯ್ಯುವಂತಿಲ್ಲ. ಒಂದು ವೇಳೆ ಹಣ ಕೊಂಡೊಯ್ಯುವುದಿದ್ದರೆ ಸೂಕ್ತ ದಾಖಲೆಗಳನ್ನು ತಮ್ಮೊಂದಿಗೆ ಇರಿಸಿಕೊಳ್ಳಬೇಕು. ಚೆಕ್ ಪೆÇೀಸ್ಟ್?ಗಳಲ್ಲಿ ತಪಾಸಣೆ ವೇಳೆ ಸಮಸ್ಯೆಯಾದರೆ ಪರಿಶೀಲಿಸಲು ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಸಾರ್ವಜನಿಕರು ತಪಾಸಣೆ ವೇಳೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪೇಟಿಎಂ ಸೇರಿದಂತೆ ವಿವಿಧ ಬ್ಯಾಂಕಿಂಗ್ ವ್ಯವಹಾರಗಳ ಮೇಲೆ ನಿಗಾ ಇಡುವುದು ಕಷ್ಟ. ಆದರೂ ಒಂದೇ ಅಕೌಂಟ್‍ನಿಂದ ಭಾರಿ ಮೊತ್ತದ ಹಣ ವರ್ಗಾವಣೆಯಾಗುತ್ತಿದ್ದರೆ ಅಂತಹ ಖಾತೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಬ್ಯಾಂಕ್‍ಗಳು ಹಾಗೂ ಎಟಿಎಂಗಳಿಗೆ ಹಣ ಸಾಗಿಸುವ ವಾಹನದವರೂ ಸಹ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆಗಳನ್ನು ನೀಡಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Translate »