ಧನ್ವಂತರಿ ರಸ್ತೆಯಿಂದ ಸಯ್ಯಾಜಿರಾವ್ ರಸ್ತೆಗೆ ಬಲತಿರುವಿಗೆ ಅವಕಾಶ  ನೀಡುವಂತೆ ಶಾಸಕ ನಾಗೇಂದ್ರ ಸಂಚಾರಿ ಪೊಲೀಸರಿಗೆ ಸಲಹೆ
ಮೈಸೂರು

ಧನ್ವಂತರಿ ರಸ್ತೆಯಿಂದ ಸಯ್ಯಾಜಿರಾವ್ ರಸ್ತೆಗೆ ಬಲತಿರುವಿಗೆ ಅವಕಾಶ ನೀಡುವಂತೆ ಶಾಸಕ ನಾಗೇಂದ್ರ ಸಂಚಾರಿ ಪೊಲೀಸರಿಗೆ ಸಲಹೆ

February 6, 2019

ಮೈಸೂರು: ನಗರದಲ್ಲಿ ಅತಿಹೆಚ್ಚು ಜನ-ವಾಹನ ದಟ್ಟಣೆಯ ಪ್ರದೇಶದಲ್ಲಿ ರುವ ಧನ್ವಂತರಿ ರಸ್ತೆ ಮತ್ತು ಸಯ್ಯಾಜಿ ರಾವ್ ರಸ್ತೆ ಕೂಡು ಸ್ಥಳದಲ್ಲಿ ವಾಹನಗಳು ಸಯ್ಯಾಜಿರಾವ್ ರಸ್ತೆಗೆ ಬಲ ತಿರುವು ತೆಗೆದುಕೊಳ್ಳಲು ತಕ್ಷಣದಿಂದಲೇ ಅವ ಕಾಶ ಕಲ್ಪಿಸಿರಿ. ಅಲ್ಲದೇ, ಕೆ.ಆರ್.ಆಸ್ಪತ್ರೆ ರಸ್ತೆ-ಸಯ್ಯಾಜಿರಾವ್ ರಸ್ತೆಯ ಎರಡೂ ಬದಿ ವಾಹನ ನಿಲುಗಡೆಗೆ ಅನುಮತಿ ನೀಡಿ ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ 41ರಲ್ಲಿ ಸೋಮವಾರ ಬೆಳಿಗ್ಗೆ ಪಾದಯಾತ್ರೆ ನಡೆಸಿ ದ್ದಾಗ ಸಾರ್ವಜನಿಕರ ಮನವಿ ಮೇರೆಗೆ ಶಾಸಕರು ಈ ನಿರ್ದೇಶನ ನೀಡಿದರು.

ಧನ್ವಂತರಿ ರಸ್ತೆ ದ್ವಿಪಥವಾಗಿಸಿದ್ದರೂ ಪ್ರಯೋಜನವಿಲ್ಲದಂತಾಗಿದೆ. ಧನ್ವಂತರಿ ರಸ್ತೆಯಲ್ಲಿ ಸಾಗುವ ವಾಹನಗಳು ಸಯ್ಯಾಜಿರಾವ್ ರಸ್ತೆ ಸೇರಬೇಕಾದರೆ ಕೂಡು ಸ್ಥಳದಲ್ಲಿ ಬಲಬದಿ ತಿರುವಿಗೆ ಅವಕಾಶವಿಲ್ಲವಾಗಿದೆ. ಪರಿಣಾಮ, ವಾಹನಗಳು ಆಯುರ್ವೇದಿಕ್ ಕಾಲೇಜು ವೃತ್ತ ಬಳಸಿಕೊಂಡೇ ಸಯ್ಯಾಜಿರಾವ್ ರಸ್ತೆಗೆ ಬರಬೇಕಾಗಿದೆ ಎಂದು ಸಾರ್ವಜ ನಿಕರು ಶಾಸಕರ ಗಮನ ಸೆಳೆದರು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಳ್ಳಿರಿ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಸಯ್ಯಾಜಿರಾವ್ ರಸ್ತೆ ಮತ್ತು ಕೆ.ಆರ್. ಆಸ್ಪತ್ರೆ ರಸ್ತೆಯ ಕೂಡು ಸ್ಥಳದಿಂದ ಗಣ ಪತಿ ದೇವಸ್ಥಾನವರೆಗಿನ ರಸ್ತೆ ಅಗಲವಾಗಿ ದ್ದರೂ ವಾಹನ ನಿಲುಗಡೆಗೆ ಒಂದೇ ಬದಿ ಅವಕಾಶವಿದೆ. ಎರಡೂ ಕಡೆ ವಾಹನ ನಿಲುಗಡೆಗೆ ಅವಕಾಶ ಮಾಡಿ ಕೊಡಿ ಎಂದು ಜನರು ಮನವಿ ಮಾಡಿ ದ್ದಕ್ಕೆ ಶಾಸಕರು, ತಕ್ಷಣದಿಂದಲೇ ರಸ್ತೆಯ ಎರಡೂ ಬದಿ ವಾಹನ ನಿಲುಗಡೆ ಕ್ರಮ ಜರುಗಿಸಿ. ಕೆ.ಆರ್.ಆಸ್ಪತ್ರೆ ರಸ್ತೆಯ ಕೆಲವೆಡೆ ಮ್ಯಾನ್‍ಹೋಲ್ ಎತ್ತರಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ವಾರ್ಡ್‍ನ ಹಲವೆಡೆ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದರೂ, ಅಗೆದಿದ್ದ ರಸ್ತೆಯನ್ನು ಸರಿಪಡಿಸಿ ಮರು ಡಾಂಬರೀಕರಣ ಮಾಡದೇ ಇರುವುದಕ್ಕೆ ಸಿಟ್ಟಾದ ಶಾಸಕರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. 2-3 ದಿನದಲ್ಲಿ ಡಾಂಬರೀ ಕರಣ ಆರಂಭಿಸುವಂತೆ ಆದೇಶಿಸಿದರು.

ದೇವರಾಜ ಅರಸು ರಸ್ತೆ ಹಿಂಭಾಗದ ರಸ್ತೆ, ಸೀಬಯ್ಯ ರಸ್ತೆ, ಕೆ.ಟಿ.ಸ್ಟ್ರೀಟ್, ಕೆ.ಆರ್.ಆಸ್ಪತ್ರೆ ಭಾಗದ ಹಲವು ಗಲ್ಲಿಗ ಳಲ್ಲಿನ ರಸ್ತೆಗಳ ಕಾಂಕ್ರೀಟೀಕರಣ, ಶಿಥಿಲ ವಿದ್ಯುತ್ ಕಂಬಗಳ ಬದಲಾವಣೆ, 50 ಲಕ್ಷ ರೂ. ವೆಚ್ಚದಲ್ಲಿ ನಾರಾಯಣಶಾಸ್ತ್ರಿ ರಸ್ತೆ ಶಿವರಾಂಪೇಟೆ ರಸ್ತೆ ಜಂಕ್ಷನ್‍ನಿಂದ ದೇವರಾಜ ಮಾರುಕಟ್ಟೆ ರಸ್ತೆವರೆಗಿನ ಚರಂಡಿಯ ಮರು ನಿರ್ಮಾಣ, ಆನೇ ಸಾರೋಟ್ ಬೀದಿಯಲ್ಲಿ ಒಳಚರಂಡಿ ಕೊಳವೆಗಳ ಬದಲಾವಣೆ ಕಾಮಗಾರಿ ಕೈಗೊಳ್ಳು ವುದಾಗಿಯೂ ಶಾಸಕರು ಪ್ರಕಟಿಸಿದರು.

ಹೆಂಚು, ಶೀಟ್ ಮನೆಗಳಲ್ಲಿರುವ ಬಡಜನರು, ಸುಭದ್ರವಾದ ಮನೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿದಾಗ, ಇವರಿಗೆ ಯಾವುದಾದರೂ ಯೋಜನೆ ಯಡಿ ಮನೆ ನಿರ್ಮಿಸಿಕೊಡಲು ಅವಕಾಶವಿದ್ದರೆ ಅರ್ಜಿ ಸ್ವೀಕರಿಸಿ ಎಂದು ವಸತಿ ಯೊಜನೆಗಳ ಅಧಿಕಾರಿಗಳಿಗೆ ತಿಳಿಸಿದರು. ದೇವರಾಜ ಪೊಲೀಸ್ ಠಾಣೆ ಕಟ್ಟಡ ಶಿಥಿಲವಾಗಿರುವುದನ್ನು ಗಮನಿಸಿದ ಶಾಸಕರು, ನವೀಕರಣ ಅಥವಾ ಹೊಸ ಕಟ್ಟಡ ನಿರ್ಮಾಣ ಸಂಬಂಧ ಲೋಕೋಪಯೋಗಿ ಇಲಾಖೆ ಹಾಗೂ ಗೃಹ ಸಚಿವರ ಗಮನಕ್ಕೆ ತರು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ವಾರ್ಡ್ ನಂ.41ರ ಸದಸ್ಯ ಎಂ.ಡಿ.ನಾಗರಾಜು, ಅಭಿವೃದ್ಧಿ ಅಧಿಕಾರಿ ಹೆಚ್.ನಾಗರಾಜು, ವಲಯ ಆಯುಕ್ತ ಮಹೇಶ್, ಎಇ ಕವಿತಾ, ನೀರಾವರಿ ವಿಭಾ ಗದ ಎಇಇ ಹರ್ಷಿತಾ, ಒಳಚರಂಡಿ ವಿಭಾಗದ ಎಇ ರಂಜಿತ್‍ಕುಮಾರ್, ಕ್ಷೇತ್ರದ ಹರ್ಷ, ಬದರಿ ಪ್ರಸಾದ್, ಮಂಜುನಾಥ್, ಚಿಕ್ಕವೆಂಕಟು, ಸೋಮಶೇಖರರಾಜು, ಸಚಿನ್ ಗೌಡ ಮತ್ತಿತರರು ಹಾಜರಿದ್ದರು.

Translate »