ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಹಾಸನ ಜಿಲ್ಲೆಗೆ 8ನೇ ಸ್ಥಾನ
ಹಾಸನ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ಹಾಸನ ಜಿಲ್ಲೆಗೆ 8ನೇ ಸ್ಥಾನ

May 1, 2018

ಹಾಸನ: 2018ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ 13,682 ವಿದ್ಯಾರ್ಥಿಗಳಲ್ಲಿ 10,107 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಶೇಕಡಾವಾರು ಫಲಿತಾಂಶವು ಪ್ರತಿಶತ ಶೇ.73.87 ರೊಂದಿಗೆ ರಾಜ್ಯ ದಲ್ಲಿ ಜಿಲ್ಲೆಯು 8ನೇ ಸ್ಥಾನದಲ್ಲಿದೆ.

2017ನೇ ಸಾಲಿನಲ್ಲಿ ಶೇ.59.88 ಫಲಿತಾಂಶದೊಂದಿಗೆ ರಾಜ್ಯದಲ್ಲಿ 11ನೇ ಸ್ಥಾನದಲ್ಲಿತ್ತು. ಈ ಬಾರಿ ಶೇ.73.87 ಫಲಿ ತಾಂಶದೊಂದಿಗೆ 8ನೇ ಸ್ಥಾನಕ್ಕೇರಿದೆ.

ಸಂಯೋಜನೆವಾರು ಫಲಿತಾಂಶದಲ್ಲಿ ಕಲಾ ವಿಭಾಗ 3,406 ವಿದ್ಯಾರ್ಥಿಗಳಲ್ಲಿ 2,263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.66.44 ಫಲಿತಾಂಶ ಬಂದಿದೆ. ವಾಣ ಜ್ಯ ವಿಭಾಗದಲ್ಲಿ 5,650 ವಿದ್ಯಾರ್ಥಿ ಗಳಲ್ಲಿ 4277 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದು ಶೇ.75.77, ವಿಜ್ಞಾನ ವಿಭಾಗ ದಲ್ಲಿ 4,626 ವಿದ್ಯಾರ್ಥಿಗಳಲ್ಲಿ 3,567 ವಿದ್ಯಾರ್ಥಿಗಳು ಪಾಸಾಗಿದ್ದು ಶೇ.77.11 ರಷ್ಟು ಫಲಿತಾಂಶ ಬಂದಿದೆ. ಬಾಲಕಿ ಯರು ಶೇ.71.96 ರಷ್ಟು ಉತ್ತೀರ್ಣ ರಾಗಿದ್ದರೆ, ಬಾಲಕರಿಂದ ಶೇ.57.55 ರಷ್ಟು ಫಲಿತಾಂಶ ದಾಖಲಾಗಿದೆ. ನಗರ ಪ್ರದೇಶದ ಫಲಿತಾಂಶವು ಶೇ .73.39, ಗ್ರಾಮೀಣ ಪ್ರದೇಶ ಫಲಿತಾಂಶವು ಶೇ.75.64 ಫಲಿತಾಂಶ ಲಭಿಸಿದೆ.

Translate »