ಮೈಸೂರು ನಗರದಲ್ಲಿ ಮುಡಾದ  2500 ಬಿಡಿ ನಿವೇಶನ ಲಭ್ಯ
ಮೈಸೂರು

ಮೈಸೂರು ನಗರದಲ್ಲಿ ಮುಡಾದ 2500 ಬಿಡಿ ನಿವೇಶನ ಲಭ್ಯ

January 13, 2019

ಮೈಸೂರು: ಬಡಾವಣೆ ನಿರ್ಮಿಸಲು ಅಗತ್ಯ ವಿರುವ ಭೂಮಿ ಖರೀದಿಸಲು ರೈತರೊಂದಿಗೆ ಬೆಲೆಯಲ್ಲಿ ಚೌಕಾಸಿ ಮಾಡುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವುದೀಗ ಮತ್ತಷ್ಟು ಸುಲಭ ಸಾಧ್ಯವಾಗಿದೆ.

ಭೂಮಿ ಮೇಲೆ ಹಣ ಹೂಡಿಕೆ ಮಾಡಿ ಅಭಿವೃದ್ಧಿಗೊಳಿಸಲು ಮಾಡಿದ ವೆಚ್ಚ ಭರಿಸಲು ಅರ್ಜಿದಾರರಿಗೆ ಹಂಚಿಕೆ ಮಾಡಿದ ನಿವೇಶನಗಳ ಮೇಲೆ ಹಾಕಬೇಕಾಗುತ್ತದೆ. ಅದಕ್ಕಾಗಿ ಮುಡಾ 40:60 ಅನುಪಾತದಲ್ಲಿ ರೈತರಿಂದ ಭೂ ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದೆಯಾದರೂ, 50:50ರ ಅನುಪಾತಕ್ಕೆ ಭೂ ಮಾಲೀಕರು ಪಟ್ಟು ಹಿಡಿದಿದ್ದಾರೆ.

ಅದರಿಂದಾಗಿ ಹೊಸ ಬಡಾವಣೆ ನಿರ್ಮಿಸುವುದು ಪ್ರಾಧಿಕಾರಕ್ಕೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವೆಚ್ಚ ಗಳನ್ನು ಸರಿದೂಗಿಸಲು ಇದೀಗ ಆರ್ಥಿಕ ಸಂಪನ್ಮೂಲ ಕ್ರೋಢೀ ಕರಿಸುವ ಪ್ರಯತ್ನವನ್ನು ಆಯುಕ್ತ ಪಿ.ಎಸ್.ಕಾಂತರಾಜು, ಕಾರ್ಯದರ್ಶಿ ಎಂ.ಕೆ.ಸವಿತ ಮಾಡುತ್ತಿದ್ದಾರೆ.

ಮುಡಾ ಇತಿಹಾಸದಲ್ಲೇ ಸಿಐಟಿಬಿ ಅವಧಿಯಿಂದ ಈವರೆ ವಿಗೂ ಮೈಸೂರು ನಗರದಲ್ಲಿ ಲಭ್ಯವಿರುವ ಬಿಡಿ ನಿವೇಶನಗಳನ್ನು ಪತ್ತೆ ಮಾಡುವ ಗೋಜಿಗೆ ಅಧಿಕಾರಿಗಳು ಹೋಗಿರಲಿಲ್ಲ. ಇದೀಗ ಎಲ್ಲಾ ವಲಯ ಕಚೇರಿ ವ್ಯಾಪ್ತಿಯ ಬಡಾವಣೆಗಳಲ್ಲಿ ಹಂಚಿಕೆಯಾಗಿ ನಿಗದಿತ ಅವಧಿಯೊಳಗೆ ಹಣ ಪಾವತಿಸದೆ ಅಥವಾ ಇನ್ನಿತರ ಕಾರಣಗಳಿಗಾಗಿ ರದ್ದುಪಡಿಸಿ ಮತ್ತಾರಿಗೂ ಮರು ಹಂಚಿಕೆ ಮಾಡದಿರುವ ನಿವೇಶನಗಳ ಬಗ್ಗೆ ಮಾಹಿತಿ ಪಡೆಯಲು ಕಳೆದ 1 ತಿಂಗಳಿಂದ ನಡೆಸಿದ ಕಾರ್ಯಾಚರಣೆ ಫಲ ನೀಡಿದೆ.

ಮೈಸೂರು ನಗರದಾದ್ಯಂತ ಮುಡಾ ವ್ಯಾಪ್ತಿಯಲ್ಲಿ ಆ ರೀತಿಯ 2,500 ಬಿಡಿ ನಿವೇಶನ (ಸ್ಟ್ರೇ ಸೈಟ್ಸ್)ಗಳು ಪತ್ತೆಯಾಗಿವೆ. ಅವು ಗಳ ಇಸಿ, ಮಂಜೂರಾತಿ ಪತ್ರಗಳನ್ನು ಪರಿಶೀಲಿಸಲಾಗಿ ಅವು ರದ್ದಾದ ಹಾಗೂ ಮತ್ತೆ ಯಾರಿಗೂ ಮರು ಹಂಚಿಕೆ ಮಾಡಿಲ್ಲ ಎಂಬುದು ಖಾತರಿಯಾದ ಕಾರಣ, ಆಯಾಯ ವಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಖುದ್ದಾಗಿ ಸ್ಥಳಕ್ಕೆ ಕಳುಹಿಸಿ ದಾಖಲೆಯಂತೆ ಭೌತಿಕವಾಗಿ ನಿವೇಶನಗಳು ಖಾಲಿ ಇವೆಯೇ ಎಂಬುದನ್ನೂ ಖಾತರಿಪಡಿಸಿಕೊಳ್ಳಲಾಗಿದೆ. ಅಂತಹ ವಿವಿಧ ಅಳತೆಯ 2500 ನಿವೇಶನಗಳು ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಲಭ್ಯ ವಾಗಿರುವುದು ಕಂಡು ಬಂದಿದ್ದು, ಅವುಗಳನ್ನು ಬಿಡಿ ನಿವೇಶನ ಗಳೆಂದು ಪರಿಗಣಿಸಲಾಗುವುದು. ಬಿಡಿ ನಿವೇಶನಗಳ ಪಟ್ಟಿ ತಯಾ ರಿಸಿರುವ ಮುಡಾ ಅಧಿಕಾರಿಗಳು, ಸರ್ಕಾರದ 2007ನೇ ಸುತ್ತೋಲೆ ಪ್ರಕಾರ ಶೇ.75ರಷ್ಟು ನಿವೇಶನಗಳನ್ನು ಹರಾಜು ಮೂಲಕ ವಿಲೇ ವಾರಿ ಮಾಡಿ, ಉಳಿದ ಶೇ.25ರಷ್ಟನ್ನು ಸಮಾಜದ ವಿಶಿಷ್ಟ ಸಾಧನೆ ಗೈದ ಹಾಗೂ ವಿಶೇಷ ವರ್ಗದವರಿಗೆ ಹಂಚಿಕೆ ಮಾಡಬೇಕಾಗಿದೆ.

ಲಭ್ಯವಾಗಿರುವ 2,500 ಸೈಟುಗಳನ್ನು ಹರಾಜು ಪ್ರಕ್ರಿಯೆಗೊಳ ಪಡಿಸಿದಲ್ಲಿ ಚದರಡಿಗೆ ಸರಾಸರಿ ಕನಿಷ್ಠ 2,000 ರೂ.ಗಳಂತೆ ಲೆಕ್ಕ ಹಾಕಿದರೂ 1 ನಿವೇಶನಕ್ಕೆ 35 ಲಕ್ಷ ರೂ.ಗಳಾಗುತ್ತವೆ. ಅದರನ್ವಯ 2,500 ರೂ.ಗಳನ್ನು ಹರಾಜಿನಲ್ಲಿ ಮಾರಾಟ ಮಾಡಿದಲ್ಲಿ ಮುಡಾಗೆ ಬರೋಬರಿ 875 ಕೋಟಿ (35,00,000ಘಿ2500) ರೂ. ವರ ಮಾನ ಬರುವುದರಲ್ಲಿ ಅನುಮಾನವಿಲ್ಲ. ಇವು ಲಭ್ಯವಿರುವ ಬಿಡಿ ನಿವೇಶನಗಳಾದರೆ, ಇನ್ನು ನಿಯಮ ಉಲ್ಲಂಘನೆಯಾಗಿರುವ ಸಿಎ ನಿವೇಶನಗಳನ್ನು ವಶಕ್ಕೆ ಪಡೆದರೆ ಹಾಗೂ ಖಾಲಿ ಇರುವ ಮುಡಾ ಮನೆಗಳನ್ನು ಮರು ಹಂಚಿಕೆ ಅಥವಾ ಹರಾಜು ಮಾಡಿ ದಲ್ಲಿ ಇನ್ನೂ ನೂರಾರು ಕೋಟಿ ರೂ. ಆದಾಯ ಬರಲಿದೆ.

Translate »