ಫೆ.10ರಂದು ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬ
ಮೈಸೂರು

ಫೆ.10ರಂದು ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬ

February 4, 2020

ಮೈಸೂರು, ಫೆ.3(ಪಿಎಂ)- ಮೈಸೂರಿನ ಗೋಕುಲಂನ ಮಾತೃಮಂಡಲಿ ಶಿಶುವಿಕಾಸ ಕೇಂದ್ರದ ಬೆಳ್ಳಿಹಬ್ಬವನ್ನು ಫೆ.10ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾತೃಮಂಡಲಿ ವಿದ್ಯಾಸಂಸ್ಥೆಗಳ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿ ಮೊಹಲ್ಲಾದ ಮಾತೃಮಂಡಲಿ ಸಂಸ್ಥೆಗೆ 60 ವರ್ಷ ತುಂಬಿದ ವಜ್ರ ಮಹೋತ್ಸವದ ನೆನಪಿಗಾಗಿ ಗೋಕುಲಂನ ಸಂಸ್ಥೆ ನಿವೇಶನದಲ್ಲಿ 1995ರಲ್ಲಿ ಮಾತೃಮಂಡಲಿ ಶಿಶುವಿಕಾಸ ಕೇಂದ್ರ (ವಿಶೇಷ ಮಕ್ಕಳ ಶಾಲೆ) ಆರಂಭವಾಯಿತು ಎಂದರು.

ಶಿಶುವಿಕಾಸ ಕೇಂದ್ರದ ಆರಂಭಕ್ಕೆ ಹಿರಿಯ ಗಾಂಧಿವಾದಿಗಳಾದ ಜಿ.ಎಸ್.ಸುಬ್ರಹ್ಮಣ್ಯಂ, ಬಿ.ಆರ್. ಪ್ರಾಣೇಶ್ ರಾವ್ ಸೇರಿದಂತೆ ಅನೇಕ ಮಹನೀಯರು ಕಾರಣರಾದರು. 4 ವಿಶೇಷ ಮಕ್ಕಳೊಂದಿಗೆ ಪ್ರಾರಂಭ ವಾದ ಶಿಶು ವಿಕಾಸ ಕೇಂದ್ರದಲ್ಲಿ ಪ್ರಸ್ತುತ 48 ಮಕ್ಕಳು ಕಲಿಯುತ್ತಿದ್ದಾರೆ. ಈ ಪೈಕಿ 18 ಮಂದಿ ಹೆಣ್ಣು ಮಕ್ಕ ಳಾಗಿದ್ದಾರೆ. 22 ವರ್ಷಗಳ ಕಾಲ ಈ ಸಂಸ್ಥೆ ದಾನಿ ಗಳ ನೆರವಿನಿಂದ ನಡೆದಿದ್ದು, ಕಳೆದ 3 ವರ್ಷಗಳಿಂದ ಸರ್ಕಾರದ ಅನುದಾನದಲ್ಲಿ ಮುನ್ನಡೆಯುತ್ತಿದೆ. ಕೇಂದ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಹೆಚ್ಚಿದ್ದಾರೆ ಎಂದು ತಿಳಿಸಿದರು.

ಕೇಂದ್ರದಲ್ಲಿ ವ್ಯಾಸಂಗ ಮಾಡಿದವರ ಪೈಕಿ 10 ಮಕ್ಕಳು ಉದ್ಯೋಗದಲ್ಲಿದ್ದಾರೆ. ಜೊತೆಗೆ ಕೇಂದ್ರದ ಬೆಳ್ಳಿಹಬ್ಬದ ನೆನಪಿಗಾಗಿ ವೃತ್ತಿಪರ ತರಬೇತಿ ಕೇಂದ್ರ ಆರಂಭಿಸಲು ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಲಾಗಿದೆ. ವೃತ್ತಿಪರ ತರಬೇತಿ ಯಿಂದ ವಿಶೇಷ ಮಕ್ಕಳು ಸ್ವಾವಲಂಬಿಗಳಾಗಿ ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ವಿವಿ ಮೊಹಲ್ಲಾದ ಮಹಿಳೆಯರು ಸಮಾಜ ಸೇವೆಯ ಉದ್ದೇಶದೊಂದಿಗೆ ಬಾಡಿಗೆ ಮನೆಯೊಂದರಲ್ಲಿ ಮಹಿಳಾ ಸಮಾಜ ಆರಂ ಭಿಸಿದರು. ಬಳಿಕ ಮಕ್ಕಳಿಗಾಗಿ ಪ್ಲೇ ಹೋಂ, ಮಹಿಳೆ ಯರಿಗಾಗಿ ಟೈಲರಿಂಗ್ ಸೇರಿದಂತೆ ಅನೇಕ ಚಟು ವಟಿಕೆಗಳು ಚಾಲನೆ ಪಡೆದುಕೊಂಡವು. ವಿಧಾನ ಸಭೆಯ ಮೊದಲ ಮಹಿಳಾ ಸಭಾಪತಿಗಳಾದ ಕೆ.ಎಸ್.ನಾಗರತ್ನಮ್ಮ ಸೇರಿದಂತೆ ಅನೇಕ ಮಹಿಳೆ ಯರು ಸೇರಿ ಶುರು ಮಾಡಿದ ಮಾತೃಮಂಡಲಿ ಮಹಿಳಾ ಸಮಾಜ ಹಂತ ಹಂತವಾಗಿ ನರ್ಸರಿ, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಆರಂಭಗೊಂಡು ಬೆಳೆದು ನಿಂತಿತು ಎಂದು ವಿವರಿಸಿದರು.

ಬೆಳ್ಳಿಹಬ್ಬ: ಫೆ.10ರಂದು ಬೆಳಿಗ್ಗೆ 11ಕ್ಕೆ ಶಿಶುವಿಕಾಸ ಕೇಂದ್ರದ ಆವರಣದಲ್ಲಿ ಬೆಳ್ಳಿಹಬ್ಬ ಮಹೋತ್ಸವ ನಡೆಯಲಿದೆ. ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿ, ಬೆಳ್ಳಿಹಬ್ಬದ ಉದ್ಘಾ ಟನೆ ನೆರವೇರಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಎಲ್.ನಾಗೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮ, ರಂಗಕರ್ಮಿಗಳೂ ಆದ ಮಾತೃಮಂಡಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ರಾಮೇ ಶ್ವರಿ ವರ್ಮ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮಾತೃಮಂಡಲಿ ವಿದ್ಯಾಸಂಸ್ಥೆ ಉಪಾಧ್ಯಕ್ಷೆ ರಾಮೇ ಶ್ವರಿವರ್ಮ, ರಜತೋತ್ಸವ ಸಮಿತಿ ಅಧ್ಯಕ್ಷೆ ವಾಣಿ ಪ್ರಸಾದ್, ಶಿಶುವಿಕಾಸ ಕೇಂದ್ರದ ಮುಖ್ಯಶಿಕ್ಷಕ ಬಿ.ವಿ. ಪಾಂಡು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »