39 ಮಂದಿ ಸೆರೆ; 9 ಲೀ. ಮದ್ಯ, 21 ಸಿಲಿಂಡರ್, 25,890 ರೂ. ನಗದು ವಶ
ಮೈಸೂರು

39 ಮಂದಿ ಸೆರೆ; 9 ಲೀ. ಮದ್ಯ, 21 ಸಿಲಿಂಡರ್, 25,890 ರೂ. ನಗದು ವಶ

December 29, 2018

ಮೈಸೂರು: ಅಪರಾಧ ಮಾಸಾಚರಣೆ ಅಂಗವಾಗಿ ಮೈಸೂರು ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, 39 ಮಂದಿ ಆರೋಪಿಗಳನ್ನು ಬಂಧಿಸಿ, 9 ಲೀಟರ್ ಮದ್ಯ, 21 ಸಿಲಿಂಡರ್‍ಗಳು ಹಾಗೂ 25,890 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಚಾಮುಂಡಿಬೆಟ್ಟ ತಪ್ಪಲಿನಲ್ಲಿ ಗಾಂಜಾ ಸೇವಿಸುತ್ತಿದ್ದ ರಘು, ಉಮೇಶ, ವಿಜಿ ಎಂಬುವರನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರಲ್ಲದೆ, ತಾವರೆಕಟ್ಟೆ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಹರೀಶ ಎಂಬುವವನನ್ನು ಬಂಧಿಸಿದ್ದಾರೆ. ಚಾಮುಂಡಿಬೆಟ್ಟ ಪಾದದ ಬಳಿಯಲ್ಲಿ ಜೂಜಾಟ ಆಡುತ್ತಿದ್ದ 7 ಮಂದಿಯನ್ನು ಬಂಧಿಸಿ ಅವರಿಂದ 1,460 ರೂ.ಗಳನ್ನು ಕೆ.ಆರ್.ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಸರಸ್ವತಿಪುರಂನಲ್ಲಿ 5 ಮಂದಿ, ವಿಜಯನಗರ ಪೊಲೀಸರಿಂದ 10 ಮಂದಿ ಜೂಜು ಕೋರರನ್ನು ಬಂಧಿಸಿ ಒಟ್ಟು 9,000 ರೂ. ನಗದು ವಶಪಡಿಸಿಕೊಂಡಿದ್ದಾರೆ.

ಅದೇ ರೀತಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಸ್ ರೀ-ಫಿಲ್ಲಿಂಗ್, ಜೂಜಾಟ ಪ್ರಕರಣಗಳನ್ನು ಭೇದಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Translate »