ಏ.10ರಂದು ಮೈಸೂರಲ್ಲಿ ಮಾಯಾವತಿ ಪ್ರಚಾರ
ಮೈಸೂರು

ಏ.10ರಂದು ಮೈಸೂರಲ್ಲಿ ಮಾಯಾವತಿ ಪ್ರಚಾರ

March 15, 2019

ಮೈಸೂರು: ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಬಹುಜನ ಸಮಾಜಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಏ.10ರಂದು ಮೈಸೂರಿಗೆ ಭೇಟಿ ನೀಡುತ್ತಿದ್ದು, ಅಂದು ಬೃಹತ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಇಡೀ ರಾಜ್ಯದಲ್ಲಿ ಒಂದು ಕಡೆ ಮಾತ್ರ ಮೈಸೂರಿನಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕಾಗಿ ಬಿಎಸ್‍ಪಿ ರಾಜ್ಯಾಧ್ಯಕ್ಷ ಎನ್.ಮಹೇಶ್ ಗುರುವಾರ ಮೈಸೂರು ಮಹಾರಾಜ ಕಾಲೇಜು ಮೈದಾನ ಸಮಾವೇಶಕ್ಕೆ ಸೂಕ್ತವೇ ಎಂದು ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಕರ್ನಾಟಕದಲ್ಲಿ ನಡೆ ಯುವ ಮೊದಲ ಹಂತದ ಲೋಕ ಸಮರಕ್ಕೆ ಮಾಯಾವತಿ ನೇತೃತ್ವದ ಬಿಎಸ್‍ಪಿ ಸಿದ್ಧತೆ ಯಲ್ಲಿ ತೊಡಗಿದೆ. ಅವರ ಭೇಟಿ ಹಿನ್ನೆಲೆ ಯಲ್ಲಿ ಏ.10ರಂದು ಮೈಸೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ಪಕ್ಷದ ಉತ್ತರಪ್ರದೇಶ ಸಂಸದರು, ಮಾಜಿ ಸಚಿವರು ಸೇರಿದಂತೆ ರಾಜ್ಯದ ಬಿಎಸ್‍ಪಿ ನಾಯಕರು ಸಹ ಭಾಗ ವಹಿಸಲಿದ್ದಾರೆ. ಸದ್ಯಕ್ಕೆ ಇಡೀ ರಾಜ್ಯದಲ್ಲಿ ಮೈಸೂರಿಲ್ಲಿ ಒಂದು ಕಡೆ ಮಾತ್ರ ಸಮಾ ವೇಶ ನಿಗದಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ತಮ್ಮ ಪಕ್ಷದ ವರ್ಚಸ್ಸು ಪ್ರದ ರ್ಶಿಸಲು ಬಿಎಸ್‍ಪಿ ಅಧ್ಯಕ್ಷೆ ಮಾಯಾವತಿ ಮುಂದಾಗಿದ್ದಾರೆ. ಮೈಸೂರು, ಚಾಮ ರಾಜನಗರ, ಮಂಡ್ಯ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಎಲ್ಲಾ 28 ಲೋಕ ಸಭಾ ಕ್ಷೇತ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸಮಾವೇಶದಲ್ಲಿ ಸೇರಿಸ ಲಾಗುವುದು. ಅದಕ್ಕಾಗಿ ಸಿದ್ಧತೆ ಕೈಗೊಳ್ಳ ಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಪಕ್ಷದ ವಲಯ ಉಸ್ತುವಾರಿ ಸೋಸಲೆ ಸಿದ್ದರಾಜು, ಮೈಸೂರು ನಗರಾಧ್ಯಕ್ಷ ಬಸವರಾಜು ಇನ್ನಿತರರು ಇದ್ದರು.

Translate »