ಹಾವು ಕಡಿತದಿಂದ ಭಾರತದಲ್ಲಿ ವಾರ್ಷಿಕ 50,000 ಮಂದಿ ಸಾವು
ಮೈಸೂರು

ಹಾವು ಕಡಿತದಿಂದ ಭಾರತದಲ್ಲಿ ವಾರ್ಷಿಕ 50,000 ಮಂದಿ ಸಾವು

December 17, 2019

ಮೈಸೂರು, ಡಿ.16(ಆರ್‍ಕೆಬಿ)- ಭಾರತ ದಲ್ಲಿ ಹಾವು ಕಡಿತದಿಂದ ವಾರ್ಷಿಕ 50,000 ಮಂದಿ ಸಾವಿಗೀಡಾಗಿ, 1.40 ಲಕ್ಷ ಮಂದಿಗೆ ಅಂಗವೈಕಲ್ಯತೆ ಸಂಭವಿಸುತ್ತಿದೆ. ಅವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದ ಜನರು ಮತ್ತು ಕಾರ್ಮಿಕರಾಗಿದ್ದಾರೆ. ಅವರು ಕುಟುಂಬದ ಆಧಾರಸ್ತಂಭಗಳಾಗಿದ್ದಾರೆ.

ಮೈಸೂರು ವಿವಿ ವಿಜ್ಞಾನ ಭವನದಲ್ಲಿ `ಹಾವು ಕಡಿತ ನಿರ್ವಹಣೆಯಲ್ಲಿ ಸವಾಲು ಗಳು’ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಾವು ಕಡಿತ ಕುರಿತ ಕಿರುಚಿತ್ರ ಪ್ರದರ್ಶಿಸಿದ ಸಂದರ್ಭದಲ್ಲಿ ಇದು ಬಹಿರಂಗವಾಯಿತು.

ಮೈಸೂರು ವಿವಿ ಜೀವರಸಾಯನ ಶಾಸ್ತ್ರ ಅಧ್ಯಯನ ವಿಭಾಗ ಮತ್ತು ಅಣುಜೀವ ವಿಜ್ಞಾನ ಅಧ್ಯಯನ ವಿಭಾಗ ಆಯೋಜಿಸಿದ್ದ ವಿಚಾರ ಸಂಕಿರಣಕ್ಕೆ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಉದ್ಘಾಟನೆ ನೆರವೇರಿಸಿದರು. ಕೇರಳದ ಅಂಗಮಾಲಿ ಲಿಟ್ಲ್ ಫ್ಲವರ್ ಆಸ್ಪ ತ್ರೆಯ ನೆಫ್ರಾಲಜಿಸ್ಟ್ ಡಾ.ಜೋಸೆಫ್ ಕೆ.ಜೋಸೆಫ್ ಮುಖ್ಯ ಅತಿಥಿಯಾಗಿ ಭಾಗ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾ ಡಿದ ಅವರು, ಹಾವು ಕಚ್ಚಿದ ಸಮಯ ಅತ್ಯಂತ ಅಮೂಲ್ಯ. ವಿಳಂಬ ಮಾಡದೆ ಹಾವು ಕಚ್ಚಿದವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂ ತರಿಸುವಂತೆ ಸಲಹೆ ನೀಡಿದರು. ಹಾವು ಕಚ್ಚಿ ದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ತಿಳಿಸಿದ ಅವರು, ಹಾವುಗಳು ಬಂದು ಸೇರಿಕೊಳ್ಳದಂತೆ ನೀವು ವಾಸಿಸುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.

ಇದಕ್ಕೂ ಮುನ್ನ ಹಾವು ಕಡಿತದ ಚಿಕಿತ್ಸೆ ಮತ್ತು ಸಾಮಾಜಿಕ ಶಿಕ್ಷಣದ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಪ್ರಿಯಾಂಕ ಕದಂ ಮಾತ ನಾಡಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ಮೈಸೂರು ವಿವಿ 1980ರಿಂದಲೂ ಜೀವರಸಾ ಯನಿಕ ವಿಭಾಗವು ಹಾವಿನ ವಿಷಕ್ಕೆ ಅಗತ್ಯ ಔಷಧದ ಬಗ್ಗೆ ಸಂಶೋಧನೆ ನಡೆಸುತ್ತಿದೆ. ಮೈಸೂರು ವಿವಿ ಮಾಡಿದ ಸಂಶೋಧನೆಯ ಕೊಡುಗೆಯನ್ನು ದೇಶ-ವಿದೇಶಗಳಲ್ಲಿ ವೈಜ್ಞಾ ನಿಕ ಸಮುದಾಯ ಅಂಗೀಕರಿಸಿದೆ ಎಂದರು. ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಯಾದ ಜೀವರಸಾಯನಶಾಸ್ತ್ರ ವಿಭಾಗದ ಪ್ರೊ.ಡಾ.ಬಿ.ಎಸ್.ವಿಶ್ವನಾಥ್, ಸಂಚಾಲಕ ಡಾ.ಕೆ.ಕೆಂಪರಾಜು ಉಪಸ್ಥಿತರಿದ್ದರು. ಜೀವರಸಾ ಯನಶಾಸ್ತ್ರ ವಿಜ್ಞಾನಿಗಳು, ವೈದ್ಯರು, ಹಾವಿನ ವಿಷಕ್ಕೆ ಔಷಧಿ ತಯಾರಕರು, ವಿದ್ಯಾರ್ಥಿ ಗಳೂ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

Translate »