ಆದಿವಾಸಿ ಮುಖಂಡ ಜೆ.ಕೆ.ರಾಮುಗೆ ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ
ಕೊಡಗು

ಆದಿವಾಸಿ ಮುಖಂಡ ಜೆ.ಕೆ.ರಾಮುಗೆ ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ

February 4, 2019

ಸಿದ್ದಾಪುರ: ಗಿರಿಜನ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೆ.ಕೆ.ರಾಮು ಅವರಿಗೆ ಸ್ವಾಮಿ ವಿವೇಕಾನಂದ ಸೇವಾ ಪ್ರಶಸ್ತಿ ಪುರಸ್ಕಾರ ಲಭಿಸಿದೆ.

ಚಾಮರಾಜನಗರ ಜಿಲ್ಲೆಯ ಬಿಳಿ ಗಿರಿರಂಗನ ಬೆಟ್ಟದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಜೆ.ಕೆ.ರಾಮು ಅವರ ಸಮಾಜ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪುರಸ್ಕಾರ ಮಾಡಿದ್ದಾರೆ.

ಗಿರಿಜನರ ಅಭಿವೃದ್ಧಿಗೆ ನಿರಂತರ ವಾಗಿ ಶ್ರಮಿಸುತ್ತಾ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಗುರುತಿ ಸಿಕೊಂಡು ಜನಾಂಗದ ಸಂಪ್ರದಾಯ, ಸಾಂಸ್ಕೃತಿಕ ತಂಡವನ್ನು ಮುನ್ನಡೆಸಿಕೊಂಡು ರಾಜ್ಯದ ವಿವಿಧೆಡೆ ಕಲಾವಿದರಾಗಿಯು ಸೇವೆ ಸಲ್ಲಿಸುತ್ತಿರುವ ಇವರು, ಇದೀಗ ಕರ್ನಾಟಕ ಆದಿವಾಸಿ ಅಭಿವೃದ್ಧಿ ಮಂಡಳಿಯ ನಾಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಗೌರವ ಅಧ್ಯಕ್ಷ ಡಾ.ಎಂ.ಜಡೇಗೌಡ ಸೇರಿದಂತೆ ಮತ್ತಿತರರು ರಾಮು ಅವರನ್ನು ಗೌರವಿಸಿದರು.

Translate »