ಲೋಕಸಭಾ ಚುನಾವಣೆ: ಪತ್ರಿಕೆ,  ಸುದ್ದಿ ವಾಹಿನಿಗಳ ಮೇಲೆ ಅಹದ್ದಿನ ಕಣ್ಣು
ಮೈಸೂರು

ಲೋಕಸಭಾ ಚುನಾವಣೆ: ಪತ್ರಿಕೆ, ಸುದ್ದಿ ವಾಹಿನಿಗಳ ಮೇಲೆ ಅಹದ್ದಿನ ಕಣ್ಣು

March 15, 2019

ಮೈಸೂರು: ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸುವ ರಾಜಕಾರಣಿಗಳ ಹೇಳಿಕೆ ಹಾಗೂ ಪತ್ರಿಕೆ ಮತ್ತು ವಾಹಿನಿ ಗಳಲ್ಲಿ ಬಿತ್ತರವಾಗುವ ಸುದ್ದಿಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ `ಮೀಡಿಯಾ ಮಾನಿಟರಿಂಗ್ ಸೆಲ್’ ಆರಂಭಿಸಿದೆ.

ಕೋರ್ಟ್ ಸಭಾಂಗಣದಲ್ಲಿರುವ ಈ ಸೆಲ್‍ನಲ್ಲಿ ಮೊದಲ ಹಂತದಲ್ಲಿ 4 ಟಿವಿ ಅಳ ವಡಿಸಲಾಗಿದೆ. ಎಲ್ಲಾ ಪತ್ರಿಕೆಗಳನ್ನು ಪರಿ ಶೀಲಿಸುವ ತಂಡವಿದೆ. ದಿನದ 24 ಗಂಟೆ 3 ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ನಿಯೋಜಿಸಲಾಗಿದೆ. ಅಪರ ಜಿಲ್ಲಾ ಧಿಕಾರಿ ಜಿ.ಅನುರಾಧ ಅವರ ನೇತೃತ್ವದಲ್ಲಿ ಆರಂಭಿಸಲಾಗಿರುವ ಈ ಸೆಲ್‍ಗೆ ಹಿಂದು ಳಿದ ವರ್ಗಗಳ ಕಲ್ಯಾಣಾಧಿಕಾರಿ ನೀನಾ ಅವರನ್ನು ಅಧ್ಯಕ್ಷೆಯಾಗಿ ನಿಯೋಜಿಸಲಾ ಗಿದೆ. ಸೆಲ್‍ನಲ್ಲಿ ಮೀಡಿಯಾ ಸರ್ಟಿಫಿಕೇ ಷನ್ ಅಂಡ್ ಮಾನಿಟರಿಂಗ್ ಕಮಿಟಿ (ಎಂಸಿಎಂಸಿ), ಮೀಡಿಯಾ ಮಾನಿ ಟರಿಂಗ್ ಸೆಲ್ ಹಾಗೂ ಮೀಡಿಯಾ ಸರ್ಟಿಫಿಕೇ ಷನ್ ಸೆಲ್(ಎಂಎಂಸಿ) ಎಂಬ 3 ವಿಭಾಗ ಗಳಿವೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾದ ನಂತರ ಮೀಡಿಯಾ ಮಾನಿ ಟರಿಂಗ್ ಸೆಲ್ ಮತ್ತಷ್ಟು ಚುರುಕಾಗಲಿದೆ. ಮಾ.17ರ ನಂತರ ಇನ್ನೂ 6 ಟಿವಿಗಳನ್ನು ಅಳವಡಿಸಲಾಗುತ್ತದೆ. ಈ ಸೆಲ್‍ಗೆ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಸದಸ್ಯ ಕಾರ್ಯದರ್ಶಿಯಾಗಿದ್ದು ಸದಸ್ಯರಾಗಿ ಬಿ.ಎಸ್.ಮೀನಾಕ್ಷಿ, ಮೈಸೂರು ವಿಶ್ವವಿದ್ಯಾನಿಲಯದ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿ.ಕೆ.ಪುಟ್ಟಸ್ವಾಮಿ, ಆಕಾಶವಾಣಿ ಕಾರ್ಯಕ್ರಮಾಧಿಕಾರಿ ಶಿವಸ್ವಾಮಿ, ಶ್ರೀನಿ ವಾಸ್, ಕೆ.ಎಸ್.ದಿವಾಕರ್, ಶೋಭ ಇನ್ನಿತರ ರನ್ನು ನಿಯೋಜಿಸಲಾಗಿದೆ. ಈ ಸೆಲ್‍ನ ಸದಸ್ಯರು ಸುದ್ದಿ ವಾಹಿನಿಗಳು, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ರಾಜಕೀಯ, ಚುನಾವಣೆಗೆ ಸಂಬಂ ಧಿಸಿದ ಸುದ್ದಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಜಾಹೀರಾತು ಗಳ ಮೇಲೂ ಹದ್ದಿನ ಕಣ್ಣಿಡಲಿದ್ದಾರೆ. ನೀತಿ ಸಂಹಿತೆಗೆ ಉಲ್ಲಂಘಿಸುವ ಸುದ್ದಿ, ಜಾಹೀ ರಾತನ್ನು ಗುರುತು ಮಾಡಿ ಜಿಲ್ಲಾ ಚುನಾ ವಣಾಧಿಕಾರಿ ಗಮನಕ್ಕೆ ತರುತ್ತಾರೆ. ಅಭ್ಯರ್ಥಿ ಗಳು ಹಾಗೂ ಪಕ್ಷಗಳ ಜಾಹೀ ರಾತುಗಳನ್ನು ಸೂಕ್ಷ್ಮವಾಗಿ ಗಮನಿಸಿ ಚುನಾವಣಾ ವೆಚ್ಚಕ್ಕೆ ಸೇರಿಸುವ ಕೆಲಸವನ್ನೂ ಮಾಡುತ್ತಾರೆ. ಅಲ್ಲದೆ, ಮತ ಸೆಳೆಯಲು ನೀಡುವ ಭರವಸೆ, ಜನಾಂಗಗಳ ವಿರುದ್ಧದ ಹೇಳಿಕೆಗಳ ವಿರು ದ್ಧವೂ ಈ ಸೆಲ್ ಕ್ರಮ ಕೈಗೊಳ್ಳಲಿದೆ. ನಾಮ ಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಗಳು ನೀಡುವ ಸಾಮಾಜಿಕ ಜಾಲತಾಣಗಳ ಖಾತೆಯ ಮಾಹಿತಿ ಪಡೆದು, ಅವುಗಳ ಮೇಲೂ ಈ ಸೆಲ್‍ನ ಸಿಬ್ಬಂದಿ ನಿಗಾ ಇಡಲಿದ್ದಾರೆ.

Translate »