ದೇಶದ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ
ಮೈಸೂರು

ದೇಶದ ಶೇ.40ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ

July 8, 2019

ಮೈಸೂರು,ಜು.7(ಪಿಎಂ)- ದೇಶದ ಮಕ್ಕಳಲ್ಲಿ ಶೇ.40ರಷ್ಟು ಮಂದಿ ಅಪೌಷ್ಟಿಕತೆ ಯಿಂದ ಬಳಲುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಮೈಸೂರು ವಿವಿ ಆಡಳಿ ತಾಂಗ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಅಲ್ಲಿಗೆ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯೇ? ಎಂದು ಅವಲೋಕಿಸಿ ಕೊಳ್ಳಬೇಕಿದೆ ಎಂದು ಹೇಳಿದರು.

ಮೈಸೂರಿನ ಮಾನಸಗಂಗೋತ್ರಿಯ ಮೈಸೂರು ವಿವಿ ರಾಣಿಬಹದ್ದೂರ್ ಸಭಾಂ ಗಣದಲ್ಲಿ ಮೈಸೂರು ವಿವಿ ಯುವ ಪ್ರಗತಿ ಪರ ಚಿಂತಕರ ಸಂಘ, ಬದುಕು ಟ್ರಸ್ಟ್ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ಈ.ಧನಂಜಯ ಎಲಿಯೂರು ಅವರ `ಸಮಾಜಮುಖಿ’ ಮತ್ತು `ಮಕ್ಕ ಳೊಂದಿಗೆ ನಾವು’ ಕೃತಿಗಳ ಬಿಡುಗಡೆ ಮತ್ತು ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಮಾಜದ ಭವಿಷ್ಯ ಅಲ್ಲಿನ ಮಕ್ಕಳ ಹಾಗೂ ಯುವ ಜನತೆಯ ಸ್ಥಿತಿಗತಿ ಯನ್ನು ಆಧರಿಸಿದೆ. ನಮ್ಮ ದೇಶದಲ್ಲಿ 30 ವರ್ಷದೊಳಗಿನ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದು, ಬೇರೆ ಯಾವುದೇ ದೇಶ ದಲ್ಲೂ ಇಂತಹ ಯುವ ಶಕ್ತಿ ಸದ್ಯ ಇಲ್ಲ ವಾಗಿದೆ. ಈ ಯುವ ಸಮುದಾಯವನ್ನು ಸಂಪನ್ಮೂಲವಾಗಿ ಮಾಡುವ ಸಾಮಾಜಿಕ ಜವಾಬ್ದಾರಿ ನಮ್ಮ ಶಿಕ್ಷಣ ವ್ಯವಸ್ಥೆಯ ದ್ದಾಗಿದ್ದು, ಪೋಷಕರೂ ಈ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿ ವಹಿಸಬೇಕಿದೆ ಎಂದರು.

ಸಾಮಾಜಿಕ ಕಳಕಳಿ ಹೊಂದಿರುವ ಸಮಾನ ಮನಸ್ಕರು ಸಂಘಟಿತರಾಗುವುದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಈ ಮನಸ್ಸುಗಳು ಒಂದಾಗುವುದು ಅಗತ್ಯ ವಾಗಿದೆ. ನಮ್ಮ ಕರ್ತವ್ಯದ ಬಗ್ಗೆ ಕಳಕಳಿ ಇಲ್ಲವಾದರೆ ಹಕ್ಕುಗಳು ದೊರೆಯಲಾರವು. `ಸಮಾಜಮುಖಿ’ ಕೃತಿಯು ಸಮಕಾಲೀನ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಜಾಗತೀಕರಣ ಹಾಗೂ ಖಾಸಗೀಕರಣದ ಸಂದರ್ಭದಲ್ಲಿ ನಮ್ಮ ಸಮಾಜ ಹಾಗೂ ಮಕ್ಕಳ ಸ್ಥಿತಿಗತಿ ದುರ್ಬಲವಾಗಿದೆ. ವಿಜ್ಞಾನ, ತಾಂತ್ರಿಕ ಹಾಗೂ ವ್ಯವಹಾರಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಸಮಾಜದಲ್ಲಿ ಸಾಮರಸ್ಯ ಹಾಗೂ ನೆಮ್ಮದಿಯ ವಾತಾವರಣಕ್ಕೆ ಮಾನವಿಕ ಹಾಗೂ ಸಾಹಿತ್ಯ ಶಿಕ್ಷಣಕ್ಕೂ ಆದ್ಯತೆ ನೀಡುವುದು ಅಗತ್ಯ ಎಂದು ತಿಳಿಸಿದರು.

ಮಕ್ಕಳೊಂದಿಗೆ ಕೃತಿಗಳನ್ನು ಬಿಡುಗಡೆ ಮಾಡಿದ ಸಾಹಿತಿ ಪ್ರೊ.ಕಾಳೇಗೌಡ ನಾಗ ವಾರ ಮಾತನಾಡಿ, ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡಲು ಹಿಂದಿನಿಂದಲೂ ಪ್ರಬಲ ಪ್ರಯತ್ನಗಳು ನಡೆಯುತ್ತಲೇ ಇವೆ. ವಿಶ್ವವೇ ಕತ್ತಲಲ್ಲಿ ಇದ್ದ ಸಂದರ್ಭದಲ್ಲಿ ಭಾರತದಲ್ಲಿ ಬುದ್ಧನ ಚಿಂತನೆಗಳ ಬೆಳಕು ಉದಯಿಸಿತು. ಬುದ್ಧನ ಹೊರತಾಗಿ ಇಡೀ ವಿಶ್ವದಲ್ಲಿ ಸಮಾಜ ಸುಧಾರಣೆಯ ಯಾವುದೇ ಚಿಂತಕರು ಆ ಕಾಲಘಟ್ಟದಲ್ಲಿ ಇರಲಿಲ್ಲ ಎಂದರು.

ನಮ್ಮ ಭಾರತೀಯ ಸಮಾಜ ವಿಚಿತ್ರ ವಾದ ಸಾಮಾಜಿಕ ಹಿನ್ನೆಲೆ ಹೊಂದಿದ್ದು, ಸಂವಿಧಾನ ಇದ್ದಾಗ್ಯೂ ಇಂದಿಗೂ ಜಾತಿ ಪದ್ಧತಿ, ಅಸ್ಪøಶ್ಯತೆ ಹಾಗೂ ಲಿಂಗ ತಾರ ತಮ್ಯ ಸೇರಿದಂತೆ ಅನೇಕ ಸಾಮಾಜಿಕ ಅನಿಷ್ಟಗಳು ಜೀವಂತವಾಗಿಯೇ ಉಳಿದಿವೆ. ನಮ್ಮ ದೇಶದಲ್ಲಿ ಇಷ್ಟು ಭೀಕರ ಸಾಮಾ ಜಿಕ ಸಮಸ್ಯೆಗಳು ತಾಂಡವವಾಡುತ್ತಿದ್ದರೆ, ಬೇರೆ ಬೇರೆ ರಾಷ್ಟ್ರಗಳಲ್ಲೂ ಭೀಕರವಾಗಿ ಅಲ್ಲವಾದರೂ ಹಲವು ಸಾಮಾಜಿಕ ಅನಿಷ್ಟ ಗಳನ್ನು ಕಾಣಬಹುದು. ಸ್ವಿಜರ್‍ಲ್ಯಾಂಡ್ ನಂತಹ ದೇಶದಲ್ಲೂ 1992ರವರೆಗೆ ಮದುವೆ ಯಾದ ಗೃಹಿಣಿ ಗಂಡನ ಅನುಮತಿ ಇಲ್ಲದೆ ಬ್ಯಾಂಕ್ ಖಾತೆ ತೆರೆಯುವಂತೆ ಇರಲಿಲ್ಲ. ಆದರೆ ಅಲ್ಲಿ ಸುಧಾರಣೆಗಳು ಕಾಣತೊಡ ಗಿದ್ದರೆ ನಮ್ಮ ಸಮಾಜ ಸರಿಪಡಿಸಲಾಗ ದಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೃತಿಗಳ ಕುರಿತು ಪತ್ರಕರ್ತ ಬಿ.ಆರ್. ರಂಗಸ್ವಾಮಿ ಮಾತನಾಡಿದರು. ಸಮಾಜ ವಾದಿ ಪ.ಮಲ್ಲೇಶ್, ಪತ್ರಕರ್ತೆ ರಶ್ಮಿ ಕೋಟಿ, ಯುವ ಪ್ರಗತಿಪರ ಚಿಂತಕರ ಸಂಘದ ಅಧ್ಯಕ್ಷ ಬಿ.ಶಿವಶಂಕರ್, ಗೌರವಾಧ್ಯಕ್ಷ ಡಾ. ಚಂದ್ರಗುಪ್ತ ಮತ್ತಿತರರು ಹಾಜರಿದ್ದರು.

Translate »