ಮೈಸೂರಿನ ಐವರು ಸೇರಿ 90 ಇನ್ಸ್‍ಪೆಕ್ಟರ್‍ಗಳ ವರ್ಗಾವರ್ಗಿ
ಮೈಸೂರು

ಮೈಸೂರಿನ ಐವರು ಸೇರಿ 90 ಇನ್ಸ್‍ಪೆಕ್ಟರ್‍ಗಳ ವರ್ಗಾವರ್ಗಿ

January 14, 2020

ಮೈಸೂರು, ಜ.13(ಎಸ್‍ಬಿಡಿ)- ಮೈಸೂರಿನ ಐವರು ಸೇರಿದಂತೆ ರಾಜ್ಯಾದ್ಯಂತ 90 ಪೊಲೀಸ್ ಇನ್ಸ್‍ಪೆಕ್ಟರ್ ಗಳ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎನ್.ಮುನಿಯಪ್ಪ ಲಷ್ಕರ್ ಠಾಣೆಯಿಂದ ದೇವರಾಜ ಸಂಚಾರ ಠಾಣೆಗೆ, ಕೆ.ಶ್ರೀಕಾಂತ್ ಎಸಿಬಿಯಿಂದ ನಜರ್ ಬಾದ್ ಠಾಣೆಗೆ, ಮೊಹಮ್ಮದ್ ಇರ್ಶಾದ್ ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ(ಡಿಸಿಆರ್‍ಬಿ)ದಿಂದ ಸಿಐಡಿಗೆ, ಬಿ.ಜಿ.ಪ್ರಕಾಶ್ ವಿವಿಪುರಂ ಸಂಚಾರ ಠಾಣೆ ಯಿಂದ ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ಹಾಗೂ ಎಲ್. ಅರುಣ್ ಮಂಡಿ ಠಾಣೆಯಿಂದ ಕರ್ನಾಟಕ ಲೋಕಾ ಯುಕ್ತ (ಕೆಎಲ್‍ಎ)ಕ್ಕೆ ವರ್ಗಾವಣೆಗೊಂಡಿದ್ದಾರೆ.

ಸ್ಥಳ ನಿರೀಕ್ಷಣೆಯಲ್ಲಿದ್ದ ಪಿ.ಪಿ.ಸಂತೋಷ್ ಮೈಸೂರಿನ ಡಿಸಿಆರ್‍ಇಗೆ, ಅರುಣ ಕುಮಾರಿ ವಿವಿ ಪುರಂ ಸಂಚಾರ ಠಾಣೆಗೆ, ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ವಿ.ನಾರಾ ಯಣಸ್ವಾಮಿ ಮಂಡಿ ಠಾಣೆಗೆ ನಿಯೋಜನೆಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಸಿರ್ಸಿ ವೃತ್ತದ ಬಿ.ಗಿರೀಶ್ ಅವರನ್ನು ಸಕಲೇಶಪುರ ವೃತ್ತಕ್ಕೆ, ಈ ಸ್ಥಾನದಲ್ಲಿದ್ದ ಎಸ್.ಹೆಚ್. ವಸಂತ್ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾಯಿಸ ಲಾಗಿದೆ. ಕೊಡಗು ಡಿಸಿಐಬಿಯ ಎಂ.ಮಹೇಶ್, ಕುಶಾಲ ನಗರ ವೃತ್ತಕ್ಕೆ, ಈ ಸ್ಥಾನದಲ್ಲಿದ್ದ ಎನ್.ಕುಮಾರಾರಾಧ್ಯ ಕೊಡಗು ಡಿಸಿಐಬಿಗೆ ವರ್ಗಾವರ್ಗಿಗೊಂಡಿದ್ದಾರೆ. ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಆದೇಶದಲ್ಲಿದ್ದ ಕೆ.ಆರ್. ಪ್ರಸಾದ್ ಮದ್ದೂರು ವೃತ್ತಕ್ಕೆ ನಿಯೋಜನೆಗೊಂಡಿದ್ದಾರೆ.

Translate »