ಮೈಸೂರಿನ 9 ಯೋಗಪಟುಗಳು ಆಯ್ಕೆ
ಮೈಸೂರು

ಮೈಸೂರಿನ 9 ಯೋಗಪಟುಗಳು ಆಯ್ಕೆ

June 14, 2019

ಮೈಸೂರು:ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶ ದಲ್ಲಿ 2019ರ ಸೆಪ್ಟೆಂಬರ್‍ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಯೋಗ ಚಾಂಪಿ ಯನ್ ಶಿಪ್‍ಗೆ ಮೈಸೂರಿನ 9 ಮಂದಿ ಯೋಗಪಟುಗಳು ಆಯ್ಕೆಯಾಗಿದ್ದಾರೆ.

ವಿಜಯನಗರದಲ್ಲಿನ ಮೈಸೂರು ವಿವೇಕಾ ನಂದ ಯೋಗ ಎಜುಕೇಷನ್ ಅಂಡ್ ರಿಸರ್ಚ್ ಟ್ರಸ್ಟ್‍ನ 9 ಮಂದಿ ಆಯ್ಕೆಯಾಗಿದ್ದು, ಈ ಸ್ಪರ್ಧೆಯು ಕಿರಿಯರು ಮತ್ತು ಹಿರಿ ಯರು 2 ವಿಭಾಗದಲ್ಲಿ ನಡೆಯಲಿದೆ.

ಹಿಮಾಚಲ ಪ್ರದೇಶದಲ್ಲಿ ನಡೆಯುವ ಕಿರಿಯ ವಿಭಾಗದ ಸ್ಪರ್ಧೆಗೆ ಅಂಕಿತ, ಶ್ರೇಷ್ಠ, ವನ್ಷಿಕ, ಶ್ರೀಜನರಾವ್, ಬ್ರಿತಿ ಅಶೋಕ್ ಆಯ್ಕೆಯಾದರೆ, ಉತ್ತರ ಪ್ರದೇಶದಲ್ಲಿ ನಡೆಯುವ ಹಿರಿಯರ ವಿಭಾಗಕ್ಕೆ ಸಚಿನ್, ಗೋವಿಂದರಾಜು, ರಮಾ, ಬಾಪು ಆರ್ ನಚಿಕೇತ ಆಯ್ಕೆಯಾಗಿದ್ದಾರೆ. ಅವರ ಜತೆಗೆ ಸ್ಟ್ಯಾಂಡ್ ಬೈ ಆಗಿ (ಸ್ಪರ್ಧಿಗಳು ಅನಾ ರೋಗ್ಯಕ್ಕೊಳಗಾದರೆ ಅವರ ಪರ) ಅಭೀಜ್ಞಾ, ಆಶನಿ, ಶ್ರೇಯಸ್, ರೋಹಿತ್, ಧನುಶ್ರೀ, ಸಾಗರಿ, ಕವಿತಾ, ವರ್ಷ, ಮಾನ್, ತರುಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಯೋಗಪಟು ಆರ್.ಅಂಕಿತ ವಿಜಯನಗ ರದ ವಿದ್ಯಾಲಯ ಶಾಲೆಯಲ್ಲಿ 8ನೇ ತರ ಗತಿ ವ್ಯಾಸಂಗ ಮಾಡುತ್ತಿದ್ದು, 6 ವರ್ಷ ದಿಂದ ಈ ಸಂಸ್ಥೆಯಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಸಿಂಗಪೂರ್‍ನಲ್ಲಿ ನಡೆದ ಯೋಗ ಚಾಂಪಿಯನ್‍ಶಿಪ್ ಮತ್ತು ಇತ್ತೀಚೆಗೆ ಸಿರಸಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್‍ನಲ್ಲಿ ಚಿನ್ನ ಹಾಗೂ ರಾಷ್ಟ್ರ ಮಟ್ಟದ ಪಂದ್ಯಾವಳಿಯಲ್ಲೂ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಹಾಗೆಯೇ ವನ್ಷಿಕ, 2018ರ ನವೆಂ ಬರ್‍ನಲ್ಲಿ ಹರಿಯಾಣದಲ್ಲಿ ನಡೆದ ಯೋಗ ಓಪನ್ ಚಾಂಪಿಯನ್ ಶಿಪ್‍ನಲ್ಲಿ ಕಂಚು, ಸಿರಸಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಅಲ್ಲದೆ ಎಂ.ವರ್ಷ, ಉಡುಪಿಯಲ್ಲಿ ನಡೆದ ಯೋಗ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನ, ಹಾಗೂ ಸಿರಸಿಯಲ್ಲಿ ನಡೆದ ಯೋಗ ಪಂದ್ಯಾವಳಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಭ್ರಿತಿ ಅಶೋಕ್ ಅವರು ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಪಂದ್ಯಾ ವಳಿಯಲ್ಲಿ ಚಿನ್ನ, ಕಡೂರಿನಲ್ಲಿ ಎರಡು ಬೆಳ್ಳಿ ಹಾಗೂ ಸಿರಸಿಯಲ್ಲಿ ನಡೆದ ರಾಜ್ಯ ಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ. ಅಭಿಜ್ಞಾ ಅವರು ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಯೋಗ ಪಂದ್ಯಾವಳಿಯಲ್ಲಿ 5ನೇ ಸ್ಥಾನ, ಸಿರಸಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಶ್ರೇಷ್ಠ ಎಂಬ ಬಾಲಕಿ 3 ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದು, ಚಿಕ್ಕೋಡಿ ಯಲ್ಲಿ ನಡೆದ ಯೋಗ ಪಂದ್ಯಾವಳಿಯಲ್ಲಿ ಚಿನ್ನ, ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್‍ನಲ್ಲಿ 3ನೇ ಸ್ಥಾನ ಹಾಗೂ ಸಿರಸಿಯಲ್ಲಿ ನಡೆದ ಪಂದ್ಯದಲ್ಲಿ 2ನೇ ಸ್ಥಾನವನ್ನು ಪಡೆದು ಕೊಂಡಿದ್ದಾರೆ. ಹಾಗೆಯೇ ಈ ಟ್ರಸ್ಟ್ ಉಪನ್ಯಾಸಕ ಎಲ್.ಎಸ್.ಸಚಿನ್, 16 ವರ್ಷದಿಂದ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2006ರಲ್ಲಿ ಬೆಂಗ ಳೂರು ಮತ್ತು ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಪಂದ್ಯಾವಳಿ, ಕಡೂ ರಿನಲ್ಲಿ ನಡೆದ ಶಾಲಾ-ಕಾಲೇಜು ಮಟ್ಟದ ಪಂದ್ಯಾವಳಿ ಹಾಗೂ ಇತ್ತೀಚೆಗೆ ಸಿರಸಿ ಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಚಿನ್ನ, ಮಧುರೈ ಮತ್ತು ಧರ್ಮಸ್ಥಳದಲ್ಲಿ ನಡೆದ ರಾಷ್ಟಮಟ್ಟದ ಪಂದ್ಯಾವಳಿಯಲ್ಲಿ ಕಂಚು.

ವೈ.ಕವಿತಾ ಅವರು, 6 ವರ್ಷದಿಂದ ಯೋಗಾಭ್ಯಾಸ ಮಾಡುತ್ತಿದ್ದು, ಸಂಸ್ಥೆಯಿಂದ ಆಯೋಜಿಸಿದ್ದ ಯೋಗ ಸ್ಪರ್ಧೆಯಲ್ಲಿ ಕಂಚು, ಸಿರಸಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್‍ನಲ್ಲಿ 5ನೇ ಸ್ಥಾನ ಹಾಗೂ ರಾಜ್ಯ ಮಟ್ಟದ ತೀರ್ಪು ಗಾರರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಕವಿತಾ, ಸದ್ಯ ಮೈಸೂರಿನಲ್ಲಿ ಸಿವಿಲ್ ಎಂಜಿ ನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತರುಣ್ ಎಂಬುವರು ಚಿಕ್ಕೋಡಿಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆ ಯಲ್ಲಿ ಬೆಳ್ಳಿ, 2017 ಮತ್ತು 18ರ ದಸರಾ ಯೋಗ ಸ್ಪರ್ಧೆಯಲ್ಲಿ ಕ್ರಮವಾಗಿ ಕಂಚು ಮತ್ತು ಬೆಳ್ಳಿ, ಮಂಡ್ಯದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಕಂಚು, ಸಿರಸಿಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ 6ನೇ ಸ್ಥಾನ ಪಡೆದಿದ್ದು, ಸದ್ಯ ಬೆಂಗಳೂರಿನಲ್ಲಿ ಬಿಎಸ್ಸಿ ಇನ್ ಯೋಗ ವ್ಯಾಸಂಗ ಮಾಡುತ್ತಿದ್ದಾರೆ.

ಅಲ್ಲದೆ, ರಮಾ ಆರ್.ಕೆದ್ಲಾಯ್ ಅವರು ಮೈಸೂರಿನ ಯೋಗ ದಸರಾದಲ್ಲಿ ಮೂರು ಬಾರಿ ಸ್ಪರ್ಧಿಸಿ ಎರಡು ಬಾರಿ ಪ್ರಥಮ, 1 ಬಾರಿ ದ್ವಿತೀಯ ಬಹುಮಾನ, ಹಗರಿ ಬೊಮ್ಮನಹಳ್ಳಿಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಬೆಳ್ಳಿ, ಸಿರಸಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದು ಕೊಂಡಿದ್ದಾರೆ. ಬಾಪು ಆರ್ ನಚಿಕೇತ ಅವರು 10 ವರ್ಷದಿಂದ ಯೋಗ ಉಪ ನ್ಯಾಸಕರಾಗಿ ಕೆಲಸ ಮಾಡುತ್ತಿದ್ದು, ಸಿರಸಿ ಯಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.

Translate »