ಮೈಸೂರು: ಡೆಂಗ್ಯೂ ಕಾಯಿಲೆ ದೂರದ ಕುಕ್ಕರಳ್ಳಿ ಕೆರೆಯಲ್ಲೋ, ನೀರಿನಲ್ಲೋ ಉದ್ಭವ ವಾಗುವುದಿಲ್ಲ. ಅದು ನಮ್ಮ ನಡುವೆಯೇ ಹರಡುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಅಗತ್ಯ ಎಂದು ಮೈಸೂರು ವಿವಿ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಎಂ.ಎಸ್ ಬಸವರಾಜು ಹೇಳಿದರು.
ಕರ್ನಾಟಕ ಕಿಡ್ನಿ ಹೆಲ್ತ್ ಫೌಂಡೇಷನ್ ಟ್ರಸ್ಟ್, ಮಹಾ ಜನ ಪ್ರಥಮ ದರ್ಜೆ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ಲಿಂಗ, ಸಂಸ್ಕøತಿ, ಸಾರ್ವಜನಿಕರ ಆರೋಗ್ಯ -ಉದಯೋನ್ಮುಖ ದೃಷ್ಟಿಕೋನಗಳು’ ಎಂಬ ವಿಷಯದ ಎರಡು ದಿನಗಳÀ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತ ನಾಡಿದರು. ಡೆಂಗೆ ಹರಡಲು ನಾವೇ ಕಾರಣ. ಹಾಗಾಗಿ ಸ್ವಚ್ಛತೆಯ ಕಡೆ ಗಮನ ಹರಿಸಬೇಕಿದೆ. ನೀರು ಒಂದೆಡೆ ನಿಂತು ಮಲಿನವಾದರೆ ಈಡೀಸ್ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತದೆ ಎಂದು ಗಮನ ಸೇಳೆದರು.
ಮೈಸೂರು ವಿವಿ ಸಿಎಸ್‍ಎಸ್‍ಇಐಪಿ ಕೇಂದ್ರದ ಡಾ. ಡಿ.ಸಿ.ನಂಜುಂಡ ಮಾತನಾಡಿದರು. ಯುಜಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಪ್ರೊ. ಮಿಡತಲ ರಾಣಿ, ಮಹಾಜನ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ವಿಜಯಲಕ್ಷ್ಮಿ ಮುರುಳೀಧರ್, ಪ್ರಾಣಿಶಾಸ್ತ್ರ ವಿಭಾಗದ ಡಾ.ಎಸ್.ಆರ್.ರಮೇಶ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಭಾರ್ಗವಿ ಡಿ.ಹೆಮ್ಮಿಗೆ ಉಪಸ್ಥಿತರಿದ್ದರು.