ಖದೀಮನ ಸೆರೆ : 6 ಮೊಬೈಲ್‍ಗಳ ವಶ
ಮೈಸೂರು

ಖದೀಮನ ಸೆರೆ : 6 ಮೊಬೈಲ್‍ಗಳ ವಶ

December 29, 2018

ಮೈಸೂರು: ಮೈಸೂ ರಿನ ವಿವಿಧ ಸ್ಥಳಗಳಲ್ಲಿ ಮೊಬೈಲ್ ಫೋನ್‍ಗಳನ್ನು ಕಳವು ಮಾಡಿದ್ದ ಆರೋಪಿಯನ್ನು ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೈಸೂರಿನ ರಾಮಕೃಷ್ಣನಗರ ನಿವಾಸಿ ನಟರಾಜು ಅವರ ಮಗ ಸುನಿಲ್(27) ಬಂಧಿತನಾಗಿದ್ದು, ಆತನಿಂದ 93000 ರೂ. ಬೆಲೆ ಬಾಳುವ 6 ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರಿನ ವಿವಿಧೆಡೆ ನಡೆದುಕೊಂಡು ಹೋಗುವವರಿಂದ ಬೈಕ್‍ನಲ್ಲಿ ಬಂದು ಮೊಬೈಲ್ ಕಿತ್ತು ಪರಾರಿಯಾಗುತ್ತಿದ್ದ ಆತ, ಅಂಗಡಿಗಳಲ್ಲೂ ಕಳವು ಮಾಡುತ್ತಿದ್ದ. ಗುರುವಾರ ಜಯಲಕ್ಷ್ಮೀಪುರಂನ ಕಾಳಿದಾಸ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀ ಸರು ಸುನಿಲ್‍ನನ್ನು ಬಂಧಿಸಿ ಕೃತ್ಯಕ್ಕೆ ಬಳಸು ತ್ತಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಜಯಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್ ಬಿ.ಜಿ. ಪ್ರಕಾಶ, ಎಎಸ್‍ಐ ಜಯರಾಮು, ಸಿಬ್ಬಂದಿ ಗಳಾದ ಉಮೇಶ್, ಬಿ.ಮಂಜುನಾಥ್, ಶಿವಮಲ್ಲು, ಮಂಜುನಾಥ್, ಟಿ.ಎಂ.ಪ್ರಶಾಂತ, ಮಾಯಪ್ಪ ಕರೆಗಾಂವಿ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Translate »