ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿದೆ: ಮೈಸೂರು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ ಅಭಿಮತ
ಚಾಮರಾಜನಗರ

ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿದೆ: ಮೈಸೂರು ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ ಅಭಿಮತ

August 6, 2018

ಚಾಮರಾಜನಗರ: ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಬರೆದಿರುವ ಸಂವಿಧಾನ, ಮೀಸಲಾತಿಗೆ ಅಪಾಯ ಬಂದಿರುವ ಕಾರಣದಿಂದ ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಮೈಸೂರು ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಸೆಸ್ಕಾಂ ಉಪವಿಭಾಗದ ಆವ ರಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವಿಭಾಗೀಯ ಸಮಿತಿ, ವೃತ್ತ ಸಮಿತಿ ವತಿಯಿಂದ ನಡೆದ 127ನೇ ಭೀಮ ಸಂಭ್ರಮ-2018 ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದ ಹೆಣ್ಣುಮಕ್ಕಳಿಗೆ ಬದುಕು, ಮಾತನಾಡುವ, ಧಾರ್ಮಿಕ ಹಕ್ಕು ಸೇರಿದಂತೆ ಎಲ್ಲ ಹಕ್ಕನ್ನು ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿದ್ದಾರೆ. ಅಲ್ಲದೆ ದೇಶದ ಪ್ರತಿಯೊಬ್ಬರಿಗೂ ಮತ ದಾನ ಹಕ್ಕು, ಶಿಕ್ಷಣ, ಆಸ್ತಿ, ಉದ್ಯೋಗ ಹಕ್ಕು ನೀಡಿ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ. ಆದರು ಸಹ ಅಂಬೇಡ್ಕರ್ ಅವರನ್ನು ಎಸ್‍ಸಿ, ಎಸ್‍ಟಿಗಳಿಗೆ ಸೀಮಿತಗೊಳಿಸಿ, ಜಾತಿಪ್ರೇಮ್ ನಲ್ಲಿ ನೋಡುತ್ತಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಪ್ರತಿಯೊಬ್ಬ ಪ್ರಜೆಯೂ ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕಿತ್ತು. ಮನುವಾದಿಗಳು ಅಂಬೇಡ್ಕರ್‍ರವರ ಸಂವಿಧಾನ, ಮೀಸಲಾತಿ, ಪ್ರಜಾಪ್ರಭುತ್ವ ನಾಶ ಪಡಿಸಿ, ಮನುವಾದಿ ಸಂವಿಧಾನ ತರಲು ಸಜ್ಜಾಗುತ್ತಿದ್ದಾರೆ. ಇದರ ಬಗ್ಗೆ ಎಚ್ಚೆತ್ತು ಕೊಂಡು ದೇಶದ ಮನುವಾದಿ ಸಂವಿ ಧಾನವನ್ನು ಬೇರು ಸಹಿತ ಕಿತ್ತು ಹಾಕ ಬೇಕಿದೆ ಎಂದರು.

ಎಸ್‍ಸಿ, ಎಸ್‍ಟಿಗಳಿಗೆ ಸಂಪೂರ್ಣ ಮೀಸಲಾತಿ ನೀಡಿಲ್ಲ: ಎಸ್‍ಸಿ, ಎಸ್‍ಟಿ ಗಳಿಗೆ ಸರ್ಕಾರ ಸಂಪೂರ್ಣವಾಗಿ ಶೇ. 18 ರಷ್ಟು ಮೀಸಲಾತಿ ನೀಡಿಲ್ಲ. ಕೇವಲ ಶೇ. 10 ರಷ್ಟು ಮೀಸಲಾತಿಯನ್ನು ನೀಡಿದೆ. ನಮ್ಮ ಸಂವಿಧಾನ ಬದ್ಧ ಮೀಸಲಾತಿ ನಮಗೆ ದೊರೆತಿಲ್ಲ. ಸಂವಿಧಾನ ಜಾರಿ ಮಾಡುವ ಸ್ಥಳದಲ್ಲಿ ಮನುವಾದಿಗಳು ಇರುವುದರಿಂದ ಸಂವಿಧಾನ ಸಂಪೂರ್ಣ ಜಾರಿಯಾಗಿಲ್ಲ ಸಂವಿಧಾನ ಬದ್ಧ ನಮ್ಮ ಹಕ್ಕುಗಳನ್ನು ಪಡೆ ದುಕೊಳ್ಳಲು ಹೋರಾಟ ರೂಪಿಸಿಕೊಳ್ಳ ಬೇಕಿದೆ. ಸಾಮಾಜಿಕ ನ್ಯಾಯದ ಪ್ರತಿ ಬಿಂಬವಾಗಿರುವ ಮೀಸಲಾತಿಯನ್ನು ನೀಡಿ ಸರ್ಕಾರ ಸಾಮಾಜಿಕ ನ್ಯಾಯ ಕೊಡ ಬೇಕಿದೆ ಎಂದರು.

ಅಂಬೇಡ್ಕರ್ ಸಹಕಾರ ಬ್ಯಾಂಕ್: ಈಗಾಗಲೇ 8 ಜಿಲ್ಲೆಗಳಲ್ಲಿ ಅಂಬೇಡ್ಕರ್ ಬ್ಯಾಂಕ್ ತೆರೆಯಲಾಗಿದ್ದು, ಚಾಮರಾಜ ನಗರದಲ್ಲೂ ಬ್ಯಾಂಕ್‍ನ ಶಾಖೆ ತೆರೆಯಲಾಗಿದೆ. 1250 ರೂ. ನೀಡಿ ಸದಸ್ಯತ್ವ ಪಡೆದುಕೊಂಡು ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸಬೇಕು ಎಂದರು. ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಕೊಳ್ಳೇಗಾಲ ಜೇತ ವನದ ಸುಗಂತಪಾಲಭಂತೇಜಿ ಮಾತನಾಡಿ, ಅಂಬೇಡ್ಕರ್ ಆಶಯಗಳನ್ನು ಅನುಕರಣೆ ಮಾಡಬೇಕು. ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲೇ ನಡೆದು ಭೌದ್ದ ಧರ್ಮ ಸ್ವೀಕರಿಸಬೇಕು ಎಂದು ಆಶೀರ್ವಚನ ನೀಡಿದರು.

ಸೆಸ್ಕ್ ವಿಭಾಗ ಕಚೇರಿ ಕಾರ್ಯನಿರ್ವಾ ಹಕ ಇಂಜಿನಿಯರ್ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಅಂಬೇಡ್ಕರ್ ಎಂದರೆ ಸಂಪೂರ್ಣ ಜಗತ್ತೇ ಕಾಣಿಸುತ್ತದೆ. ಪ್ರತಿಕ್ಷಣವೂ ಅಂಬೇ ಡ್ಕರ್ ಬಗ್ಗೆ ಅಧ್ಯಯನ ಮಾಡಬೇಕಿದೆ. ಅವರ ಆದರ್ಶಗಳನ್ನು ಮೈಗೂಡಿಸಿ ಕೊಳ್ಳಬೇಕಿದೆ ಎಂದರು.

ಸಿದ್ದರಾಮೇಶ್ವರಸ್ವಾಮೀಜಿ ಸಾನಿಧ್ಯ ವಹಿಸಿದ್ದರು, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ಅಧ್ಯಕ್ಷ ಕೆ.ದಾಸ್‍ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಹೆಚ್.ಕೆ. ರಮೇಶ್, ಲೆಕ್ಕಾಧಿಕಾರಿಗಳಾದ ಆರ್.ಭಾಸ್ಕರ್, ಬೆಳ್ಳಯ್ಯ, ಸಹಾಯಕ ನಿರ್ವಾಹಕ ರಾಜು, ದೇವರಾಜಯ್ಯ, ಶಶಿಧರ್, ಸಿದ್ದಲಿಂಗಪ್ಪ, ನಂದಿನಿ, ಎ.ಆರ್.ಮಂಗಳಾಂಬ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಕೇಂದ್ರ ಕಾರ್ಯ ಕಾರಿಣಿ ಸಮಿತಿ ಸದಸ್ಯ ಸುರೇಶ್, ಎಸ್.ಮಹೇಶ್, ಮಹೇಂದ್ರ, ಉಪಾಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ವಿದ್ಯುತ್ ಗುತ್ತಿಗೆ ದಾರ ಸಂಘದ ಅಧ್ಯಕ್ಷ ನಂಜುಂಡ ಸ್ವಾಮಿ, ಬ್ಲಫ್ ಸೊಸೈಟಿ ಅಧ್ಯಕ್ಷ ಪ್ರಸಾದೇಗೌಡ, ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ವಿಭಾಗೀಯ ಸಮಿತಿ ಅಧ್ಯಕ್ಷ ಪಿ.ಸಿದ್ದ ರಾಜು, ಉಪಾಧ್ಯಕ್ಷ ಸಿ.ನಾಗರಾಜು, ಕಾರ್ಯ ಎ.ಎಲ್.ಪ್ರಶಾಂತ್, ಸಹ ಕಾರ್ಯದರ್ಶಿ ಆರ್.ಡಿ.ನಾಗರಾಜು, ವೃತ್ತ ಸಮಿತಿ ಅಧ್ಯಕ್ಷ ದೇವರಾಜಯ್ಯ, ಉಪಾಧ್ಯಕ್ಷ ಮಲ್ಲಯ್ಯ, ಕಾರ್ಯದರ್ಶಿ ಶಿವಶಂಕರಮೂರ್ತಿ, ದಲಿತ ಮುಖಂಡ ರಾದ ಆಲೂರುನಾಗೇಂದ್ರ, ಕೆ.ಎಂ.ನಾಗ ರಾಜು ಇತರರು ಹಾಜರಿದ್ದರು.

Translate »