ಕಾಫಿ ಮಂಡಳಿ ವಿಸ್ತರಕರಿಗೆ ಬೀಳ್ಕೊಡುಗೆ
ಕೊಡಗು

ಕಾಫಿ ಮಂಡಳಿ ವಿಸ್ತರಕರಿಗೆ ಬೀಳ್ಕೊಡುಗೆ

February 4, 2019

ಸೋಮವಾರಪೇಟೆ: ಇಲ್ಲಿನ ಕಾಫಿ ಮಂಡಳಿಯಲ್ಲಿ 35 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಇದೀಗ ನಿವೃತ್ತರಾದ ವಿಸ್ತರಕರಾಗಿದ್ದ ಡಿ.ಪಿ.ರಮೇಶ್ ಅವರನ್ನು ಬೀಳ್ಕೊಡಲಾಯಿತು.

ಇಲ್ಲಿನ ಕಾಫಿ ಮಂಡಳಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಹಾಗು ಸಿಬ್ಬಂದಿಗಳು ಸನ್ಮಾನಿಸಿದರು. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತ ಹಾಗು ಕಾಫಿ ಬೆಳೆಹಾನಿಯಾದ ಸಂದರ್ಭ ಸುಂಠಿಕೊಪ್ಪ, ಮಾದಾಪುರ ವಲಯದಲ್ಲಿ ಬೆಳೆಹಾನಿ ಸರ್ವೆ ಕಾರ್ಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ ಎಂದು ಹಿರಿಯ ಸಂಪರ್ಕಾಧಿಕಾರಿ ಮುರುಳಿಧರ್ ಶ್ಲಾಘಿಸಿದರು.

Translate »