ಮೈಸೂರು: ಕಾನೂನು ಯಾವಾ ಗಲೂ ಸಮಾಜ ಸೇವಾಮುಖಿಯಾಗಿರಬೇಕು. ಸಮಾಜ ದಿಂದ ಪಡೆದದ್ದನ್ನು ನಾವು ಸಮಾಜಕ್ಕೆ ಹಿಂದಿರುಗಿಸ ಬೇಕಾದ ಅಗತ್ಯತೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಅಶೋಕ್ ಜಿ.ನಿಜಗಣ್ಣನವರ್ ಇಂದಿಲ್ಲಿ ಬಲವಾಗಿ ಪ್ರತಿಪಾದಿಸಿದ್ದಾರೆ.
ಮೈಸೂರಿನ ಕುವೆಂಪುನಗರದ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಚೆನ್ನೈನ ಸುರಾನ ಮತ್ತು ಸುರಾನ ಅಂತಾ ರಾಷ್ಟ್ರೀಯ ಕಾನೂನು ಸಂಸ್ಥೆ ಸಹಯೋಗದಲ್ಲಿ ಶನಿವಾರ ಆಯೋಜಿಸಲಾಗಿದ್ದ 17ನೇ ರಾಷ್ಟ್ರೀಯ ಅಣಕು ನ್ಯಾಯಾ ಲಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಕಾನೂನು ಅಧ್ಯಯನಗಳು ಹೈಟೆಕ್ ಆಗುತ್ತಿವೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ಶೈಕ್ಷಣಿಕ ಕಲಿಕೆಯು ಸುಲಭವಾಗುತ್ತಿದೆ ಎಂದರು.
ಭಾರತದ ಯುವ ನ್ಯಾಯವಾದಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ವಿಶ್ಲೇಷಿಸಿದ ಅವರು, ಕಾನೂನು ಸರಿ, ತಪ್ಪುಗಳ ಬಗ್ಗೆ ಅರಿವು ಮೂಡಿಸಲು ಶಿಕ್ಷಕರಿಗೆ ಸಲಹೆ ನೀಡಿ ದರು. ಇಂದು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸು ತ್ತಿದ್ದೇವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿಯೇ ಸಮಸ್ಯೆ ಗಳು ಹೆಚ್ಚಾಗಿವೆ. ಅವುಗಳಿಗೆ ಪರಿಹಾರ ಕಂಡು ಕೊಳ್ಳುವಲ್ಲಿ ನ್ಯಾಯಾಲಯಗಳ ಪಾತ್ರ ಹೆಚ್ಚಿನದ್ದಾಗಿದೆ ಎಂದರು.
ಇಂದು ಉತ್ತಮ ವೇತನ ಪ್ಯಾಕೇಜ್ ಒದಗಿಸುವ ಸಾಂಸ್ಥಿಕ ಜಗತ್ತಿನತ್ತ ತೆರಳಲು ಬಯಸುತ್ತಿದ್ದಾರೆ. ಹಣಕ್ಕಿಂತ ಸಮಾಜ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಜೆಎಸ್ಎಸ್ ಕಾನೂನು ಕಾಲೇಜಿನ ಸಿಇಓ ಪ್ರೊ.ಕೆ. ಸುರೇಶ್ ಸ್ವಾಗತಿಸಿದರು. ಜೆಎಸ್ಎಸ್ ಮಹಾವಿದ್ಯಾ ಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿ.ಜಿ.ಬೆಟಸೂರ್ ಮಠ್ ಅಧ್ಯಕ್ಷತೆ ವಹಿಸಿದ್ದರು. ಚೆನ್ನೈ ಎಸ್ಎಸ್ಐಎನ ಡಾ. ಎಸ್.ರವಿಚಂದ್ರನ್, ಜೆಎಸ್ಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ನಟರಾಜ್ ಉಪಸ್ಥಿತರಿದ್ದರು.
17ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ ಯಲ್ಲಿ ಒಂಬತ್ತು ಕಾನೂನು ಕಾಲೇಜುಗಳು ಸೇರಿದಂತೆ ದೇಶದ ವಿವಿಧೆಡೆಯಿಂದ 30 ತಂಡಗಳು ಭಾಗವಹಿಸಿವೆ. ಫೆ.10ರಂದು ಸ್ಪರ್ಧೆ ಸಮಾರೋಪಗೊಳ್ಳಲಿದ್ದು, ಸಂಜೆ 5 ಗಂಟೆಗೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಸಮಾ ರೋಪ ಭಾಷಣ ಮಾಡಲಿದ್ದಾರೆ.