ಮೈಸೂರು-ಯಲಹಂಕ ಮೆಮು ರೈಲು ಸೇವೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ
ಮೈಸೂರು

ಮೈಸೂರು-ಯಲಹಂಕ ಮೆಮು ರೈಲು ಸೇವೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ

December 17, 2019

ಮೈಸೂರು, ಡಿ.16(ಎಂಕೆ)-ಮೈಸೂರು-ಯಲಹಂಕ ನಡುವೆ ಸಂಚರಿಸುವ ನೂತನ ಮೆಮು ರೈಲು ಸೇವೆಗೆ ಸಂಸದ ಪ್ರತಾಪ್ ಸಿಂಹ ಸೋಮವಾರ ರಾತ್ರಿ ಚಾಲನೆ ನೀಡಿದರು.

ಮೈಸೂರು-ಬೆಂಗಳೂರು ನಡುವೆ ಈಗಾಗಲೇ ಮೂರು ಮೆಮು ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಇವುಗಳ ಪಟ್ಟಿಗೆ ಮತ್ತೊಂದು ಮೆಮು ರೈಲು ಸೆರ್ಪಡೆ ಯಾಗಿದೆ. ಪ್ರತಿದಿನ ರಾತ್ರಿ 10.20ಕ್ಕೆ ಮೈಸೂರಿನಿಂದ ಹೊರಡುವ ಈ ಮೆಮು ರೈಲು (ಗಾಡಿ ನಂ-06562) ಮಧ್ಯರಾತ್ರಿ 1.30ಕ್ಕೆ ಯಲಹಂಕ ರೈಲ್ವೆ ನಿಲ್ದಾಣ ತಲುಪಲಿದೆ. ಮತ್ತೆ ಯಲಹಂಕದಿಂದ ಮಧ್ಯರಾತ್ರಿ 2.30ಕ್ಕೆ (ಗಾಡಿ ನಂ-06561) ಹೊರಟು ಮುಂಜಾನೆ 5.30ಕ್ಕೆ ಮೈಸೂರಿಗೆ ಬರಲಿದೆ. ಈ ಮಾರ್ಗದ ನಡುವೆ ಮಂಡ್ಯ, ಕೆಂಗೇರಿ, ಬೆಂಗಳೂರು ಹಾಗೂ ಯಶವಂತಪುರದಲ್ಲಿ ಮಾತ್ರ ನಿಲುಗಡೆ ಇರಲಿದೆ. ಮೈಸೂರಿನಿಂದ ಬೆಂಗಳೂರಿಗೆ ರಾತ್ರಿ ವೇಳೆ ಪ್ರಯಾಣಿಸುವವರು 9ಕ್ಕೆ ಹೊರಡುವ ಮೈಸೂರು-ಚೆನ್ನೈ ಕಾವೇರಿ ಎಕ್ಸ್‍ಪ್ರೆಸ್ ಹಾಗೂ 11.55ಕ್ಕೆ ಹೊರಡುವ ಪ್ಯಾಸೆಂಜರ್ ರೈಲು ಜತೆಗೆ ಹೊಸ ಮೆಮು ರೈಲು ಸಂಚಾರ ಅನುಕೂಲವಾಗಿದೆ

Translate »