ಮೈಸೂರು ಜಿಲ್ಲೆಯಲ್ಲಿದ್ದಾರೆ 24,65,102 ಮತದಾರರು
ಮೈಸೂರು

ಮೈಸೂರು ಜಿಲ್ಲೆಯಲ್ಲಿದ್ದಾರೆ 24,65,102 ಮತದಾರರು

January 18, 2019

ಮೈಸೂರು: ಚುನಾವಣಾ ಆಯೋಗದ ಸೂಚನೆಯಂತೆ 2018ರ ಅಕ್ಟೋಬರ್‍ನಿಂದ 2019ರ ಜನವರಿ 16ರವರೆಗೆ ನಡೆದ ಮೈಸೂರು ಜಿಲ್ಲೆಯ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪೂರ್ಣಗೊಂಡಿದ್ದು, ಈಗ ಜಿಲ್ಲೆಯಲ್ಲಿ ಒಟ್ಟು 24,65,102 ಮತದಾರರಿದ್ದಾರೆ.

ಈ ಪೈಕಿ 12,34,454 ಪುರುಷರು ಹಾಗೂ 12,30,648 ಮಹಿಳೆಯರಿದ್ದಾರೆ. ಜೊತೆಗೆ 18ರಿಂದ 19 ವರ್ಷದವರು 8,678 ಹಾಗೂ 19 ವರ್ಷ ಮೇಲ್ಪಟ್ಟವರು 15,740 ಮಂದಿ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ಪಟ್ಟಿ ಸಂಖ್ಯೆಗಿಂತ ಪರಿಷ್ಕøತ ಪಟ್ಟಿಯಲ್ಲಿ 15,607 ಮತದಾರರು ಹೆಚ್ಚಳಗೊಂಡಿ ದ್ದಾರೆ. ಮೈಸೂರು ಡಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಈ ವಿವರ ನೀಡಿದ ಡಿಸಿ ಅಭಿರಾಮ್ ಜಿ.ಶಂಕರ್, ಮತ ದಾನದ ದಿನದಂದು ಪಟ್ಟಿಯಲ್ಲಿ ಹೆಸರಿಲ್ಲ ಎಂದು ದೂರುವ ಬದಲು ಈಗಲೇ ಸಾರ್ವಜನಿಕರು ಪರಿಷ್ಕøತ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಒಂದು ವೇಳೆ ಹೆಸರು ಕೈಬಿಟ್ಟು ಹೋಗಿದ್ದರೆ ಸೇರ್ಪಡೆ ಮಾಡಿ ಕೊಳ್ಳಲು ಅವಕಾಶ ನೀಡಲಾಗುವುದು. ಅಂತಿಮ ಕ್ಷಣದಲ್ಲಿ ಮತದಾರರು ಪರಿತಪಿಸದೇ ಈಗಲೇ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದರ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಎಂದು ಕೋರಿದರು.

ಲಿಂಗಾನುಪಾತ ಜಿಲ್ಲೆಯಲ್ಲಿ ಉತ್ತಮ: ಪರಿಷ್ಕರಣೆ ನಿರಂತರ ಪ್ರಕ್ರಿಯೆಯಾಗಿದ್ದು, ನೋಂದಣಿ ಮಾಡಿಕೊಳ್ಳಲು ಅವಕಾಶ ಇರುತ್ತದೆ. ಪಟ್ಟಿಯಲ್ಲಿ ಯಾವುದೇ ತಿದ್ದುಪಡಿ ಮಾಡಿಕೊಳ್ಳ ಬೇಕಿದ್ದಲ್ಲಿ ನಮೂನೆ-8 ಅರ್ಜಿ ಸಲ್ಲಿಸಲು ಅವಕಾಶವಿದೆ. ಪರಿಷ್ಕøತ ಪಟ್ಟಿಯಲ್ಲಿ ಮಹಿಳೆಯರು ಹಾಗೂ ಪುರುಷರ ನಡುವಿನ ಅನುಪಾತ ಗಮನಿಸಿದರೆ, ಸಾವಿರ ಪುರುಷರಿಗೆ 997 ಮಂದಿ ಮಹಿಳೆಯರಿದ್ದಾರೆ. ಆದರೆ ಈ ಹಿಂದೆ ಸಾವಿರ ಪುರುಷ ರಿಗೆ 993 ಮಹಿಳೆಯರು ಮಾತ್ರವಿದ್ದರು. ಜೊತೆಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಸಾವಿರ ಪುರುಷರಿಗೆ 960 ಮಹಿಳೆಯರಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಲಿಂಗಾನುಪಾತ ಉತ್ತಮವಾಗಿರುವುದನ್ನು ಕಾಣಬಹುದು ಎಂದು ವಿವರಿಸಿದರು.

2011ರ ಜನಗಣತಿಗೆ ಅನುಗುಣವಾಗಿ ಜಿಲ್ಲೆಯ ಯೋಜಿತ ಜನಸಂಖ್ಯೆ 33 ಲಕ್ಷದ 44 ಸಾವಿರದ 979 ಇದ್ದು, ಇದ ರಲ್ಲಿ ಶೇ.73.7ರಷ್ಟು ಮತದಾರರು (ಇಪಿ ಅನುಪಾತದಂತೆ) ಇದ್ದಾರೆ. ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು ಜನಸಂಖ್ಯೆಯಲ್ಲಿ ಶೇ.71.7ರಷ್ಟು ಮತದಾರರು ಇದ್ದಾರೆ ಎಂದು ತಿಳಿಸಿದರು.

55 ಭಾವಚಿತ್ರರಹಿತ: ಜಿಲ್ಲೆಯ ಪರಿಷ್ಕøತ ಮತದಾರರ ಪಟ್ಟಿಯಲ್ಲಿ 55 ಮತದಾರರ ವಿವರಗಳು ಭಾವಚಿತ್ರರಹಿತ ವಾಗಿವೆ. ಈ ಪೈಕಿ ಎನ್‍ಆರ್ ಕ್ಷೇತ್ರ ಒಂದರಲ್ಲೇ 41 ಮತದಾರರ ಭಾವಚಿತ್ರ ಇಲ್ಲವಾಗಿದ್ದು, ನಕಲು ಹಾಗೂ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಈ ತೊಡಕು ಉಂಟಾಗಿದೆ. ಶೀಘ್ರದಲ್ಲಿ ಇದನ್ನು ಸರಿಪಡಿಸಲಾಗುವುದು ಎಂದರು. ವಿಶೇಷ ಪರಿಷ್ಕರಣೆ ವೇಳೆ ಯಲ್ಲಿ ಸೇರ್ಪಡೆಗಾಗಿ 26,391 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 24,418 ಅರ್ಜಿಗಳು ಅಂಗೀಕಾರಗೊಂಡಿವೆ. ಉಳಿದ 1957 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕøತಗೊಂಡಿವೆ. ಪಟ್ಟಿಯಿಂದ ಹೆಸರು ಕೈಬಿಡುವ ಸಂಬಂಧ 42,821 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 292 ತಿರಸ್ಕøತಗೊಂಡು 42,510 ಅರ್ಜಿಗಳಿಗೆ ಅಂಗೀಕಾರ ನೀಡಲಾಗಿದೆ. ಅದೇ ರೀತಿ ಹೆಸರು ಬದಲಾವಣೆ ಹಾಗೂ ವಿಳಾಸ ಬದಲಾವಣೆ ಸೇರಿದಂತೆ ವಿವರ ಗಳ ತಿದ್ದುಪಡಿಗಾಗಿ ಸಲ್ಲಿಕೆಗೊಂಡಿದ್ದ 8,811 ಅರ್ಜಿಗಳ ಪೈಕಿ 8,388 ಅರ್ಜಿ ಊರ್ಜಿತಗೊಳಿಸಲಾಗಿದೆ ಎಂದು ಹೇಳಿದರು.

ಕಳೆದ 3 ವರ್ಷಗಳ ಅವಧಿಯಲ್ಲಿ ಸಾವನ್ನಪ್ಪಿದ್ದವರ ಹೆಸರು ಗಳು ಪಟ್ಟಿಯಲ್ಲಿ ಉಳಿದುಕೊಂಡಿದ್ದವು. ಇಂತಹ 15,336 ಪ್ರಕರಣಗಳನ್ನು ಪತ್ತೆಹಚ್ಚಿ, ಕೈಬಿಡಲಾಗಿದೆ. ಪುನರಾವರ್ತನೆ ಗೊಂಡಿದ್ದ 4,486 ಹೆಸರುಗಳನ್ನು ಕೈಬಿಡಲಾಗಿದೆ. ಮೈಸೂರಿನ ಕೆಆರ್, ಎನ್‍ಆರ್ ಹಾಗೂ ಚಾಮರಾಜ ಕ್ಷೇತ್ರಗಳಿಗೆ ಸಂಬಂಧಿಸಿ ದಂತೆ ಮೃತ ಹಾಗೂ ಸ್ಥಳಾಂತರಗೊಂಡರೂ ಪಟ್ಟಿಯಲ್ಲಿ ಉಳಿದಿದ್ದ 28 ಸಾವಿರಕ್ಕೂ ಹೆಚ್ಚು ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂದು ವಿವರಿಸಿದರು.

ಬೂತ್ ಮಟ್ಟದಲ್ಲಿ ಏಜೆಂಟ್‍ಗಳನ್ನು ನೇಮಿಸಿ: ರಾಜಕೀಯ ಪಕ್ಷಗಳು ಜಿಲ್ಲೆಯ ಪ್ರತಿ ಮತಗಟ್ಟೆಗೂ ಬೂತ್ ಮಟ್ಟದ ಏಜೆಂಟರ್‍ಗಳನ್ನು ನೇಮಕ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಈ ಹಿಂದೆ ಇದ್ದ 2687 ಒಟ್ಟು ಮತಗಟ್ಟೆಗಳ ಜೊತೆಗೆ ಹೊಸದಾಗಿ 234 ಮತಗಟ್ಟೆಗಳನ್ನು ರಚಿಸಲಾಗುತ್ತಿದೆ ಎಂದರು. ಆಹಾರ ಇಲಾಖೆ ಜಂಟಿ ನಿರ್ದೇಶಕ ಪಿ.ಶಿವಣ್ಣ, ವಾರ್ತಾ ಇಲಾಖೆ ಸಹಾ ಯಕ ನಿರ್ದೇಶಕ ಆರ್.ರಾಜು ಮತ್ತಿತರರು ಹಾಜರಿದ್ದರು.

ಮೈಸೂರಲ್ಲಿ ನಾಳೆಯಿಂದ 2 ದಿನ ಗೆಡ್ಡೆ ಗೆಣಸು ಮೇಳ
ಮೈಸೂರು: ಗೆಡ್ಡೆ ಗೆಣಸುಗಳ ಅಪೂರ್ವ ಲೋಕವನ್ನು ಜನರಿಗೆ ಪರಿಚಯಿಸಲು ಸಹಜ ಸಮೃದ್ಧ ಬಳಗ ಹಾಗೂ ಬಾಗಲಕೋಟೆ ತೋಟ ಗಾರಿಕೆ ವಿಶ್ವ ವಿದ್ಯಾಲಯದ ಆಶ್ರಯದಲ್ಲಿ ಜ.19 ಮತ್ತು 20ರಂದು ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿ `ಗೆಡ್ಡೆ-ಗೆಣಸುಗಳ ಮೇಳ’ ಆಯೋಜಿಸಲಾಗಿದೆ.

ಕರ್ನಾಟಕದ ವಿವಿಧ ಭಾಗಗಳು ಹಾಗೂ ಕೇರಳದ ವಯನಾಡಿನಿಂದ 15ಕ್ಕೂ ಹೆಚ್ಚು ರೈತ ಗುಂಪುಗಳು ಪಾಲ್ಗೊಳ್ಳಲಿದ್ದು, ವೈವಿ ಧ್ಯಮಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನ ಮಾಡಲಿದ್ದಾರೆ. ಮೇಳದ ಅಂಗವಾಗಿ ಪಾಕ ಸ್ಪರ್ಧೆ, ಪುಸ್ತಕ ಬಿಡುಗಡೆ, ತರಬೇತಿ ಹಾಗೂ ವಿಚಾರ ಸಂಕಿರಣಗಳು ನಡೆಯ ಲಿವೆ. ಪ್ರಕೃತಿಯ ವಿಸ್ಮಯಗಳಲ್ಲಿ ಒಂದಾದ ಗೆಡ್ಡೆ ಗೆಣಸುಗಳು ಆಹಾರದ ಜೊತೆಗೆ ಪೋಷಕಾಂಶ ಭದ್ರತೆಯನ್ನು ಒದಗಿಸು ತ್ತಿವೆ. ಆಹಾರದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳ ನಂತರ ಗೆಡ್ಡೆ-ಗೆಣಸುಗಳಿಗೆ ಮುಖ್ಯ ಸ್ಥಾನ.

ಶೇ.20ರಷ್ಟು ಜನರಿಗೆ ಆಹಾರ ಭದ್ರತೆ ಒದಗಿಸುವ ಈ ಗುಂಪಿನ ಆಹಾರಗಳು ದನಕರುಗಳಿಗೆ ಮೇವು, ಉದ್ಯಮಗಳಿಗೆ ಕಚ್ಛಾ ಪದಾರ್ಥವನ್ನು ಪೂರೈಸುತ್ತವೆ. ಭೂತಾಯಿ ಮಡಿಲಿನ ಸೃಷ್ಟಿಯಾದ ಈ ಕಂದಮೂಲ ಗಳನ್ನು ಋಷಿಮುನಿಗಳು ಮತ್ತು ಆದಿವಾಸಿ ಗಳು ಸೇವಿಸಿ, ಆರೋಗ್ಯವಂತರಾಗಿ ಜೀವಿ ಸುತ್ತಿದ್ದರು ಎಂಬುದಕ್ಕೆ ಸಾಕಷ್ಟು ಉಲ್ಲೇಖ ಗಳಿವೆ.

ಪೋಷಕಾಂಶದ ಕಣಜವಾಗಿ ರುವ ಗೆಡ್ಡೆ ಗೆಣಸುಗಳಲ್ಲಿ ನಾರಿನಂಶ ಹೆಚ್ಚಿ ರುವುದರಿಂದ ಇದು ವಿಸರ್ಜನಾ ಕ್ರಿಯೆಗೂ ಸಹಕಾರಿಯಾಗಿದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ, ಚರ್ಮದ ಮೈಕಾಂತಿ ವೃದ್ಧಿಸಲು ಗೆಡ್ಡೆ-ಗೆಣಸು ಸಹಕಾರಿ. ಬಹು ತೇಕ ಗೆಡ್ಡೆ ಗೆಣಸುಗಳು ಹೆಚ್ಚಿನ ಪ್ರಮಾ ಣದ ಶಕ್ತಿ, ಸಾರಜನಕ, ಖನಿಜ ಲವಣ ಗಳು, ಜೀವಸತ್ವಗಳು, ಆಂಟಿ ಆಕ್ವಿಡೆಂಟ್ ಹಾಗೂ ಪೋಷಕ ನಾರು ಹೊಂದಿರು ತ್ತವೆ. ನಮ್ಮ ದೇಹಕ್ಕೆ ಅಧಿಕ ಪೋಷಕಾಂಶ ಗಳನ್ನು ನೀಡುವ ಇವು, ಸುಲಭವಾಗಿ ಜೀರ್ಣವಾಗುತ್ತವೆ. ಇವುಗಳಲ್ಲಿ ಕಾರ್ಬೊ ಹೈಡ್ರೇಟ್ ಸಂಯುಕ್ತ ರೂಪದಲ್ಲಿದೆ. ರಕ್ತ ದಲ್ಲಿ ಸಕ್ಕರೆ ಅಂಶ ಒಮ್ಮೆಲೇ ಹೆಚ್ಚುವುದಿಲ್ಲ. ಮಧುಮೇಹ ರೋಗಿಗಳು ಯಾವುದೇ ಆತಂಕವಿಲ್ಲದೆ ಗೆಡ್ಡೆ ಗೆಣಸು ಸವಿಯಬಹುದು ಎಂಬುದೊಂದು ಪ್ರಮುಖ ವಿಚಾರ.

ಹವಾಮಾನ ಬದಲಾವಣೆಯ ಸಮ ಸ್ಯೆಗೆ ಪರಿಹಾರ ಕೊಡುವ ಗೆಡ್ಡೆ ಗೆಣಸು ಗಳಿಗೆ ಈಗ ಮತ್ತೆ ಮಹತ್ವ ಬರುತ್ತಿದೆ. ರಾಸಾಯನಿಕಗಳನ್ನು ಬಳಸದೇ ಬೆಳೆ ಯುವ ಈ ಕಂದಮೂಲಗಳತ್ತ ಜನರ ಆಸಕ್ತಿಯೂ ಮೂಡುತ್ತಿದೆ. ನಗರದ ಜನರಲ್ಲಿ ಗೆಡ್ಡೆ ಗೆಣಸುಗಳ ಬಗ್ಗೆ ಅರಿವು ಮೂಡಿ ಸಲು ಈ ಕಾರ್ಯಕ್ರಮ ಏರ್ಪಡಿಸಲಾ ಗಿದೆ ಎಂದು ಸಹಜ ಸಮೃದ್ಧ ಬಳಗದ ನಿರ್ದೇಶಕ ಜಿ.ಕೃಷ್ಣಪ್ರಸಾದ್ ತಿಳಿಸಿದ್ದಾರೆ

Translate »