ಅರಸೀಕೆರೆಯಲ್ಲಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ
ಹಾಸನ

ಅರಸೀಕೆರೆಯಲ್ಲಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ

December 27, 2018

ಅರಸೀಕೆರೆ:  ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಡಲ ಪೂಜಾ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಉತ್ಸವ, ಭಗವತಿ ಸೇವೆಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಮಂಡಳಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಶ್ರೀ ಕ್ಷೇತ್ರದ ತಂತ್ರಿ ವಿಷ್ಣು ಭಟ್ಟ ದ್ರಿಪದ್ ಅವರ ಮಾರ್ಗದರ್ಶನದಲ್ಲಿ ಕಳೆದ ಮೂರು ದಿನಗಳಿಂದ ಅಯ್ಯಪ್ಪ ಸ್ವಾಮಿ ಉತ್ಸವ, ಭಗವತಿ ಸೇವೆಯನ್ನು ನಡೆಸಲಾಯಿತು. ಮೂರನೇ ದಿನದ ಪ್ರಯುಕ್ತ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳುವುದರ ಮೂಲಕ ದೇವ ಸ್ಥಾನದಲ್ಲಿ ವರ್ಷವಿಡೀ ನಿತ್ಯ ಪೂಜೆ, ಗಣ ಪತಿ ಹೋಮ, ಅಭಿಷೇಕ, ಸಂಕಷ್ಟ ಪರಿಹಾರಕ್ಕೆ ಸೂಕ್ತ ಪೂಜೆಯನ್ನು ನಡೆಸ ಲಾಗುತ್ತದೆ. ಅದರಂತೆ ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮಂಡಲ ಪೂಜೆ ಯನ್ನು ಹಮ್ಮಿಕೊಂಡು ದೇವರ ಸೇವೆ ಯನ್ನು ಮಾಡುವುದು ಸಂಪ್ರದಾಯ. ಈ ದಿನದಂದು ಉಷಾ ಪೂಜೆ, ಮಹಾ ಗಣಪತಿ ಹೋಮ, ತುಪ್ಪದ ಅಭಿಷೇಕ, ಗಂಧದ ಅಭಿಷೇಕ, ಭಸ್ಮಾಭಿಷೇಕ, ಪಂಚಾ ಮೃತ ಅಭಿಷೇಕ, ಉಚ್ಚಪೂಜೆಯನ್ನು ನಡೆಸಲಾಗುವುದು ಎಂದರು.

ಮಂಡಲ ಪೂಜೆಯ ಪ್ರಯುಕ್ತ ಕೆಂಗಲ್ ಗುರು ಸಿದ್ದೇಶ್ವರ ಸ್ವಾಮಿ, ಗ್ರಾಮ ದೇವತಾ ಕರಿಯಮ್ಮ, ಮಲ್ಲಿಗೆಮ್ಮ ಮತ್ತು ಅಯ್ಯಪ್ಪ ಸ್ವಾಮಿ ಉತ್ಸವವನ್ನು ನಗರದ ಪ್ರಮುಖ ಬೀದಿಗಳಲ್ಲಿ ಪಂಚವಾದ್ಯ, ಚಂಡೆವಾದ್ಯ, ಸಕಲ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಉತ್ಸವವನ್ನು ನಡೆಸಲಾ ಯಿತು. ಆಗಮಿಸಿದ ಸಹಸ್ರಾರು ಭಕ್ತರಿಗೂ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಿ.ಸಿ.ನಾಗರಾಜ್, ಐ.ರಾಜನ್, ಧನಸಿಂಗ್ ಸ್ವಾಮಿ, ಶ್ರೀನಿವಾಸಮೂರ್ತಿ, ನಟರಾಜನ್, ಈರಣ್ಣ, ನಾಗರಾಜ್, ಎ.ವಿ.ಚಂದ್ರಶೇಖರ್, ಚಂದ್ರನ್, ಮಣಿ ಕಂಠ, ಮಂಜುನಾಥ, ಕಾಟರಾಜ್, ರಜತ್, ಕುಮಾರ್, ಜವರಪ್ಪ ಹಾಜರಿದ್ದರು.

Translate »