ಮೈಸೂರು: ಗೋಕುಲಂ 6ನೇ ವಾರ್ಡ್ ನಿಜಕ್ಕೂ ತೀವ್ರ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಇಲ್ಲಿ ಹಾಲಿ ಮೂವರು ಪಾಲಿಕೆ ಸದಸ್ಯರಾದ ಜೆಡಿಎಸ್ನ ಎಸ್ಬಿಎಂ ಮಂಜು, ಬಿಜೆಪಿಯ ಟಿ. ಗಿರೀಶ್ಪ್ರಸಾದ್ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಸ್ನೇಕ್ ಶ್ಯಾಮ್ ಕಣದಲ್ಲಿದ್ದರಿಂದ ತೀವ್ರ ಕುತೂಹಲ ಕೆರಳಿಸಿತ್ತು. ತೀವ್ರ ಪೈಪೋ ಟಿಯ ನಡುವೆ ಅಂತಿಮವಾಗಿ ಜೆಡಿಎಸ್ನ ಎಸ್ಬಿಎಂ ಮಂಜು, ಬಿಜೆಪಿಯ ಟಿ.ಗಿರೀಶ್ಪ್ರಸಾದ್ ಅವರನ್ನು 193 ಮತಗಳ ಅಂತರದಲ್ಲಿ ಸೋಲಿಸಿ, ಪುನರಾಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಹಾಲಿ ಸದಸ್ಯ ಬಿಜೆಪಿ ಬಂಡಾಯ ಅಭ್ಯರ್ಥಿ ಸ್ನೇಕ್ ಶ್ಯಾಮ್ ಕೇವಲ 359 ಮತಗಳನ್ನು ಪಡೆದರು. ಇಲ್ಲಿ ಕಾಂಗ್ರೆಸ್ನ ಕೆ.ಎಂ.ದಿನೇಶ್ 1632 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಮೈಸೂರು