ಮೈಸೂರಿನ ಲಲಿತಮಹಲ್‍ನಲ್ಲಿ ರಾಜಮನೆತನದ ವಿವಾಹ: ಯದುವೀರ ಸಹೋದರಿ ವರಿಸಿದ ಜೋದ್‍ಪುರದ ಸೈಲಾನ ಯುವರಾಜ
ಮೈಸೂರು

ಮೈಸೂರಿನ ಲಲಿತಮಹಲ್‍ನಲ್ಲಿ ರಾಜಮನೆತನದ ವಿವಾಹ: ಯದುವೀರ ಸಹೋದರಿ ವರಿಸಿದ ಜೋದ್‍ಪುರದ ಸೈಲಾನ ಯುವರಾಜ

December 17, 2019

ಮೈಸೂರು,ಡಿ.16(ಎಂಟಿವೈ)- ಮೈಸೂ ರಿನ ಲಲಿತಮಹಲ್ ಹೋಟೆಲ್‍ನಲ್ಲಿ ಇತ್ತೀಚೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಹೋದರಿ ಜಯತ್ಮಿಕಾ ಲಕ್ಷ್ಮೀ ಹಾಗೂ ಮಧ್ಯಪ್ರದೇಶದ ಜೋದ್‍ಪುರದ ಸೈಲಾನ ರಾಜಮನೆತನದ ಯುವರಾಜ ದಿವ್ಯಾರಾಜ್ ಸಿಂಗ್ ಅವರೊಂದಿಗೆ ವಿವಾಹ ವಿಜೃಂಭಣೆಯಿಂದ ನೆರವೇರಿದೆ.

ಯದುವಂಶದ ರಾಜವಂಶಸ್ಥ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ತ್ರಿಪುರ ಸುಂದರಿ ದೇವಿ ಹಾಗೂ ಸ್ವರೂಪ್ ಆನಂದರಾಜೇ ಅರಸ್ ದಂಪತಿ ಪುತ್ರಿಯೂ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಸಹೋ ದರಿ ಜಯತ್ಮಿಕಾ ಲಕ್ಷ್ಮೀ ಅವರನ್ನು ಮಧ್ಯ ಪ್ರದೇಶದ ಜೋಧ್‍ಪುರದ ಸೈಲಾನ ರಾಜ ಮನೆತನದ ವಿಕ್ರಮ್ ಸಿಂಗ್ ಹಾಗೂ ಚಂದ್ರಕುಮಾರಿ ಸಿಂಗ್ ಅವರ ಪುತ್ರ ಯುವ ರಾಜ ದಿವ್ಯಾರಾಜ್ ಸಿಂಗ್ ಅವರೊಂದಿಗೆ ವಿವಾಹವಾದರು. ಯದುವಂಶ ಹಾಗೂ ಸೈಲಾನ ರಾಜಮನೆತನದ ಪ್ರಮುಖರು ಹಾಗೂ ದೇಶದ ವಿವಿಧ ರಾಜಮನೆತನಗಳ ಪ್ರಮುಖರು ಮತ್ತು ಗಣ್ಯರು ಪಾಲ್ಗೊಂಡಿದ್ದ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.

ಧಾರ್ಮಿಕ ಕಾರ್ಯಗಳನ್ನು ಸುಲಲಿತ ವಾಗಿ ನೆರವೇರಿಸುವ ನಿಟ್ಟಿನಲ್ಲಿ ಹಾಗೂ ಭದ್ರತೆ ಹಿತದೃಷ್ಟಿಯಲ್ಲಿ ವಿವಾಹ ಮಹೋ ತ್ಸವ ಗಣ್ಯರಿಗಷ್ಟೇ ಸೀಮಿತಗೊಳಿಸಲಾಗಿತ್ತು. ಲಲಿತಮಹಲ್ ಹೋಟೆಲ್ ಸಭಾಂಗಣ ದಲ್ಲಿ ವಿಜೃಂಭಣೆಯಿಂದ ಜರುಗಿದ ರಾಜ ಮನೆತನದ ಸದಸ್ಯರ ವಿವಾಹ ಮಹೋ ತ್ಸವಕ್ಕೆ ಕಣ್ಮನ ಸೆಳೆಯುವಂತೆ ಸಭಾಂ ಗಣವನ್ನು ಅಲಂಕರಿಸಲಾಗಿತ್ತು. ಅಲ್ಲದೆ ಬೂರಿ ಭೋಜನದ ವ್ಯವಸ್ಥೆ ಮಾಡ ಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Translate »