ಚಾಮುಂಡಿಬೆಟ್ಟದಲ್ಲಿ ಪಾಳುಬಿದ್ದಿದ್ದ ಪುರಾತನ ಕಲ್ಯಾಣ ಗೆ ಯುವ ಬ್ರಿಗೇಡ್‍ನಿಂದ ಕಾಯಕಲ್ಪ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಪಾಳುಬಿದ್ದಿದ್ದ ಪುರಾತನ ಕಲ್ಯಾಣ ಗೆ ಯುವ ಬ್ರಿಗೇಡ್‍ನಿಂದ ಕಾಯಕಲ್ಪ

May 28, 2018

ಕೊಳಚೆ ನೀರು, ಹೂಳು, ಕೊಳೆತು ನಾರುತ್ತಿದ್ದ ಕೋತಿಗಳ ಮೃತದೇಹದ ಅವಶೇಷ ತೆಗೆದರು…

ಮೈಸೂರು: ಗಿಡಿಗಂಟಿಗಳು ಬೆಳೆದು ಬಳಕೆಯಾಗದೆ ಪಾಳು ಬಿದ್ದಿದ್ದ ಪುರಾತನ ಕಲ್ಯಾಣ ಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಯುವ ಬ್ರಿಗೇಡ್‍ನ ನೂರಾರು ಯುವಕರು ಸ್ವಯಂಪ್ರೇರಿತರಾಗಿ ಕಲ್ಯಾಣ ಗೆ ಕಾಯಕಲ್ಪ ನೀಡಿ ಸುಂದರಗೊಳಿಸಿದ್ದಾರೆ. ಅದು ಸಾರ್ವಜನಿಕರ ಬಳಕೆಗೆ ಸಿಗುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ದೇವಿಕೆರೆ ಬಳಿಯ ಶ್ರೀ ಚಿತ್ತಲಾಂಬ ಸಮೇತ ಶ್ರೀ ಚಿದಂಬರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿರುವ ಕಲ್ಯಾಣ ಕೊಳ ಜೀವಜಲದಿಂದ ತುಂಬಿ ಒಂದು ಕಾಲದಲ್ಲಿ ದೇವರ ಅಭಿಷೇಕಕ್ಕೆ ಇಲ್ಲಿನ ನೀರು ಬಳಕೆಯಾಗುತ್ತಿತ್ತು. ಕ್ರಮೇಣ ಅದು ಪಾಳು ಬಿದ್ದಿತು. ಸುತ್ತಲೂ ಗಿಡಗಂಟಿಗಳು ಬೆಳೆದು ಅಲ್ಲಿಗೆ ಯಾರೂ ಹೋಗಲಾಗದ ಸ್ಥಿತಿಯಲ್ಲಿತ್ತು.

ಯುವ ಬ್ರಿಗೇಡ್‍ನ ಸಂಚಾಲಕ ಎಸ್.ಚಂದ್ರಶೇಖರ್ ನೇತೃತ್ವದ ಯುವಕರ ತಂಡ ಇದಕ್ಕೆ ಕಾಯಕಲ್ಪ ನೀಡಲು ತೀರ್ಮಾನಿಸಿ, ಭಾನುವಾರ 50ಕ್ಕೂ ಹೆಚ್ಚು ಬ್ರಿಗೇಡ್ ಕಾರ್ಯಕರ್ತರು ಕೈಕಾಲುಗಳಿಗೆ ಗ್ಲೌಸ್ ಧರಿಸಿ, ಹಾರೆ, ಗುದ್ದಲಿ, ಪಿಕಾಸಿಗಳನ್ನು ಹಿಡಿದು ಕಲ್ಯಾಣ ಯ ಸ್ವಚ್ಛತಾ ಕಾರ್ಯಕ್ಕೆ ಇಳಿದರು. ಮುಂಜಾನೆ 6 ಗಂಟೆಯಿಂದ ಸಂಜೆಯವರೆಗೆ ಇಡೀ ದಿನ ಸತತವಾಗಿ ಶ್ರಮವಹಿಸಿ ಕೊಳವನ್ನು ಸುಂದರಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನೆಲಮಟ್ಟದಿಂದ 30 ಅಡಿಗೂ ಹೆಚ್ಚು ಆಳದವರೆಗಿರುವ ಹಳೆಯ ಕಾಲದ ಕಲ್ಯಾಣ ಯ ತಳದಲ್ಲಿ ಕೊಳಚೆ ನೀರು ರಾಡಿಯಾಗಿತ್ತು. ಕೊಳಚೆ ನೀರನ್ನು ಡೀಸೆಲ್ ಮೋಟಾರ್ ಸಹಾಯದಿಂದ ಹೊರ ತೆಗೆದರು. 5 ಅಡಿಗೂ ಹೆಚ್ಚು ತುಂಬಿದ್ದ ಹೂಳನ್ನು ಅಗೆದು ತೆಗೆದರು. ಈ ವೇಳೆ ಅವರು ಕೊಳೆತು ನಾರುತ್ತಿದ್ದ ಕೋತಿಗಳ ಮೃತದೇಹದ ಅವಶೇಷಗಳನ್ನು ಹೊರ ತೆಗೆದರು.

ಕೊಳವನ್ನು ಸ್ವಚ್ಛಗೊಳಿಸುತ್ತಿದ್ದಂತೆ ಬಂಡೆಗಳ ನಡುವಿನಿಂದ ಶುದ್ಧ ಜೀವಜಲ ಹರಿದು ಬರತೊಡಗಿದೆ. ಸುತ್ತಲೂ ಗಿಡಗಂಟೆಗಳಿಂದ, ಹೂಳಿನಿಂದ ತುಂಬಿದ್ದ ಕಲ್ಯಾಣ ಸುತ್ತಲಿನ ಗೋಡೆಗಳಿಗೆ ಬಿಳಿಯ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಲಾಗಿದೆ. ಯುವ ಬ್ರಿಗೇಡ್‍ನೊಂದಿಗೆ ಸ್ವಚ್ಛಂದ ಮೈಸೂರು ಸೇರಿದಂತೆ ಇನ್ನಿತರ ಸಂಘಟನೆಗಳ ಕಾರ್ಯಕರ್ತರೂ ಕೈಜೋಡಿಸಿದ್ದರು.

ಯುವ ಬ್ರಿಗೇಡ್ ವತಿಯಿಂದ ಜೀವಜಲದ ಸೆಲೆ ಇರುವ ಕಲ್ಯಾಣ ಗಳು, ಕೆರೆ ಕಟ್ಟೆಗಳನ್ನು ದುರಸ್ತಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಇಂದು ನಮ್ಮ ಯುವಕರ ತಂಡ ಶ್ರಮವಹಿಸಿ ಕಲ್ಯಾಣ ಯನ್ನು ಸುಂದರಗೊಳಿಸುವಲ್ಲಿ ನೆರವಾಗಿದ್ದಾರೆ. ಮುಂದೆಯೂ ಯುವ ಬ್ರಿಗೇಡ್ ಪರಿಸರಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. – ಎಸ್.ಚಂದ್ರಶೇಖರ್, ಸಂಚಾಲಕ, ಯುವ ಬ್ರಿಗೇಡ್.

ಕೇವಲ ವಾಟ್ಸ್‍ಅಪ್, ಫೇಸ್‍ಬುಕ್‍ಗಳಲ್ಲಿ ಅನಗತ್ಯ ವಿಚಾರಗಳ ಬಗ್ಗೆ ಕಾಮೆಂಟ್ ಮಾಡಿ ಸಮಯ ಹಾಳು ಮಾಡುವ ಬದಲು ಪರಿಸರಕ್ಕೆ ಪೂರಕವಾದ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಸೂಕ್ತ ಎಂಬ ತೀರ್ಮಾನದೊಂದಿಗೆ ನಾವೂ ಕೂಡ ಯುವ ಬ್ರಿಗೇಡ್‍ನೊಂದಿಗೆ ಕೈಜೋಡಿಸಿದ್ದೇವೆ. ಮುಂದೆಯೂ ಇಂತಹ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದೇವೆ. – ಪ್ರಶಾಂತ್, ಸ್ವಚ್ಛಂದ ಮೈಸೂರು.

 

Translate »