ಮೈಸೂರು: ಮೈಸೂರಿನ ಟೆರೇಷಿಯನ್ ಕಾಲೇಜು ಮತ್ತು ಜನಚೇತನ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಫೆ.16ರಂದು ರೈತರಿ ಗಾಗಿ ‘ಔಷಧಿ ಮತ್ತು ಸುಗಂಧ ಬೆಳೆಗಳ ಸುಧಾರಿತ ಬೇಸಾಯ, ಸಂಸ್ಕರಣೆ ಹಾಗೂ ಅದರ ಮಾರುಕಟ್ಟೆಯ ಉಪಯುಕ್ತತೆ’ ಕುರಿತ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾ ಗಾರ ಆಯೋಜಿಸಲಾಗಿದೆ. ಕಾಲೇಜಿನ ಪ್ರಾಧ್ಯಾಪಕ ಡಾ.ವಿನಯ್ ವಿ.ರಾಘವೇಂದ್ರ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕೇರಳ ಅರಣ್ಯ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಅಂದು ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯಾಗಾರ ನಡೆಯಲಿದೆ. ಕರ್ನಾಟಕ ರಾಜ್ಯವು ಹಲವಾರು ಪ್ರಮುಖ ವಾಣಿಜ್ಯ ಔಷಧೀಯ ಮತ್ತು ಸುಗಂಧ ಬೆಳೆÉಗಳ ತವರೂರು. ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಔಷಧೀಯ ಮತ್ತು ಸುಗಂಧ ಬೆಳೆಗಳ ಬೇಡಿಕೆ ಹೆಚ್ಚುತ್ತಿದೆ. ಈ ಬೆಳೆಗಳ ಬೇಸಾಯ, ಸಂಸ್ಕರಣೆ ಹಾಗೂ ಅದರ ಮಾರುಕಟ್ಟೆಯ ಬಗ್ಗೆ ಮಾಹಿತಿ ಮತ್ತು ತಾಂತ್ರಿಕ ಜ್ಞಾನವನ್ನು ತಲುಪಿಸುವ ಉದ್ದೇಶದಿಂದ ಈ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.
ಔಷಧಿ ಮತ್ತು ಸುಗಂಧ ದ್ರವ್ಯಗಳಾದ ಲೆಮನ್ ಗ್ರಾಸ್, ಪಾಮರೋಜ, ತುಳಸಿ, ಅಲೊವೇರಾ, ಅಶ್ವಗಂಧ ಇನ್ನಿತರ ಹಲವು ಬೆಳೆಗಳ ಬಗ್ಗೆ ನುರಿತ ವಿಜ್ಞಾನಿಗಳು ಉಪನ್ಯಾಸ ನೀಡುವರು. ಸಂಶೋಧಕರು, ಪ್ರಗತಿಪರ ರೈತರು, ವಿಜ್ಞಾನಿಗಳು ಸೇರಿದಂತೆ 100 ಮಂದಿ ಭಾಗವಹಿಸಲಿದ್ದಾರೆ. ನೋಂದಣಿ ಉಚಿತ. ಆಸಕ್ತ ರೈತರು ಇದರ ಸದುಪ ಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು. ಮಾಹಿತಿಗೆ ಮೊ- 9916901194 ಸಂಪರ್ಕಿಸಬಹುದು. ಗೋಷ್ಠಿಯಲ್ಲಿ ಡಾ.ಶಂಕರ್, ಜನಚೇತನ ಟ್ರಸ್ಟ್‍ನ ವೆಂಕಟೇಶ್ ಇದ್ದರು.