ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಳೆಗನ್ನಡ ಕೃತಿಗಳ ಡಿಜಿಟಲೀಕರಣ
ಮೈಸೂರು

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಹಳೆಗನ್ನಡ ಕೃತಿಗಳ ಡಿಜಿಟಲೀಕರಣ

December 17, 2019

ಮೈಸೂರು, ಡಿ.16(ಪಿಎಂ)- ಕವಿರಾಜ ಮಾರ್ಗದಿಂದ ಮುದ್ದಣನವರೆಗೆ ಹಳೆ ಗನ್ನಡ ಕೃತಿಗಳ ಡಿಜಿಟಲೀಕರಣಗೊಳಿ ಸಲು ಕನ್ನಡ ಪುಸ್ತಕ ಪ್ರಾಧಿಕಾರ ಯೋಜನೆ ರೂಪಿಸಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ತಿಳಿಸಿದರು.

ಮೈಸೂರಿನ ಮಹಾರಾಜ ಕಾಲೇಜಿನ ಜೂನಿಯರ್ ಬಿಎ ಹಾಲ್‍ನಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಾಲೇಜಿನ 2018-19ನೇ ಸಾಲಿನ ವಾರ್ಷಿಕ ಸಂಚಿಕೆ `ಅನಂತಯಾತ್ರಿ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಮ್ಮ ಸಾಹಿತ್ಯವನ್ನು ಉಳಿಸಲು ಕಾಲಕ್ಕನುಗುಣವಾಗಿ ಬದ ಲಾದ ಮಾಧ್ಯಮಗಳ ಅಗತ್ಯವಿದ್ದು, ಈ ನಿಟ್ಟಿ ನಲ್ಲಿ ಅಭಿಜಾತ ಕನ್ನಡ ಸಾಹಿತ್ಯ ಕಲ್ಯಾಣ ಯೋಜನೆಯಡಿ ಈ ಡಿಜಿಟಲೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ವಾರ್ಷಿಕ ಸಂಚಿಕೆ `ಅನಂತಯಾತ್ರಿ’ ಅದ್ಭುತವಾಗಿ ಮೂಡಿಬಂದಿದೆ. ಇದರಲ್ಲಿ ವಿದ್ಯಾರ್ಥಿಗಳ ಬರವಣಿಗೆ ಕೌಶಲ್ಯ ಅನಾ ವರಣಗೊಂಡಿದ್ದು, ವಿದ್ಯಾರ್ಥಿದೆಸೆಯಲ್ಲಿ ನಾನು ಕೂಡ ಕಾಲೇಜು ವಾರ್ಷಿಕ ಸಂಚಿಕೆ ಮೂಲಕ ಬರವಣಿಗೆ ಶುರು ಮಾಡಿದವನು. ಸಂಚಿಕೆಯಲ್ಲಿ ವಿದ್ಯಾರ್ಥಿಯೊಬ್ಬ ಹೆಚ್‍ಡಿ ಕೋಟೆ ಕುರಿತಂತೆ ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಮನೋಜ್ಞವಾಗಿ ಚಿತ್ರಿಸಿ ದ್ದಾನೆ. ಜೊತೆಗೆ ಈ ಲೇಖನದಲ್ಲಿ ಸಂಶೋ ಧನಾತ್ಮಕ ಅಂಶಗಳು ಒಳಗೊಂಡಿರುವುದು ಗಮನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ಸಂಚಿಕೆಯಲ್ಲಿ ಕೊರತೆಯ ಅಂಶ ಗಳೂ ಇದ್ದು, ಕೆಲ ಲೇಖನಗಳಿಗೆ ಹೆಚ್ಚು ದೀರ್ಘ ಎನ್ನುವಂತಹ ತಲೆ ಬರಹ ನೀಡಲಾ ಗಿದೆ. ಸಂಪಾದಕತ್ವದ ವೇಳೆ ಈ ಕೊರತೆ ನೀಗಿಸಿ ಚಿಕ್ಕದಾಗಿ ಹಾಗೂ ಆಕರ್ಷಕವಾಗಿ ಸಲು ಅವಕಾಶವಿತ್ತು. ಇನ್ನು ಕೆಲ ಗಂಭೀರ ವಿಚಾರಗಳನ್ನು ಪ್ರಸ್ತಾಪ ಮಾಡಿರುವ ಲೇಖನ ಗಳಿದ್ದು, ಅವುಗಳಿಗೆ ಸೂಕ್ತ ಆಧಾರ ಗ್ರಂಥ ಗಳನ್ನು ಉಲ್ಲೇಖಿಸುವ ಅಗತ್ಯತೆ ಇತ್ತು ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಿ.ಪಿ.ಸುನಿತಾ, ಆಡಳಿತಾಧಿಕಾರಿ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್, ವಾರ್ಷಿಕ ಸಂಚಿಕೆ ಸಂಪಾದಕಿ ಡಾ.ತೇಜೋ ಮಣಿ ಸೇರಿದಂತೆ ಕಾಲೇಜಿನ ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು

Translate »