ಮೈಸೂರು: ಹೊಸ ವರ್ಷಾಚರಣೆ ಅಂಗವಾಗಿ ಮುಂಜಾಗ್ರತೆ ವಹಿಸಿರುವ ಪೊಲೀಸರು, ಗುರುವಾರ ಮೈಸೂರಿನ ಹೋಟೆಲ್ ಮತ್ತು ಲಾಡ್ಜ್‍ಗಳಲ್ಲಿ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದರು.
ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರ ಸೂಚನೆಯಂತೆ ಡಿಸಿಪಿ ಡಾ.ವಿಕ್ರಂ ವಿ.ಅಮಟೆ ಅವರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಮೈಸೂರು ನಗರದಾದ್ಯಂತ ಪೊಲೀಸರು `ಆಪರೇಷನ್ ಹಾಕ್’ (ಔಠಿeಡಿಚಿಣioಟಿ ಊಚಿತಿಞ) ಕಾರ್ಯಾಚರಣೆ ನಡೆಸಿದರು.
ಭಯೋತ್ಪಾದಕರು, ಸುಪಾರಿ ಕಿಲ್ಲರ್‍ಗಳು, ಗ್ಯಾಂಗ್‍ಗಳು, ವಿದೇಶೀಯರ ಅಕ್ರಮ ವಾಸ್ತವ್ಯಗಳಂತಹ ಚಟುವಟಿಕೆಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ ವಿಶೇಷ ತಂಡದ ಪೊಲೀಸರು, ತಪಾಸಣೆ ನಡೆಸಿ ಸಿಸಿ ಕ್ಯಾಮರಾಗಳನ್ನು ತಪ್ಪದೇ ಅಳವಡಿಸು ವಂತೆ ಲಾಡ್ಜ್ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು. ಸಾರ್ವಜನಿಕರ ಸುರಕ್ಷತಾ ದೃಷ್ಟಿಯಿಂದ ಹಾಗೂ ಹೊಸ ವರ್ಷಾಚರಣೆ ವೇಳೆ ಅಪರಾಧ ಕೃತ್ಯಗಳು ನಡೆಯದಂತೆ ತಡೆಗಟ್ಟಲು ಪೊಲೀಸರು ಈ ವಿಶೇಷ ಕಾರ್ಯಾಚರಣೆ ನಡೆಸಿದರು.